ಹೊಸ ಸ್ವಿಫ್ಟ್ ಡಿಜೈರ್ ರಸ್ತೆಗೆ, ದರ 4 ಲಕ್ಷ ರು.ನಿಂದ ಆರಂಭ
ನೂತನ ಡಿಜೈರ್ ಪೆಟ್ರೋಲ್ ಆವೃತ್ತಿ ದರ ಸುಮಾರು 4.79 ಲಕ್ಷ ರು. ಮತ್ತು ಡೀಸೆಲ್ ಡಿಜೈರ್ ದರ 5.80 ಲಕ್ಷ ರುಪಾಯಿ ಇದೆ. ಇದು ದೆಹಲಿ ಎಕ್ಸ್ ಶೋರೂಂ ದರ. ಹಳೆಯ ಡಿಜೈರ್ ಕಾರಿಗೆ ಹೋಲಿಸಿದರೆ ನೂತನ ಡಿಜೈರ್ ದರ ಸುಮಾರು 26-31 ಸಾವಿರ ರುಪಾಯಿ ಅಗ್ಗವಾಗಿದೆ.
ನೂತನ ಕಾರು ಸ್ವಿಫ್ಟ್ ಹ್ಯಾಚ್ ಬ್ಯಾಕಿನ ಸೆಡಾನ್ ಆವೃತ್ತಿಯಾಗಿದೆ. ನೂತನ ಸೆಡಾನ್ ಕಾರು ಪುಟ್ಟದಾಗಿದ್ದು, ಬೂಟ್ ಸ್ಥಳಾವಕಾಶ ಕೊಂಚ ಕಡಿಮೆಯಿದೆ. (ಹೊಸ ಸ್ವಿಫ್ಟ್ ಡಿಜೈರ್ ಚಿತ್ರಗಳನ್ನು ನೋಡಿರಿ )
ಬೂಟ್ ಸ್ಥಳಾವಕಾಶ ಕಡಿಮೆ ಮಾಡಿರುವುದರಿಂದ ಈ ಕಾರಿನ ಉದ್ದ ನಾಲ್ಕು ಮೀಟರಿಗಿಂತ ಕಡಿಮೆಯಿದೆ. ಇದರಿಂದ ಅಬಕಾರಿ ಸುಂಕ ಕಡಿಮೆಯಾಗಿದೆ. ( ಹಳೆಯ ಸ್ವಿಫ್ಟ್ ಡಿಜೈರ್ ಹೀಗಿತ್ತು ನೋಡಿ )
ನೂತನ ಸ್ವಿಫ್ಟ್ ಡಿಜೈರಿನ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳೆರಡೂ ಸ್ಪೋರ್ಟಿ ಇಂಟಿರಿಯರ್ ವಿನ್ಯಾಸ ಹೊಂದಿವೆ. ಆದರೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇರುವ ಪೆಟ್ರೋಲ್ ಡಿಜೈರ್ ಆವೃತ್ತಿಯನ್ನು ಕೂಡ ಕಂಪನಿ ಪರಿಚಯಿಸಿದೆ.
ನೂತನ ಸ್ವಿಫ್ಟ್ ಡಿಜೈರ್ ಪೆಟ್ರೋಲ್ ಆವೃತ್ತಿ ದರ
ಎಲ್ಎಕ್ಸ್ಐ: 4.79 ಲಕ್ಷ ರುಪಾಯಿ
ವಿಎಕ್ಸ್ಐ: 5.32 ಲಕ್ಷ ರು.
ಆಟೋಮ್ಯಾಟಿಕ್: 6.54 ಲಕ್ಷ ರು.
ಝಡ್ ಎಕ್ಸ್ಐ: 6.19 ಲಕ್ಷ ರು.
ನೂತನ ಸ್ವಿಫ್ಟ್ ಡಿಜೈರ್ ಡೀಸೆಲ್ ಆವೃತ್ತಿ ದರ
ಎಲ್ ಡಿಐ: 5.80 ಲಕ್ಷ ರುಪಾಯಿ
ವಿಡಿಐ: 6.31 ಲಕ್ಷ ರುಪಾಯಿ
ಝಡ್ ಡಿಐ: 7.09 ಲಕ್ಷ ರುಪಾಯಿ.


Click it and Unblock the Notifications









