ಬ್ರಿಟನ್ ಕಾರಿಗೆ ಮಲಬಾರ್ ಟೀಕ್ ಮರದ ಮೆರುಗು

Rolls-Royce Adds Malabar Wood To Ghost and Phantom
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಅರಣ್ಯಗಳನ್ನೆಲ್ಲ ಕೊಳ್ಳೆಹೊಡೆದವರು ಬ್ರಿಟಿಷರು. ಬ್ರಿಟನ್ ನ ಸರ್ಕಾರಿ ಕಚೇರಿಗಳಲ್ಲಿ, ಸಂಸತ್ತಿನ ಮೇಜು, ಚಯರ್, ಪೀಠೋಪರಣಗಳೆಲ್ಲ ನಮ್ಮ ದೇಶದ ಮರದಿಂದ ತಯಾರಿಸಿದಂತೆ. ನಮ್ಮೂರ ಮರಕ್ಕೂ ಬ್ರಿಟನಿಗೂ ಹಲವು ಐತಿಹಾಸಿಕ ಸಂಬಂಧಗಳಿವೆ.

ಇದೀಗ ಬ್ರಿಟನಿನ ಐಷಾರಾಮಿ ಕಾರು ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್ ಗೂ ಭಾರತದ ಮರಗಳು ಇಷ್ಟವಾಗಿರುವಂತಿದೆ. ಕಂಪನಿಯು ಭಾರತದಿಂದ ಮಲಬಾರ್ ಟೀಕ್ ಮರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮರಗಳನ್ನು ಕಂಪನಿಯ ಘೋಶ್ಟ್ ಮತ್ತು ಫಂಟೊಮ್ ಕಾರುಗಳ ಇಂಟಿರಿಯರ್ ವಿನ್ಯಾಸಕ್ಕೆ ಬಳಸಿಕೊಳ್ಳಲಾಗುತ್ತಿದೆಯಂತೆ.

ರೋಲ್ಸ್ ರಾಯ್ಸ್ ಕಾರಿನ ಇಂಟಿರಿಯರ್ ಸೌಂದರ್ಯ ಹೆಚ್ಚಲು ಭಾರತದ ಮರಗಳ ಕೊಡುಗೆ ಅಪಾರ. ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಹೊದಿಕೆ ಮತ್ತು ಡ್ಯಾಷ್ ಬೋರ್ಡ್ ನಲ್ಲಿ ನಾಜೂಕಾಗಿ ಮಲಬಾರ್ ಟೀಕ್ ವುಡ್ ಅಳವಡಿಸಲು ನುರಿತ ಕೆಲಸಕಾರರನ್ನು ಕಂಪನಿ ನೇಮಕಮಾಡಿಕೊಂಡಿದೆ.

ಬ್ರಿಟನಿನ ಕಾರು ಕಂಪನಿಯು ಗ್ರಾಹಕರ ಬೇಡಿಕೆಗೆ ಕಾರಿನ ವಿನ್ಯಾಸ ಮಾಡಿಕೊಡುತ್ತಿದೆ. ಅಂದರೆ ಕಾರಿನ ಎಕ್ಸ್ ಟೀರಿಯರ್ ಬಣ್ಣ, ಇಂಟಿರಿಯರ್ ಚರ್ಮ್, ಕಾರ್ಪೆಟ್ ಮತ್ತು ಮರಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಳವಡಿಸಿಕೊಡುತ್ತಿದೆ. ವಿ ಯೂಸಿಂಗ್ ದೀಸ್ ಮಲಬಾರ್ ಟೀಕ್ ವುಡ್ ಫ್ರಂಮ್ ಇಂಡಿಯಾ ಅಂತ ಕಂಪನಿ ತನ್ನ ಗ್ರಾಹಕರ ಮನಸೆಳೆಯಲು ಯತ್ನಿಸಬಹುದು.

ಮಲಬಾರ್ ಟೀಕ್ ವುಡ್ ಬಳಸಿರುವುದು ಭಾರತ ಮತ್ತು ಅಂತಾರಾಷ್ಟ್ರೀಯ ಗ್ರಾಹಕರಿಗೆ ಇಷ್ಟವಾಗಿದೆ ಎಂದು ಕಂಪನಿ ಹೇಳಿದೆ. ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಭಾರತೀಯರಿಗೆ ಕೊಂಚ ದೇಶಿ ಫೀಲಿಂಗ್ಸ್ ಆಗಬಹುದು. ಈ ಮರಗಳೆಲ್ಲ ಕೇರಳದಿಂದ ಬ್ರಿಟನಿಗೆ(ಸುಮಾರು 8 ಸಾವಿರ ಕಿ.ಮೀ. ದೂರ)ಸಾಗಿಸಲ್ಪಟ್ಟಿದೆ.

ಕೇವಲ ಎರಡುವರೆ ಕೋಟಿ ರುಪಾಯಿಯ ಘೋಸ್ಟ್ ಕಾರಿಗೆ ಮಾತ್ರ ಮಲಬಾರ್ ಟೀಕ್ ಮರಗಳನ್ನು ಬಳಸಲಾಗಿದೆ. ಆದರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಫಂಟೋಮ್ ಕಾರಿಗೂ ಟೀಕ್ ಮರಗಳ ಹೊದಿಕೆ ಅಳವಡಿಸುವುದಾಗಿ ಕಂಪನಿ ಹೇಳಿದೆ.

ಮಲಬಾರ್ ಟೀಕ್ ಮರದ ವಿನ್ಯಾಸಕ್ಕಾಗಿ ಗ್ರಾಹಕರು ಸುಮಾರು 2 ಲಕ್ಷ ರುಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು. ಸುಮಾರು 2.5 ಕೋಟಿ ರು.ನಿಂದ 3.5 ಕೋಟಿ ರು. ಆಸುಪಾಸಿನಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಒಂದೆರಡು ಲಕ್ಷ ರು. ಹೆಚ್ಚು ಪಾವತಿಸುವುದು ಕಷ್ಟವಾಗದು.

More from DriveSpark

Article Published On: Tuesday, February 7, 2012, 11:34 [IST]
English summary
Rolls-Royce, the quintessential British carmaker that was adored by several Indian Maharajas is now adding a bit of India to its cars. The carmaker is importing Malabar Teak wood from India to be used to make veneers used in the interiors of the Ghost and the Phantom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+