ಬೋಲ್ಟ್ ಸ್ಪೆಷಲ್ ನಿಸ್ಸಾನ್ ಗೋಲ್ಡ್ ಜಿಟಿ-ಆರ್ ಕಾರು ಹರಾಜಿಗೆ

2008ರ ಬೀಜಿಂಗ್ ಹಾಗೂ ಕಳೆದ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡುವ ಮೂಲಕ ವಿಶ್ವದ ಅತಿ ವೇಗದ ಓಟಗಾರ ಎಂಬುದನ್ನು ನಿರೂಪಿಸಿದ್ದ ಜಮೈಕಾದ ಉಸೈನ್ ಬೋಲ್ಟ್ ಮೈದಾನದ ಹೊರಗೂ ಉತ್ತಮ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ.

ಇದೀಗ ಪ್ರಸಿದ್ಧ ಕಾರು ತಯಾರಕ ಕಂಪನಿ ನಿಸ್ಸಾನ್ ಜತೆ ಕೈಜೋಡಿಸಿಕೊಂಡಿರುವ ಬೋಲ್ಟ್, ಸಹಾಯಾರ್ಥ ಸಂಸ್ಥೆಯೊಂದಕ್ಕೆ ಧನ ಸಹಾಯ ನೀಡುವ ನಿಟ್ಟಿನಲ್ಲಿ ನಿಸ್ಸಾನ್ ಜಿಟಿ-ಆರ್ ಎಂಬ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಚಿನ್ನದ ಲೇಪನದೊಂದಿಗೆ ನಿರ್ಮಿಸಲಾಗಿರುವ ಕಾರಿನ ಆಂತರಿಕ ಫಿಟ್ಟಿಂಗ್‌ನಲ್ಲಿ ಬೋಲ್ಟ್ ಸಹಿ ಇರಲಿದೆ. ಈ ಲಿಮಿಟೆಡ್ ಅಡಿಷನ್ ನಿಸ್ಸಾನ್‌ ಗೋಲ್ಡ್ ಜಿಟಿ-ಆರ್ ಕಾರು ಕಂಪನಿಯ 'ವಾಟ್ ಇಫ್' ಮೂಲಕ ಪ್ರಚಾರ ಗಿಟ್ಟಿಸಲಿದೆ.

ಪ್ರಸಕ್ತ ತಿಂಗಳಲ್ಲೇ ಇ-ಬೇ ಮುಖಾಂತರ ಕಾರು ಹರಾಜಿಗೆ ಒಳಗಾಗಲಿದ್ದು, ಇದರಿಂದ ಬರಲಿರುವ ಹಣವನ್ನು ಒಲಿಂಪಿಕ್ ಚಾಂಪಿಯನ್ ತವರೂರಿನ ಮಕ್ಕಳ ಹಾಗೂ ಯುವ ಜನರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅವಕಾಶಗಳಿಗಾಗಿ ಬಳಸಲಾಗುವುದು.

ನಿಸ್ಸಾನ್ ಜಿಟಿ-ಆರ್ ಪ್ರಚಾರ ರಾಜಭಾರಿಯಾಗಿ ಸಹಿ ಮಾಡಿರುವ ಬೋಲ್ಟ್ ಈಗ ಕಂಪನಿಯ ಮಹತ್ವಾಕಾಂಕ್ಷೆಯ ಜಾಗತಿಕ ವ್ಯಾಪಾರೋದ್ಯಮ ಡ್ರೈವ್‌ಗಾಗಿ 'ಎಕ್ಸೈಟ್ಮೆಂಟ್ ನಿರ್ದೇಶಕ' ಎನಿಸಿಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬೋಲ್ಟ್, ರೇಸಿಂಗ್ ನನ್ನ ಸ್ಫೂರ್ತಿ. ಇದರಂತೆ ನಿಸ್ಸಾನ್ ಎಲ್ಲರಿಗೂ ಮತ್ತಷ್ಟು ರೋಮಾಂಚನಕಾರಿ ಬ್ರಾಂಡ್ ನಿರ್ಮಿಸಲು ಕಂಪನಿಗೆ ನೆರವು ಮಾಡಲು ಬಯಸುತ್ತಿದ್ದೇನೆ ಎಂದಿದ್ದಾರೆ.

More from DriveSpark

Article Published On: Monday, October 15, 2012, 10:17 [IST]
English summary
Nissan and Usain Bolt together have now unleashed ‘The Bolt' Nissan GT-R in a striking gold paint. The Bolt Nissan GT-R has special features like Bolt's signature embossed on it and bits of actual gold interior fittings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+