ರೆನೊ ಇ4 ಫ್ಲೂಯೆನ್ಸ್ ಡೀಸೆಲ್ ರಸ್ತೆಗೆ, ದರ 15 ಲಕ್ಷ ರು.
ನೂತನ ಕಾರಲ್ಲಿ ಮರ್ಸಿಡಿಸ್ ಎಂಜಿನ್ ಇದೆ. ಅಂದರೆ ಮರ್ಸಿಡಿಸ್ ಪೇರೆಂಟ್ ಕಂಪನಿ ಡೈಮ್ಲಾರ್ ಮತ್ತು ರೆನಾಲ್ಟ್ ಎಂಜಿನನ್ನೇ ಇದಕ್ಕೆ ಬಳಸಲಾಗಿದೆ. ಅಂದರೆ ನೂತನ ಫ್ಲೂಯೆನ್ಸ್ 1.5 ಲೀಟರಿನ ಕಾಮನ್ ರೈಲ್ ಟರ್ಬೊ ಡೀಸೆಲ್ ಕೆ9ಕೆ ಎಂಜಿನ್ ಹೊಂದಿದೆ. ಇದು 108 ಹಾರ್ಸ್ ಪವರ್ ಮತ್ತು 240 ಟಾರ್ಕ್ ಪವರ್ ನೀಡುತ್ತದೆ. ಹಳೆಯ ಆವೃತ್ತಿ 105 ಹಾರ್ಸ್ ಪವರ್ ಮತ್ತು 240 ಟಾರ್ಕ್ ಪವರ್ ನೀಡುತ್ತದೆ.
ರೆನೊ ಇ4 ಫ್ಲೂಯೆನ್ಸ್ ಡೀಸೆಲ್ ಕಾರು ಆರು ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಹೊಂದಿದೆ. ಈ ಕಾರಿನ ಒಟ್ಟಾರೆ ಮೈಲೇಜ್ ಪ್ರತಿಲೀಟರ್ ಡೀಸೆಲ್‌ಗೆ 20.4 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರು ಅಡ್ವಾನ್ಸ್‌ಡ್ ಸಸ್ಪೆನ್ಷನ್ ಸಿಸ್ಟಮ್ ಹೊಂದಿರುವುದರಿಂದ ಅತ್ಯುತ್ತಮ ಆರಾಮದಾಯಕತೆಯ ಸವಾರಿಗೆ ಪೂರಕವಾಗಿದೆ. ಕಂಪನಿಯು ಕಾರಿನ ಹೊರವಿನ್ಯಾಸದಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಿಲ್ಲ.
ಆದರೆ ಇಂಟಿರಿಯರ್‌ನೊಳಗೆ ಒಂದಿಷ್ಟು ಹೆಚ್ಚುವರಿ ಫೀಚರುಗಳನ್ನು ಅಳವಡಿಸಲಾಗಿದೆ. ಉಳಿದಂತೆ ಮಳೆ ತಿಳಿದು ಆನ್ ಆಗುವ ರೈನ್ ಸೆನ್ಸಾರ್ ವೈಪರ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಇತ್ಯಾದಿ ಸ್ಟಾಂಡರ್ಡ್ ಫೀಚರುಗಳಿವೆ. ಬ್ಲೂಟೂಥ್, ಯುಎಸ್‌ಬಿ ಕನೆಕ್ಟಿವಿಟಿ ಕೂಡ ಇದೆ. ಸುರಕ್ಷಿತ ಸವಾರಿಗೆ ಪೂರಕವಾಗಿ ಏರ್‌ಬ್ಯಾಗುಗಳಿವೆ.
ಪರಿಷ್ಕೃತ ಎಂಜಿನಿನ ನೂತನ ಫ್ಲೂಯೆನ್ಸ್ ದರ 15 ಲಕ್ಷ ರು. ನೂತನ ಕಾರು ಷೆವರ್ಲೆ ಕ್ರೂಝ್, ಟೊಯೊಟಾ ಆಲ್ಟಿಸ್, ಸ್ಕೋಡಾ ಲೌರಾ ಇತ್ಯಾದಿ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









