ಮಹೀಂದ್ರ ಕಾರುಗಳೆಂದರೆ ಕಳ್ಳರಿಗೆ ತುಂಬ ಇಷ್ಟ

ಹೌದು, ಈ ಸುದ್ದಿ ಓದಲು ಕುತೂಹಲಕಾರಿ ಅನಿಸಿದರೂ ಇದು ಅಷ್ಟೇ ಅಚ್ಚರಿಯ ಸಹಿತ ಆಘಾತಕಾರಿ ಸ್ಟೋರಿ. ಇತ್ತೀಚೆಗಿನ ದಿನಗಳಲ್ಲಿ ಕಾರು ಹೈಜಾಕ್ ಪ್ರಕರಣ ಹೆಚ್ಚಾಗುತ್ತಲೇ ಇವೆ. ಹಾಗಾಗಿ ಎಲ್ಲ ಕಾರು ಮಾಲಿಕರು ಸಹ ನಿಮ್ಮ ಕಾರು ಎಲ್ಲ ಸುರಕ್ಷಣಾ ಮಾನದಂಡದಲ್ಲಿ ಕೆಲಸ ಮಾಡುತ್ತಿದ್ದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು..!

ಮುಂಬೈ ಪೊಲೀಸರ ಪ್ರಕಾರ, ಕಾರು ಅಪಹರಣ ಪ್ರಕರಣದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. 2011ನೇ ಸಾಲಿನಲ್ಲಿ 1000ಕ್ಕಿಂತಲೂ ಹೆಚ್ಚು ಕಾರುಗಳು ಹೈಜಾಕ್ ಆಗಿವೆಯಂತೆ. ದೇಶದಲ್ಲಿ ಪ್ರಮುಖವಾಗಿಯೂ ಎಸ್‌ಯೂವಿ ತಂತ್ರಜ್ಞಾನದ ಕಾರು ಅಭಿವೃದ್ಧಪಡಿಸುತ್ತಿರುವ ಜನಪ್ರಿಯ ಕಾರು ತಯಾರಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಕಂಪೆನಿಯ ಕಾರುಗಳು ಇದರಲ್ಲಿ ಹೆಚ್ಚಾಗಿ ಕಂಡುಬಂದಿವೆ.

ಅಂದ ಹಾಗೆ ಕಳ್ಳರಲ್ಲೂ ಇದೇನಾ ಕಾರು ಟೇಸ್ಟ್ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತಿವೆ. ಯಾತಕ್ಕಾಗಿ ಮಹೀಂದ್ರ ಆಂಡ್ ಮಹೀಂದ್ರ ಕಾರುಗಳನ್ನೇ ಕಳ್ಳರು ಹೆಚ್ಚಾಗಿ ಹೈಜಾಕ್ ಮಾಡುತ್ತಾರೆ. ಇದಕ್ಕೆ ಸೇಫ್ಟಿ ಮೆಷರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಲ್ಲವಾದ್ದಲ್ಲಿ ಮಾಲಿಕರು ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎನ್ನುವುದು ಪೊಲೀಸರ ವಾದ.

ಮುಂಬೈನಲ್ಲಿ 2011ನೇ ಸಾಲಿನಲ್ಲಿ ಒಟ್ಟು 1,540 ಕಾರುಗಳು ಅಪಹರಣಕ್ಕೀಡಾಗಿದೆ. ಇದರಲ್ಲಿ ಮಹೀಂದ್ರ ಸ್ಕೊರ್ಪಿಯೊ ಅತಿ ಹೆಚ್ಚು ಅಂದರೆ 133 ಕಾರುಗಳು ಕಳವಿಗೀಡಾಗಿದೆ. ಹಾಗಾಗಿ ಮಹೀಂದ್ರ ಸೇಫ್ಟಿ ಮೆಷರ್ ಬಗ್ಗೆ ಅನುಮಾನ ಮೂಡುವುದು ಸಹಜ.

