ಚಾಲಕರೇ ಎಚ್ಚರ; ಇಂದು ಹಾರ್ನ್ ರಹಿತ ಸೋಮವಾರ
ಹೆಚ್ಚುತ್ತಿರುವ ಶಬ್ದ ಮಾಲಿನ್ಯ ತಡೆಯಲು ಬೆಂಗಳೂರು ನಗರದ್ಯಾಂತ ಪ್ರತಿ ಸೋಮವಾರ "ಹಾರ್ನ್ ನಿಷೇಧಿತ ದಿನ"ವಾಗಿ ಆಚರಿಸಲಾಗುತ್ತಿದೆ. ಇದರಂತೆ ಎಲ್ಲ ಚಾಲಕರು ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಸಲಹೆ ನೀಡಿದೆ.
ವಾರದ ಮೊದಲ ದಿನವಾದ ಸೋಮವಾರ ಅಂದರೆ ಸಹಜವಾಗಿಯೇ ವಾಹನ ದಟ್ಟಣೆ ಜಾಸ್ತಿಯಾಗಿರುತ್ತದೆ. ಕಚೇರಿ ಕಲಾಪಕ್ಕೆ ತೆರಳುವವರು ಸಮಯಕ್ಕೆ ಸರಿಯಾಗಿ ತಲುಪುದಂತೂ ಕಷ್ಟಕರ. ಹಾಗಿರುವಾಗ ಟ್ರಾಫಿಕ್‌ಗಳಲ್ಲಿ ವಾಹನ ಸವಾರರು ಅನಾವಶ್ಯಕ ಶಬ್ದ ಮಾಲಿನ್ಯ ತಡೆಯುವಂತೆ ಸೂಚಿಸಲಾಗಿದೆ.
"ಶುಭೋಧಯ.., ಇಂದು ಸೋಮವಾರ, ವಾರದ ಮೊದಲ ದಿನ. ಹೆಚ್ಚುತ್ತಿರುವ ಶಬ್ದ ಮಾಲಿನ್ಯ ತಡೆಯುವ ಸಲುವಾಗಿ "ಹಾರ್ನ್ ನಿಷೇಧಿತ ದಿನ" ಎಂದು ಘೋಷಿಸಿದ್ದು ಇದನ್ನು ಯಶಸ್ವಿಗೊಳಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ... ಅನಾವಶ್ಯಕ ಹಾರ್ನ್ ತಡೆಯಬಹುದಾದ ಸಂಧರ್ಭಗಳು,
1) ಪಾದಚಾರಿಗಳು ರಸ್ತೆ ದಾಟುವ ವೇಳೆ
2) ಕೆಂಪು ದೀಪದಿಂದ ಹಸಿರು ದೀಪಕ್ಕೆ ಬದಲಾದ ತಕ್ಷಣ
3) ಸಂಚಾರ ದಟ್ಟಣೆ ಸಮಯದಲ್ಲಿ ವಾಹನ ಸಂಚಾರ ನಿಧಾಗತಿಯಲ್ಲಿರುವುದು ಅರಿತು ಹಾರ್ನ್ ಮಾಡುವುದು..."
ಹೆಚ್ಚುತ್ತಿರುವ ಶಬ್ದ ಮಾಲಿನ್ಯ ತಡೆಯಲು ಪ್ರತಿ ಸೋಮವಾರವನ್ನು ಹಾರ್ನ್ ರಹಿತ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದರಂತೆ ವಾಹನ ಚಾಲಕರು ಸಂಚಾರಿ ನಿಯಮವನ್ನು ಪಾಲಿಸುವಂತೆ ಡ್ರೈವ್ ಸ್ಪಾರ್ಕ್ ಕೂಡಾ ಮನವಿ ಮಾಡುತ್ತಿದೆ.
ಇವನ್ನೂ ಓದಿ: ವಾಹನ ಸವಾರರೇ ಎಚ್ಚರ ಇಂದು ಹಾರ್ನ್ ಮಾಡಬೇಡಿ


Click it and Unblock the Notifications









