ನಲವತ್ತು ಕಪಿಗಳಿಂದ ಹ್ಯುಂಡೈ ಕಾರಿನ "ಮಂಕಿ ಟೆಸ್ಟ್"

ಮಂಗನ ಕೈಗೆ ಮಾಣಿಕ್ಯ ಸಿಕ್ಕರೆ ಏನಾಗಬಹುದು? ಅದರ ಮೌಲ್ಯವರಿಯದ ಕಪಿಯು ಅದನ್ನು ವ್ಯರ್ಥ ಮಾಡಬಹುದು. ಆದರೆ ಹ್ಯುಂಡೈ ಕಂಪನಿ ಸುಮಾರು 40 ತರಲೆ ವಾನರರ ಕೈಗೆ ತನ್ನ ಹೊಸ ಐ30 ಕಾರನ್ನು, ಸುಮಾರು ಹತ್ತು ಗಂಟೆಗಳ ನೀಡಿತ್ತು. ಕೋತಿಗಳು ಬಿಡುತ್ತವೆಯೇ?

ಇಂಗ್ಲೆಂಡಿನ ಸೊಸ್ಲೆ ಸಫಾರಿ ಪಾರ್ಕಿನಲ್ಲಿ ಹ್ಯುಂಡೈ ಐ30 ಮಂಕಿ ಟೆಸ್ಟ್ ನಡೆದಿದೆ. ಕಂಪನಿಯು ತನ್ನ ಫ್ಯಾಮಿಲಿ ಸವಾರಿ ಹ್ಯಾಚ್ ಬ್ಯಾಕ್ ಕಾರಿನ ಬಾಳಿಕೆ ಪರೀಕ್ಷಿಸಲು ಈ ಮಂಕಿ ಐಡಿಯಾ ಮಾಡಿತ್ತು. ಅದರಲ್ಲಿ ಯಶಸ್ವಿಯೂ ಆಯಿತು. ವಿಡಿಯೋ ನೋಡುಗರೆಲ್ಲ ಅಕಟಕಟ ಎನ್ನುವಂತೆ ಈ 40 ಮರ್ಕಟಗಳು ಕಾರಿನಲ್ಲಿ ಮಂಗಾಟ ನಡೆಸಿವೆ.

ತಮ್ಮ ಏರಿಯಾದಲ್ಲಿ ಅನಾಥವಾಗಿ ನಿಂತಿದ್ದ, ಮಿರಮಿರ ಮಿಂಚುವ, ಹೊಚ್ಚಹೊಸ ಕಾರನ್ನು ನೋಡಿ ಮಂಗಗಳಿಗೆ ಅಚ್ಚರಿಯೋ ಅಚ್ಚರಿ. ಗುಂಪಾಗಿ ಬಂದ 40 ಕಪಿಗಳು ಚಂಗನೆ ಕಾರಿನ ಮೇಲೆ ನೆಗೆದವು. ಅದರ ಮೇಲೆ ಒಂದಿಷ್ಟು ಕುಸ್ತಿ ನಡೆಸಿದವು. ಕಚ್ಚಾಡಿಕೊಂಡವು.

ಲಾಕ್ ಮಾಡಿರದ ಕಾರಿನ ಡೋರನ್ನು ಒಂದು ವಾನರ ಮೆಲ್ಲಗೆ ತೆರೆಯಿತು. ಡೋರ್ ತೆರೆದಾಗ ಕೆಲವು ಕಪಿಗಳು ಭಯದಿಂದ ದೂರ ಸರಿದವು. ಮತ್ತೆ ಒಂದೊಂದಾಗಿ ಕಾರಿನೊಳಗೆ ಪ್ರವೇಶಿಸಿದವು. ಒಂದು ಮಂಗ ಸ್ಟಿಯರಿಂಗ್ ಅಲುಗಾಡಿಸಿದರೆ, ಮತ್ತೊಂದು ಹೊರಗಿನಿಂದ ವೈಪರ್ ಕಿತ್ತುತೆಗೆಯಲು ಪ್ರಯತ್ನಿಸಿತು. ನಾಲ್ಕೈದು ಮಂಗಗಳು ಕಾರಿನ ಸೀಟು ಕಚ್ಚಿ ಟೇಸ್ಟ್ ನೋಡುವಲ್ಲಿ ಬ್ಯುಸಿಯಾದವು.

