ಹೊಗೆ ಸೂಸುವ ವಾಹನಗಳಿಗೆ ಹೊಗೆ ಹಾಕುವತ್ತ ಸರಕಾರ
ಉಳಿದ ದೇಶಗಳಿಗೆ ಹೋಲಿಸಿದರೆ ವಾಹನ ಹೊರಸೂಸುವ ಇಂಗಾಲ ಇತ್ಯಾದಿಗಳ ಕುರಿತು ಭಾರತ ಹೆಚ್ಚು ಕಠಿಣವಾಗಿ ವರ್ತಿಸುತ್ತಿಲ್ಲ. ಈಗ ದೇಶದ ಹದಿನೇಳು ನಗರಗಳು ಮಾತ್ರ ಈಗ BS IV ಎಮಿಷನ್ ನಿಯಮಗಳನ್ನು ಪಾಲಿಸುತ್ತಿವೆ. ಪಟ್ಟಣಗಳು ಮತ್ತು ಸಣ್ಣಪಟ್ಟಣಗಳಿಗಾಗಿ ಕಾರು ಕಂಪನಿಗಳು ಈಗಲೂ BS III ವಾಹನಗಳನ್ನು ಉತ್ಪಾದಿಸುತ್ತಿವೆ.
ಪರಿಸರಕ್ಕೆ ಕಡಿಮೆ ಮಾಲಿನ್ಯ ಮಾಡುವ ವಾಹನಗಳು ಅಂದರೆ ಬಿಎಸ್ 4 ವಾಹನಗಳನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಲು ಸರಕಾರ ಯೋಜಿಸುತ್ತಿದೆ. ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಸರಕಾರ ಈ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ. 2015ಕ್ಕೆ ಬಿಎಸ್ 4 ವಾಹನಗಳನ್ನು ಸುಮಾರು 50 ನಗರಗಳಿಗೆ ವಿಸ್ತರಿಸುವ ಗುರಿಯನ್ನು ಸರಕಾರ ಹೊಂದಿದೆ.
ಬಿಎಸ್4 ಅಳವಡಿಸಲು ನಗರಗಳಿಗೆ ಬೇಕಾದ್ದು ಸೂಕ್ತವಾದ ಇಂಧನ. ತೈಲಕಂಪನಿಗಳು ಸ್ವಚ್ಛವಾದ ತೈಲ ಪೂರೈಸಬೇಕಾಗುತ್ತದೆ. ಬಿಎಸ್4 ಮಾನದಂಡದ ತೈಲಗಳನ್ನು 50ಕ್ಕೂ ಹೆಚ್ಚು ನಗರಗಳಿಗೆ ಪೂರೈಸಲು ನಮ್ಮಿಂದ ಸಾಧ್ಯವಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









