ದೇಶದ ರಸ್ತೆಗೆ ರೋಲ್ಸ್ ರಾಯ್ಸ್ ಪಂಟೊಮ್ 2 ಆಗಮನ
ರೋಲ್ಸ್ ರಾಯ್ಸ್ ಕಂಪನಿಯು ದೇಶದ ರಸ್ತೆಗೆ ಪಂಟೊಮ್ ಸೀರಿಸ್ 2ನ್ನು ಪರಿಚಯಿಸಿದೆ. 2003ನೇ ಇಸವಿಯಲ್ಲಿ ಆಗಮಿಸಿದ ಪಂಟೊಮ್ ಕಾರಿನ ನೂತನ ಪರಿಷ್ಕೃತ ಆವೃತ್ತಿ ಇದಾಗಿದೆ. ನೂತನ ಅದ್ದೂರಿ ಕಾರಿನ ದರ ಸುಮಾರು 4.6 ಕೋಟಿ ರುಪಾಯಿ ಇರುವ ನಿರೀಕ್ಷೆಯಿದೆ.
ಬ್ರಿಟನಿನ ಐಷಾರಾಮಿ ಕಾರು ತಯಾರಿಕಾ ಕಂಪನಿಯು ಅದ್ದೂರಿ ವಾಹನಗಳಲ್ಲಿ ಹೊಸ ಸ್ಟಾಂಡರ್ಡ್ ರೂಪಿಸಿದೆ. ಅದ್ದೂರಿ ಮತ್ತು ಆರಾಮದಾಯಕತೆ ಬಯಸುವರಿಗೆ ಪಂಟೋಮ್ ಅನನ್ಯ ಕಾರು. ನೂತನ ಪಂಟೊಮ್ ಸೀರಿಸ್ 2 ಕಾರು ಹಲವು ಹೊಸ ಫೀಚರುಗಳು ಮತ್ತು ತಾಂತ್ರಿಕವಾಗಿ ಅಪ್ ಗ್ರೇಡ್ ಆಗಿ ಆಗಮಿಸಿದೆ.
ನೂತನ ಪಂಟೊಮ್ 2 ಕಾರು ಹೊಸದಾಗಿ ಎಲ್ ಇಡಿ ಹೆಡ್ ಲ್ಯಾಂಪ್, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್, ನ್ಯೂ ಡ್ರೈವರ್ ಅಸಿಸ್ಟೆನ್ಸ್ ಟೆಕ್ನಾಲಜಿ, ಸ್ಯಾಟಲೈಟ್ ನ್ಯಾವಿಗೇಷನ್, ಮುಂಭಾಗ, ಹಿಂಭಾಗ ಮತ್ತು ಮೇಲ್ಮುಖ ನೋಡಬಹುದಾದ ಕ್ಯಾಮರಾಗಳು ಸೇರಿದಂತೆ ಹತ್ತು ಹಲವು ಆಸಕ್ತಿದಾಯಕ ಫೀಚರುಗಳು ಇದರಲ್ಲಿವೆ.
ರೋಲ್ಸ್ ರಾಯ್ಸ್ ಕಂಪನಿಯು ನೂತನ ಪಂಟೊಮ್ ಕಾರಿನ ದರ ಮಾಹಿತಿ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ಇದರ ದರ ಸುಮಾರು 4.6 ಕೋಟಿ ರು.ಗಿಂತ ಹೆಚ್ಚಿರುವ ನಿರೀಕ್ಷೆಯಿದೆ.
ದೇಶದಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಮೂರು ಶೋರೂಂಗಳನ್ನು ಹೊಂದಿದೆ. ಮುಂಬೈ, ದೆಹಲಿ ಮತ್ತು ಹೈದರಾಬಾದ್ ನಲ್ಲಿ ಕಂಪನಿಯು ಶೋರೂಂ ಹೊಂದಿದೆ. ನಾಲ್ಕನೇ ಶೋರೂಂನ್ನು ಚಂಡಿಗಡದಲ್ಲಿ ತೆರೆಯಲಿದೆ. ಐದನೇ ಶೋರೂಂ ತೆರೆಯಲು ಸಹ ಕಂಪನಿ ನಿರ್ಧರಿಸಿದ್ದು, ಸ್ಥಳ ಮಾಹಿತಿ ಪ್ರಕಟಿಸಿಲ್ಲ.


Click it and Unblock the Notifications









