ಹಬ್ಬದ ಸೀಸನ್‌ ಬುಕ್ಕಿಂಗ್ ಭರಾಟೆ; ಮಾರುತಿ, ಕ್ವಾಂಟೊ ಮುಂದು

ಹಬ್ಬದ ಸಂಭ್ರಮ ಜೋರಾಗಿರುವಂತೆಯೇ ಕಾರು ಮಾರುಕಟ್ಟೆಯಲ್ಲೂ ಬುಕ್ಕಿಂಗ್ ಭರಾಟೆ ಜೋರಾಗಿಯೇ ಸಾಗುತ್ತಿದೆ. ಇದರಂತೆ ಇತರೆಲ್ಲ ಕಾರುಗಳನ್ನು ಹಿಮ್ಮೆಟ್ಟಿಸಿರುವ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿಯ ಆಲ್ಟೊ 800, ಗರಿಷ್ಠ 17,000 ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ.

ಪೆಟ್ರೋಲ್ ಎಂಜಿನ್ ಸಣ್ಣ ಕಾರು ಆಗಿರುವ ಹೊರತಾಗಿಯೂ ಮಾರುತಿ ಗ್ರಾಹಕರ ಅಚ್ಚುಮೆಚ್ಚಿನ ಕಾರು ಎನಿಸಿಕೊಂಡಿದೆ. ಇದರ ಬೆನ್ನಲ್ಲೇ ಇರುವ ಡೀಸೆಲ್ ಎಂಜಿನ್ ಮಹೀಂದ್ರ ಕ್ವಾಂಟೊ ಎಸ್‌ಯುವಿ 6,200 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಆದರೆ ಆಲ್ಟೊಗೆ ಹೋಲಿಸಿದಾಗ ಕ್ವಾಂಟೊ ತುಂಬಾನೇ ಹಿಂದಿದೆ.

ಇನ್ನುಳಿದುರವಂತೆಯೇ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಪ್ರೀಮಿಯಂ ಎಸ್‌ಯುವಿ ಕಾರು ಬುಕ್ಕಿಂಗ್‌ನಲ್ಲಿ ಶತಕದ ಗಡಿ ದಾಟಿದೆ. ಮತ್ತೊಂದೆಡೆ ಎರಡು ತಿಂಗಳ ಹಿಂದೆಯೇ ಆರಂಭಿಸಿದ್ದ ರೆನಾಲ್ಟ್ ಡಸ್ಟರ್ ಈಗಾಗಲೇ 20,000 ಯುನಿಟ್ ಬುಕ್ಕಿಂಗ್ ಸಂಖ್ಯೆಯನ್ನು ದಾಟಿದೆ.

ಈ ನಡುವೆ ಒಂದೇ ಡೀಲರ್‌ಶಿಪ್‌ನಿಂದ ದಿನವೊಂದರಲ್ಲೇ 200 ನೂತನ ಆಲ್ಟೊ 800 ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಿರುವುದು ಮಾರುತಿ ಸುಜುಕಿ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಡೀಲರ್‌ಶಿಪ್‌ನಲ್ಲಿ ಇಷ್ಟೊಂದು ಬೇಡಿಕೆ ಕಂಡುಬಂದಿತ್ತು.

ಮಾರುತಿ ಆಲ್ಟೊ 800 ಬೆಂಗಳೂರು ದರ ಮಾಹಿತಿ:

ವೆರಿಯಂಟ್ (ಮೆಟಾಲಿಕ್)

  • ಮಾರುತಿ ಆಲ್ಟೊ 800 ಎಲ್ಎಕ್ಸ್- 2.88 ಲಕ್ಷ ರು.
  • ಮಾರುತಿ ಆಲ್ಟೊ 800 ಎಲ್ಎಕ್ಸ್ ಸಿಎನ್‌ಜಿ- 3.50 ಲಕ್ಷ ರು.
  • ಮಾರುತಿ ಆಲ್ಟೊ 800 ಎಲ್ಎಕ್ಸ್ಐ- 3.11 ಲಕ್ಷ ರು.
  • ಮಾರುತಿ ಆಲ್ಟೊ 800 ಎಲ್ಎಕ್ಸ್‌ಐ (ಏರ್‌ಬ್ಯಾಗ್)- 3.26 ಲಕ್ಷ ರು.
  • ಮಾರುತಿ ಆಲ್ಟೊ 800 ಎಲ್ಎಕ್ಸ್ಐ ಸಿಎನ್‌ಜಿ- 3.69 ಲಕ್ಷ ರು.
  • ಮಾರುತಿ ಆಲ್ಟೊ 800 ಎಸ್‌ಟಿಡಿ- 2.55 ಲಕ್ಷ ರು.
  • ಮಾರುತಿ ಆಲ್ಟೊ 800 ಎಸ್‌ಟಿಡಿ ಸಿಎನ್‌ಜಿ- 3.31 ಲಕ್ಷ ರು

More from DriveSpark

Article Published On: Monday, October 22, 2012, 15:41 [IST]
English summary
Country's largest carmaker Maruti Suzuki India has received more than 17000 bookings for the its latest small car the new Alto 800.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+