ಐಸ್ ಕ್ರೀಂ, ಸೋಪ್‌ನಿಂದ ಕಾರಿಗೆ ಇಂಧನ ತಯಾರು?
ಹ್ಹಾಂ ಇದನ್ನು ನಂಬವೀರಾ? ಐಸ್ ಕ್ರೀಂನಿಂದ ಕಾರಿಗೆ ಇಂಧನ ತಯಾರಿಸುವುದಾದರೂ ಹೇಗೆ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಆದರೆ ಸಂಶೋಧಕರು ಐಸ್ ಕ್ರೀಂ ಮೂಲಕ ಕಾರಿಗೆ ಇಂಧನ ತಯಾರಿಸುವ ವಿದ್ಯೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಜಾಗತಿಕವಾಗಿ ಇಂಧನ ಬೆಲೆ ಗಣನೀಯವಾಗಿ ವರ್ಧಿಸುತ್ತಿರುವ ಹಿನ್ನಲೆಯಲ್ಲಿ ವಿಜ್ಞಾನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬದಲಿ ವ್ಯವಸ್ಥೆಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೈನಂದಿನ ಜೀವನದಲ್ಲಿ ಬಳಕೆಯಾಗುವ ಐಸ್ ಕ್ರೀಂ, ಸೋಪ್ ಹಾಗೂ ಶ್ಯಾಂಪೂವಿನಿಂದ ಇಂಧನ ತಯಾರಿಸಲು ಸಾಧ್ಯ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ.
ಪ್ರೊಫೆಸರ್ ನಿಕ್ ಟರ್ನರ್ ನೇತೃತ್ವದ ಸಂಶೋಧಕರ ತಂಡ ಈ ಅತಿ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮಗೆಲ್ಲರಿಗೂ ತಿಳಿದಂತೆ ಕಚ್ಚಾ ತೈಲಗಳು ಸಂಕೀರ್ಣ ಹೈಡ್ರೊಕಾರ್ಬನ್‌ಗಳ ಮಿಶ್ರಣವಾಗಿದೆ. ಇದೀಗ ಐಸ್‌ಕ್ರೀಂನಿಂದಲೂ ಇದಕ್ಕೆ ಸಮಾನವಾದ ಹೈಡ್ರೊಕಾರ್ಬನ್ ಉತ್ಪಾದಿಸಲು ಸಾಧ್ಯ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಮ್ಯಾಂಚೆಸ್ಟರ್ ಯುನಿವರ್ಸಿಟಿಯಲ್ಲಿ ಸಂಶೋಧನೆ ಪ್ರಗತಿಯಲ್ಲಿದೆ. ಐಸ್‌ಕ್ರೀಂ, ಸೋಪ್ ಹಾಗೂ ಶ್ಯಾಂಪೂಗಳಲ್ಲಿ ಹೈಡ್ರೊಕಾರ್ಬನ್ ಪತ್ತೆ ಹಚ್ಚಿರುವ ಸಂಶೋಧಕರು ಇದನ್ನು ಇಂಧನವಾಗಿ ಪರಿವರ್ತಿಸುವ ಪ್ರಯತ್ನದಲ್ಲಿದೆ.
ಒಂದು ವೇಳೆ ಪ್ರಾಯೋಗಿಕವಾಗಿ ವಿಜ್ಞಾನಿಗಳ ಪ್ರಯತ್ನ ಯಶ ಕಂಡಲ್ಲಿ ಅತಿ ಅಗ್ಗದಲ್ಲಿ ಕಾರಿಗೆ ಇಂಧನದ ಬದಲಿ ವ್ಯವಸ್ಥೆ ಸಿಗಲಿದೆ. ಕೆಲವರಂತೂ ಇಂತಹ ಸಂಶೋಧನೆಗೆ ಮುಂದಾಗಿರುವ ವಿಜ್ಞಾನಿಗಳನ್ನು ಗೇಲಿ ಮಾಡಲು ಶುರು ಮಾಡಿದ್ದು, ವ್ಯರ್ಥ ಸಮಯ ಪೋಲು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ದೊರಕಲಿದೆ.


Click it and Unblock the Notifications