ಮಹೀಂದ್ರ ಬಳಿಕ ಚೆವ್ರೊಲೆಟ್ ಕಾಪ್ಟಿಯಾ, ಹ್ಯುಂಡೈ ಸಾಂಟ್ರೊ ಹಾಗೂ ಟಾಟಾ ಇಂಡಿಕಾ ಬ್ರಾಂಡ್‌ಗಳು ಸಹ ಕಳ್ಳರ ಅಚ್ಚುಮೆಚ್ಚಿನ ಕಾರುಗಳಾಗಿವೆ. ಹಾಗಾಗಿ ಕಾರು ಹೈಜಾಕ್ ಆದಲ್ಲಿ ಆದಷ್ಟು ಬೇಗನೇ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಮನವಿ ಮಾಡಲಾಗಿದೆ.

ಮಹೀಂದ್ರ ಸ್ಕೊರ್ಪಿಯೊ

ಮಹೀಂದ್ರ ಸ್ಕೊರ್ಪಿಯೊ

ಕಳ್ಳರ ಹಿಟ್‌ಲಿಸ್ಟ್‌ನಲ್ಲಿ ಮಹೀಂದ್ರ ಸ್ಕೊರ್ಪಿಯೊ ಮುಂಚೂಣಿಯಲ್ಲಿ ಇದ್ದು, ಕಳೆದ ಸಾಲಿನಲ್ಲಿ 133 ಕಾರುಗಳನ್ನು ಹೈಜಾಕ್ ಮಾಡಲಾಗಿದೆ. ಇದು 2010ರಲ್ಲಿ 148 ಆಗಿತ್ತು.

ಮಹೀಂದ್ರ ಬುಲೆರೊ

ಮಹೀಂದ್ರ ಬುಲೆರೊ

ಮುಂಬೈನಲ್ಲಿ ಅತಿ ಹೆಚ್ಚು ಕಾರುಗಳು ಹೈಜಾಕ್ ಆದ ಪೈಕಿ ಮಹೀಂದ್ರ ಬುಲೆರೊ ಎರಡನೇ ಸ್ಥಾನದಲ್ಲಿದೆ.2010ರಲ್ಲಿ 79 ಬುಲೆರೊ ಕಾರುಗಳನ್ನು ಅಪಹರಿಸಲಾಗಿತ್ತಾದರೆ 2011ರಲ್ಲಿ ಈ ಸಂಖ್ಯೆ 106ಕ್ಕೆ ಏರಿಕೆಯಾಗಿತ್ತು.

ಟಾಟಾ ಇಂಡಿಕಾ

ಟಾಟಾ ಇಂಡಿಕಾ

2010ರಲ್ಲಿ ಟಾಟಾ ಇಂಡಿಕಾ ಹೈಜಾಕ್ ಸಂಖ್ಯೆ 67

2011ರಲ್ಲಿ ಟಾಟಾ ಇಂಡಿಕಾ ಹೈಜಾಕ್ ಸಂಖ್ಯೆ 61

ಹ್ಯುಂಡೈ ಸಾಂಟ್ರೊ

ಹ್ಯುಂಡೈ ಸಾಂಟ್ರೊ

ಹ್ಯುಂಡೈ ಬ್ರಾಂಡ್‌ ಗಮನಿಸಿದಾಗ ಸಣ್ಣ ಕಾರು ಆದ ಸಾಂಟ್ರೊ ಅತಿ ಹೆಚ್ಚು ಹೈಜಾಕ್ ಆಗಿವೆ. 2010ಕ್ಕೆ (83) ಹೋಲಿಸಿದಾಗ 2011ರಲ್ಲಿ 106 ಕಾರುಗಳು ಕಳವಿಗೀಡಾಗಿವೆ.

ಚೆವ್ರೊಲೆಟ್ ತವೆರಾ

ಚೆವ್ರೊಲೆಟ್ ತವೆರಾ

2010ರಲ್ಲಿ ಚೆವ್ರೊಲೆಟ್ ತವೆರಾ ಹೈಜಾಕ್ ಸಂಖ್ಯೆ- 67

2011ರಲ್ಲಿ ಚೆವ್ರೊಲೆಟ್ ತವೆರಾ ಹೈಜಾಕ್ ಸಂಖ್ಯೆ- 106

More from DriveSpark

Article Published On: Tuesday, October 16, 2012, 10:27 [IST]
English summary
Car stolen is always a big problem. Now according to the Mumbai Police, the Mahindra Scorpio is the most stolen car in Mumbai for 2011. Here we are giving, which are most stolen cars in Mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+