ಒಂದು ಮಂಗಕ್ಕೆ ಕಾರಿನ ಗೇರ್ ಇಂಟ್ರೆಸ್ಟಿಂಗ್ ಆಗಿ ಕಂಡ ಹಿನ್ನಲೆಯಲ್ಲಿ ಗೇರ್ ಜೊತೆ ಆಡುತ್ತಿತ್ತು. ಕಾರಿನಲ್ಲಿದ್ದ ಹಲವು ಬಟನ್ ಗಳನ್ನು ಪ್ರೆಸ್ ಮಾಡಿ ಮಂಗಗಳು ಟೆಸ್ಟ್ ಮಾಡಿದವು. ಕೆಲವು ಮಂಗಗಳು ಕಾರಿನ ಹೊರವಿನ್ಯಾಸ ಪರೀಕ್ಷೆ ಮಾಡುವುದರಲ್ಲಿ ಬ್ಯುಸಿಯಾಗಿದ್ದವು.

ಅಚ್ಚರಿಯಿಂದ ಮಿರರ್ ನೋಡುತ್ತಿದ್ದ ಮಂಗವೊಂದು ಅದನ್ನು ಕಿತ್ತು ತೆಗೆಯಲು ಸಾಧ್ಯವೇ ಎಂದು ಪ್ರಯತ್ನಿಸಿ ವಿಫಲವಾಯಿತು. ಕಪ್ ಹೋಲ್ಟರ್ ಇತ್ಯಾದಿಗಳನ್ನು ಕಿತ್ತು ತೆಗೆದು ಮೂಸಿ ನೋಡಿದವು. ಬರೋಬ್ಬರಿ ಹತ್ತು ಗಂಟೆಗಳ ಕಾಲ ಈ ನಲವತ್ತು ಮಂಗಗಳು ಈ ಕಾರಿನೊಳಗೆ ಏನೆಲ್ಲ ಮಂಕಿ ಚೇಷ್ಠೆ ಮಾಡಲು ಸಾಧ್ಯವಿದೆಯೋ ಎಲ್ಲವನ್ನೂ ಮಾಡಿಬಿಟ್ಟವು.

ಸೀಟುಗಳ ಮೇಲೆ ಕಪಿಗಳ ಹಲ್ಲು ಗುರುತು, ಇಂಟಿರಿಯರ್-ಎಕ್ಸ್ ಟೀರಿಯರ್ ಮೇಲೆ ಮಂಗಗಳು ಮಣ್ಣು ಇತ್ಯಾದಿಗಳಿಂದ ಕೊಳಕು ಮಾಡಿದದ್ದವು. ಸದೃಢ ಸಾಮಾಗ್ರಿಗಳಿಂದ ಇಂಟಿರಿಯರ್ ನಿರ್ಮಾಣ, ಗುಣಮಟ್ಟದ ಪ್ಲಾಸ್ಟಿಕ್ ನಿರ್ಮಾಣ ಇತ್ಯಾದಿಗಳಿಂದ 40 ಮಂಗಗಳು ಸೋತು ಹೋದವು. ಕಾರಿನ ಮೇಲೆ ಕೆಲವು ಕಲೆಗಳನ್ನು ಬಿಟ್ಟರೆ ಹೆಚ್ಚೇನೂ ಹಾನಿಯಾಗಿಲ್ಲ.

ಕೋಡಗಗಳ ಟೆಸ್ಟ್ ನಿಂದ ಕಾರಿಗೆ ಒಳ್ಳೆಯ ಪ್ರಚಾರವೂ ದೊರಕಿತು. ಇಂತಹ ಮಂಕಿ ಐಡಿಯಾ ಕೊಟ್ಟವನಿಗೆ ಬಹುಶಃ ಈಗ ಕಂಪನಿಯು ಸನ್ಮಾನ ಮಾಡಿ ಆಗಿರಬಹುದು.

More from DriveSpark

Article Published On: Friday, June 1, 2012, 14:06 [IST]
English summary
New Hyundai i30 Monkey Test: 40 monkeys tested Hyundai i30 durability at Knowsley Safari Park UK. These 40 baboons tries open windows, wiper, pressed all buttons. Finally what happened? Read These article.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+