ಹೆಲ್ಮೆಟ್ ಇಲ್ವಾ? ನಿಮ್ಗೆ ಬಂಕ್ ನಲ್ಲಿ ಪೆಟ್ರೋಲ್ ಸಿಗೋಲ್ಲ!

ಇತ್ತೀಚೆಗೆ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಜಿಲ್ಲಾಡಳಿತವೂ ಈ ವಿನೂತನ ಕ್ರಮ ಕೈಗೊಂಡಿದೆ. ಹೆಲ್ಮೆಟ್ ಧರಿಸದ ಗ್ರಾಹಕರಿಗೆ ಪೆಟ್ರೋಲ್ ನೀಡಲಾಗುವುದಿಲ್ಲವೆಂದು ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲೂ ಕಡ್ಡಾಯವಾಗಿ ನೋಟಿಸ್ ಅಂಟಿಸುವಂತೆ ರಾಂಚಿ ಡೆಪ್ಯೂಟಿ ಕಮಿಷನರ್ ಕೆ.ಕೆ. ಸೋನ್ ಆದೇಶಿಸಿದ್ದಾರೆ.
ಹೆಲ್ಮೆಟ್ ಧರಿಸದ ಬೈಕ್ ಸವಾರರು ಒತ್ತಡ ಹೇರಿ ಪೆಟ್ರೋಲ್ ಖರೀದಿಸುವ ಅಪಾಯವಿರುವುದರಿಂದ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲೂ ಸಿಸಿಟಿವಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದ ಈ ನಿರ್ಧಾರ ಯಶಸ್ವಿಯಾಗುವುದರ ಕುರಿತು ಕೆಲವು ಪೆಟ್ರೋಲ್ ಬಂಕ್ ಮಾಲೀಕರು ಸಂಶಯವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಸದ್ಯ ಇಂತಹ ಯಾವುದೇ ನೀತಿನಿಯಮಗಳು ಬಂದಿಲ್ಲ. ಆದರೆ ರಾಜ್ಯದ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲಂಘಿಸುವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ. ಕನ್ನಡ ಡ್ರೈವ್ ಸ್ಪಾರ್ಕ್ ಈಗಾಗಲೇ ಬೈಕ್ ಸವಾರರ ಸುರಕ್ಷಿತ ಪ್ರಯಾಣಕ್ಕಾಗಿ ಹತ್ತು ಟಿಪ್ಸ್ ಗಳನ್ನು ನೀಡಿದೆ.


Click it and Unblock the Notifications








