ಹೊಸ ಸ್ಕೋಡಾ ಒಕ್ಟಾವಿಯಾ; ಇಷ್ಟವಾಯಿತೇ?
ನೂತನ 2013 ಸ್ಕೋಡಾ ಒಕ್ಟಾವಿಯಾ ಕಾರನ್ನು ಅನಾವರಣ ಮಾಡಲಾಗಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಸ್ಕೋಡಾ ಒಕ್ಟಾವಿಯಾ ಎಂಕೆ3 ಕಾರಿನ ಅಧಿಕೃತ ಫೋಟೊಗಳನ್ನು ಜೆಕ್ ಗಣರಾಜ್ಯದ ಈ ಕಾರು ತಯಾರಕ ಸಂಸ್ಥೆ ಬಿಡುಗಡೆಗೊಳಿಸಿದೆ.
ನೂತನ ಸ್ಕೋಡಾ ಒಕ್ಟಾವಿಯಾ ಕಾರು ಫೋಕ್ಸ್‌ವ್ಯಾಗನ್ ಪ್ಲಾಟ್ ಪ್ಲಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಇದೇ ತಲಹದಿಯಲ್ಲಿ ಫೋಕ್ಸ್‌ವ್ಯಾಗನ್ ಗಾಲ್ಫ್, ಆಡಿ ಎ3 ಹಾಗೂ ಸೀಟ್ ಲಿಯೋನ್ ನಿರ್ಮಾಣವಾಗಿದ್ದವು.
ಹೊಸ ಒಕ್ಟಾವಿಯಾ ಎಂಕೆ3 ಕಾರು ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಒಟ್ಟು ಎಂಟು ಎಂಜಿನ್ ಆಯ್ಕೆಗಳಲ್ಲಿ ಆಗಮಿಸಲಿದೆ.

ನೂತನ ಒಕ್ಟಾವಿಯಾ ಎಂಕೆ3 ಕಾರಿನ ಅಧಿಕೃತ ಚಿತ್ರಗಳನ್ನು ಸ್ಕೋಡಾ ಬಿಡುಗಡೆಗೊಳಿಸಿದೆ. ಜೆಕ್ ಗಣರಾಜ್ಯದ ಕಾರು ತಯಾರಕ ಕಂಪನಿಯಿಂದ ನಿರ್ಮಾಣವಾಗುತ್ತಿರುವ ಮೂರನೇ ಜನರೇಷನ್ ಒಕ್ಟಾವಿಯಾ ಕಾರು ಇದಾಗಿದೆ.

ಸ್ಕೋಡಾ ಒಕ್ಟಾವಿಯಾ ಎಂಕೆ3 ಕಾರಿನೊಳಗೆ ವಿಶಾಲವಾದ ಸ್ಥಳಾವಕಾಶ ಒದಗಿಸಲಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಇದು ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ.

1.4 ಟಿಎಸ್ಐ ಹಾಗೂ 1.8 ಲೀಟರ್ ಟಿಎಸ್‌ಐ ನೂತನ ಒಕ್ಟಾವಿಯಾದ ಪೆಟ್ರೋಲ್ ಎಂಜಿನ್‌ಗಳಾಗಿವೆ. ಇದು ಕ್ರಮವಾಗಿ 120 ಹಾಗೂ 177 ಹಾರ್ಸ್ ಪವರ್ ಉತ್ಪಾದಿಸಲಿದೆ.

ಅದೇ ರೀತಿ 1.6 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ 106 ಬಿಎಚ್‌ಪಿ ಪೀಕ್ ಪವರ್ ಉತ್ಪಾದನೆಯಾಗಲಿದೆ.

ನೂತನ ಒಕ್ಟಾವಿಯಾದ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 15 ಕಿಲೋ ಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಅಲ್ಲದೆ ಕಾರ್ಬನ್ ವಿಸರ್ಜನೆ ಪ್ರತಿ ಕಿಲೋ ಮೀಟರ್‌ಗೆ 89 ಗ್ರಾಂಗಳಾಗಿವೆ.

ಕ್ಯಾಬಿನ್ ವ್ಯೂ

ಮೂರನೇ ತಲೆಮಾರಿನ ಸ್ಕೋಡಾ ಒಕ್ಟಾವಿಯಾ ಎಂಕೆ3 ಕಾರು ಇತರ ಕಾರುಗಳಿಂದ ವೈವಿಧ್ಯಮಯವಾಗಿರಲಿದೆ.

ನೂತನ ಸ್ಕೋಡಾ ಲೊಗೊ ಒಕ್ಟಾವಿಯಾ ಆಕರ್ಷಕ ವಿನ್ಯಾಸಕ್ಕೆ ಕಾರಣವಾಗಿದೆ.

ಈ ಹಿಂದಿನ ಕಾರುಗಳಿಗೆ ಹೋಲಿಸಿದರೆ ಸ್ಕೋಡಾ ಒಕ್ಟಾವಿಯಾ ಹೆಚ್ಚು ಡೈನಾಮಿಕ್ ಎನಿಸಿಕೊಂಡಿದೆ.

ನೂತನ ರೆಡಿಯೋ ನೇವಿಗೇಷನ್ ಸಿಸ್ಟಂ ಹೊಸತನಕ್ಕೆ ಕಾರಣವಾಗಲಿದೆ. ಟಚ್ ಡಿಸ್ಲೇ, ಸೆನ್ಸಾರ್ ಹಾಗೂ ನೂತನ ಕಾಂಟನ್ ಸೌಂಡ್ ಸಿಸ್ಟಂ ಆಕರ್ಷಕವೆನಿಸಿದೆ.

ಹೊಸ ಇಂಟೆಲಿಜೆಟ್ ಲೈಟ್ ಅಸಿಸ್ಟಂಟ್ ಕೂಡಾ ಮತ್ತೊಂದು ವೈವಿಧ್ಯಕ್ಕೆ ಕಾರಣವಾಗಿದೆ.

ಪ್ರಸ್ತುತ ತಲಾ ನಾಲ್ಕರಂತೆ ಟಿಎಸ್ಐ ತಂತ್ರಜ್ಞಾನದ ಪೆಟ್ರೋಲ್ ಹಾಗೂ ಟಿಡಿಐ ತಂತ್ರಜ್ಞಾನದ ಕಾಮನ್ ರೈಲ್ ಡೀಸೆಲ್ ಎಂಜಿನ್ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಸಿಎನ್‌ಜಿ ಆವೃತ್ತಿ ಕೂಡಾ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೊಸ ವರ್ಷದಲ್ಲಿ ಸ್ಕೋಡಾ ಒಕ್ಟಾವಿಯಾ ದೇಶದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ.


Click it and Unblock the Notifications








