ಟಾಟಾಗೆ ಬೈ ಬೈ; ಅಗ್ಗದ ಮಾರುತಿ ಆಲ್ಟೊ 800 ಬಿಡುಗಡೆಗೆ ರೆಡಿ!
ಕಳೆದ 12 ವರ್ಷಗಳಲ್ಲಿ ದೇಶದ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾದ ಹೊಸ ಸಣ್ಣ ಕಾರು ಆಲ್ಟೊ 800 ರಸ್ತೆಗಿಳಿಯಲು ರೆಡಿಯಾಗಿದೆ. ಇದೀಗ ಬಂದಿರುವ ಮಾಹಿತಿಯಂತೆ ಅಕ್ಟೋಬರ್ 16ರಂದು ಮಾರುತಿ ಸುಜುಕಿ ಆಲ್ಟೊ 800 ರಸ್ತೆಗಿಳಿಯಲಿದೆ. ಈ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಆಲ್ಟೊ 800 ಹೆಚ್ಚು ವೈವಿಧ್ಯತೆಯನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಯಂತೆ ಕಾರು ತಯಾರಿಸಲಾಗಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರುತಿ ಅಲ್ಟೊ 800 ಬಿಡುಗಡೆಗೆ ಮುನ್ನವೇ ಕಾರು ಪ್ರಿಯರಲ್ಲಿ ಭಾರಿ ಕ್ರೇಜ್ ಸೃಷ್ಟಿಯಾಗಿರುವುದು ಕಾರಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈಗಾಗಲೇ ಮಾರುತಿ ಸುಜುಕಿ ಆಲ್ಟೊ ಕಾರಿನ ಅಧಿಕೃತ ಚಿತ್ರಗಳು ಪ್ರಕಟನೆಗೊಂಡಿದೆ. ಸಹಜವಾಗಿಯೇ ಮಾರುತಿ ಆಲ್ಟೊ ಕಾರುಗಳಿಗೆ ಭಾರಿ ಜನಪ್ರಿಯತೆ ಇರುವುದರಿಂದ ಬುಕ್ಕಿಂಗ್ ಪ್ರಕಿಯೆ ಕೂಡಾ ಅಷ್ಟೇ ವೇಗದಲ್ಲಿ ಸಾಗುತ್ತಿದೆ. ಮಾರುತಿ ಆಲ್ಟೊ 800 ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿರಲಿದೆ. 1983ನೇ ಇಸವಿಯಲ್ಲಿ ಪ್ರಾರಂಭವಾದಾಗಿನಿಂದ ಸುಮಾರು 2.5 ದಶಲಕ್ಷ ಮಾರುತಿ 800 ಕಾರುಗಳನ್ನು ಮಾರಾಟ ಮಾಡಲಾಗಿತ್ತು.
ಮೈಲೇಜ್ ಸೂಪರ್...ದರವೂ ಬೆಟರ್...
ನೂತನ ಮಾರುತಿ ಸುಜುಕಿ ಆಲ್ಟೊ 800 ಮೈಲೇಜ್ ಪ್ರತಿ ಲೀಟರ್‌ಗೆ 22 ಕೀ. ಮೀ ಆಗಿದೆ. ಇದು ಹಿಂದಿನ ಮಾದರಿಗೆ ಹೋಲಿಸಿದರೆ ಶೇ. 15ರಷ್ಟು ಹೆಚ್ಚಾಗಿದೆ.
ದೇಶದ ಅತಿ ದೊಡ್ಡ ಕಾರು ತಯಾರಕ ಘಟಕವಾದ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ನೂತನ ಆಲ್ಟೊ 800 ಕಾರು ದರವು 2.5ರಿಂದ 3 ಲಕ್ಷ ರೂಪಾಯಿಗಳ ವರೆಗೆ ಇರಲಿದೆ. ಅಂದರೆ ಟಾಟಾ ನ್ಯೂನೊ ಹಾಗೂ ಹ್ಯುಂಡೈ ಇಯಾನ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ. ಹಾಗಾಗಿ ಟಾಟಾಗೆ ಬೈ ಬೈ ಹೇಳಲು ಗ್ರಾಹಕರು ರೆಡಿಯಾಗಿದ್ದಾರೆ.
ಸುಧಾರಿತ ಗೇರ್ ಶಿಫ್ಟ್, ಕಾಲು ಚಾಚಿಕೊಳ್ಳಲು ಹೆಚ್ಚಿನ ಸ್ಥಳಾವಕಾಶ ಒದಗಿಸಿರುವುದು ಹಿಂದಿನ ಕಾರಿಗಿಂತ ಆಲ್ಟೊ 800 ಹೆಚ್ಚು ಆಕರ್ಷಕವಾಗಿ ಕಾಣಿಸಲು ಕಾರಣವಾಗಿದೆ. ಒಟ್ಟು ಆರು ರೂಪಗಳಲ್ಲಿ ಕಾರು ಪ್ರವೇಶ ಮಾಡಲಿದ್ದು, ಸಿಎನ್‌ಜಿ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ತಲಾ ಮೂರರಂತೆ ಬಿಡುಗಡೆಯಾಗಲಿದೆ. ನೂತನ ಆಲ್ಟೊ 800 ಅಭಿವೃದ್ಧಿಪಡಿಸಲು ಮಾರುತಿ ಸುಜುಕಿ ಇಂಡಿಯಾ ಬರೋಬ್ಬರಿ 470 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.

ಹೊಸ ಆಲ್ಟೊ 800 - ಫ್ರಂಟ್ ವ್ಯೂ

ಹೊಸ ಮಾರುತಿ ಆಲ್ಟೊ 800- ರಿಯರ್ ವ್ಯೂ

ಹೊಸ ಮಾರುತಿ ಆಲ್ಟೊ 800- ಸೈಡ್ ವ್ಯೂ

ಹೊಸ ಮಾರುತಿ ಆಲ್ಟೊ 800- ಇಂಟಿರಿಯರ್ ವ್ಯೂ

ಹೊಸ ಮಾರುತಿ ಆಲ್ಟೊ 800- ಆನ್ ರೋಡ್


Click it and Unblock the Notifications








