ಪತ್ನಿಗೆ ನಂ 1 ಗಿಫ್ಟ್ ನೀಡಿದ ಮಾಜಿ ಡಿಜಿಪಿ ರಾಥೋರ್

ರುಚಿಕಾ ಗಿರೋತ್ರಾ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಹರ್ಯಾಣದ ಮಾಜಿ ಡಿಜಿಪಿ ಎಸ್ ಪಿಎಸ್ ರಾಥೋಡ್ ತನ್ನ ವಕೀಲೆ ಪತ್ನಿಗಾಗಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಆ ಕಾರಿಗೆ ದುಬಾರಿ ಫ್ಯಾನ್ಸಿ ನಂಬರ್ ಪ್ಲೇಟಿನ ಉಡುಗೊರೆ ನೀಡಿದ್ದಾರೆ.

ಮಂಗಳವಾರ(ಏ 25)ರಂದು ಚಂಡಿಗಢದಲ್ಲಿ ಆರ್‌ಟಿಒ ನೋಂದಣಿ ಸಂಖ್ಯೆ ಹರಾಜು ಮಾಡಿತ್ತು. ಹರಾಜಿನಲ್ಲಿ ರಾಥೋಡ್ 9 ಲಕ್ಷ 5 ಸಾವಿರದ ಒಂದು ರುಪಾಯಿ ನೀಡಿ ಸಿಎಚ್ 01 ಎಎಂ 0001 ಫ್ಯಾನ್ಸಿ ಸಂಖ್ಯೆ ಪಡೆದಿದ್ದಾರೆ. 0001 ಸಂಖ್ಯೆ ಪಡೆಯಲು ಹಲವು ಜನರು ಪ್ರಯತ್ನಿಸಿದರು.

"ನನ್ನ ಪತ್ನಿ ನಂಬರ್ ಒನ್ ಅದಕ್ಕಾಗಿ ನಾನು ಒಂದು ರುಪಾಯಿ ಜಾಸ್ತಿ ನೀಡಿ ಬಿಡ್ ಮಾಡಿದೆ" ಎಂದು ರಾಥೋಡ್ ಹೇಳಿದ್ದಾರೆ. ರುಚಿಕಾ ಗಿರೋತ್ರಾ ಅತ್ಯಾಚಾರ ಯತ್ನ ಆರೋಪದಲ್ಲಿ ಸಿಕ್ಕ ರಾಥೋಡ್ ಜೈಲಿನಿಂದ ಹೊರಬರಲು ವಕೀಲೆ ಪತ್ನಿ ಸಾಥ್ ನೀಡಿದ್ದರು.

1990ರಲ್ಲಿ ರುಚಿಕಾ ಅತ್ಯಾಚಾರ ಯತ್ನ ಪ್ರಕರಣ ನಡೆದಿತ್ತು. 2010ರ ಮೇ ತಿಂಗಳಿನಿಂದ ನವೆಂಬರ್ ವರೆಗೆ ರಾಥೋಡ್ ಜೈಲು ಶಿಕ್ಷೆ ಅನುಭವಿಸಿದ್ದಾರೆ. ನವೆಂಬರ್ 10ರಂದು ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು. ವಿಚಾರಣೆ ಇನ್ನೂ ನಡೆಯುತ್ತಿದೆ.

ಫ್ಯಾನ್ಸಿ ನಂಬರ್ ಶೋಕಿ: ಮಂತ್ರಿಗಳು, ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಮುಖ ವ್ಯಕ್ತಿಗಳಿಗೆ ಇಂತಹ ಕಾರು ನಂಬರ್ ಶೋಕಿ ಜಾಸ್ತಿ. ಅದು ಮೊಬೈಲ್ ನಂಬರ್ ಆಗಿರಬಹುದು. ವಾಹನದ ರಿಜಿಸ್ಟ್ರೇಷನ್ ನಂಬರ್ ಆಗಿರಬಹುದು. ತಮಗೆ ಇಷ್ಟವಾದ ಸಂಖ್ಯೆ ಪಡೆಯಲು ಎಷ್ಟು ದುಡ್ಡು ಬೇಕಾದರೂ ಸುರಿಯಲು ಇವರು ಸಿದ್ಧರಿರುತ್ತಾರೆ.

More from DriveSpark

Article Published On: Thursday, April 26, 2012, 16:40 [IST]
English summary
Former Haryana DGP SPS Rathore famous for the Ruchika Girhotra molestation case has bought a car number plate ending with 0001 by paying Rs.9 lakhs in an auction. The number plate will be a gift to his wife who has bought a new Mercedes Benz car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+