ಸದ್ಯದಲ್ಲೇ ಆಯ್ದ ಮಾದರಿಗಳಿಗೆ ನಿಸ್ಸಾನ್ ಇಂಡಿಯಾ ದರ ಏರಿಕೆ
ಇದರೊಂದಿಗೆ ನಿಸ್ಸಾನ್ ಆವೃತ್ತಿಗಳಾದ ನಿಸ್ಸಾನ್ ಮೈಕ್ರಾ ಹಾಗೂ ಸನ್ನಿ ಸೆಡಾನ್ ಕಾರುಗಳಲ್ಲಿ ಬೆಲೆಯೇರಿಕೆ ಕಂಡುಬರಲಿದೆ. ಹಾಗಿದ್ದರೂ ನಿಸ್ಸಾನ್ ಇವಾಲಿಯಾ ಎಂಯುವಿ ಆವೃತ್ತಿಯಲ್ಲಿ ಹಿಂದಿನ ದರವನ್ನೇ ಉಳಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ.
ಪ್ರಸಕ್ತ ತಿಂಗಳಾರಂಭದಲ್ಲಿ ಮುಂಚೂಣಿಯ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟಾರ್ಸ್, ಜಿಎಂ ಹಾಗೂ ಹೊಂಡಾ ಕಂಪನಿಗಳು ದರ ಏರಿಕೆ ಘೋಷಿಸಿದ್ದವು. ಇದೀಗ 2013ರ ವೇಳೆಗೆ ಒಂದು ಲಕ್ಷ ಯುನಿಟ್ ಮಾರಾಟ ಟಾರ್ಗೆಟ್ ಮಾಡುತ್ತಿರುವ ನಿಸ್ಸಾನ್ ಮೋಟಾರ್ಸ್ ದರ ಏರಿಕೆ ಹೊರತಾಗಿಯೂ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಹೊಂದಿದೆ.
2016ರ ವೇಳೆ 10 ನೂತನ ಆವೃತ್ತಿ
ಈ ನಡುವೆ ದೀರ್ಘ ಯೋಜನೆ ಹಮ್ಮಿಕೊಂಡಿರುವ ಸಿಸ್ಸಾನ್ ಇಂಡಿಯಾ 2016ರ ವೇಳೆಗೆ ಹತ್ತು ನೂತನ ಆವೃತ್ತಿ ಬಿಡುಗಡೆ ಮಾಡಲು ಯೋಜನೆಯಿರಿಸಿಕೊಂಡಿದೆ. ಸನ್ನಿ ಹಾಗೂ ಮೈಕ್ರಾ ಈ ವರೆಗೆ ನಿಸ್ಸಾನ್ ಗ್ರಾಹಕರ ಅಚ್ಚುಮೆಚ್ಚಿನ ಕಾರು ಎನಿಸಿಕೊಂಡಿತ್ತು. ಅಂತೆಯೇ 2016ರ ವೇಳೆಗೆ ಶೇಕಡಾ 8ರಷ್ಟು ವೃದ್ಧಿ ನಿರೀಕ್ಷಿಸುತ್ತಿದೆ.


Click it and Unblock the Notifications









