ರೋಲ್ಸ್ ರಾಯ್ಸ್‌ನಿಂದ ಸ್ಪೆಷಲ್ ವೆಡ್ಡಿಂಗ್ ಅಡಿಷನ್ ಕಾರು
ನೀವು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೀರಾ..? ಅಥವಾ ವಿವಾಹ ಸಮಾರಂಭದಲ್ಲಿ ನಿಮ್ಮ ಆಪ್ತರಿಗೆ ಮದುವೆ ಗಿಫ್ಟ್ ಆಗಿ ಕಾರು ನೀಡಲು ಬಯಸುತ್ತೀರಾ? ಅಂದ್ರೆ ಇಲ್ಲಿದೆ ನೋಡಿ ವಿವರ...
ಬ್ರಿಟನ್ ಮೂಲದ ಲಗ್ಷುರಿ ಕಾರು ತಯಾರಕ ಕಂಪನಿ ರೋಲ್ಸ್-ರಾಯ್ಸ್ ಭಾರತ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಸ್ಪೆಷನ್ ವೆಡ್ಡಿಂಗ್ ಅಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದೆ. ಗೋಸ್ಟ್ ಹಾಗೂ ಪಂಟೊಮ್ ಎಂಬ ಎರಡು ಆವೃತ್ತಿಗಳ ಐಷಾರಾಮಿ ಕಾರುಗಳನ್ನು ಈ ಮದುವೆ ಸೀಸನಿನಲ್ಲಿ ರಿಲೀಸ್ ಮಾಡಿವೆ.
ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ರೋಲ್ಸ್ ರಾಯ್ಸ್ ನೂತನ ಸ್ಪೆಷಲ್ ವೆಡ್ಡಿಂಗ್ ಅಡಿಷನ್ ಕಾರುಗಳನ್ನು ಪರಿಚಯಿಸಿದೆ. ಭಾರತದಲ್ಲಿ ಅಕ್ಟೋಬರ್ 30ರ ಬಳಿಕ ಮದುವೆ ಸೀಸನ್ ಆರಂಭವಾಗುತ್ತಿದ್ದು, ಇದರಂತೆ ನವಜೋಡಿ ಕಾರುಗಳನ್ನು ಮಾರುಕಟ್ಟೆಗಿಳಿಸುತ್ತಿದೆ.
ಈ ನೂತನ ಬ್ರಾಂಡ್‌ನಲ್ಲಿ ಗ್ರಾಹಕರಿಗೆ ತಮ್ಮದೇ ಆದ ಕಲರ್ ಆಯ್ಕೆ ಮಾಡುವ ಅವಕಾಶವಿದ್ದು, ಕಾರಿನ ಒಳಭಾಗದ ನಿರ್ದಿಷ್ಟ ಭಾಗದಲ್ಲಿ ತಮ್ಮ ಹೆಸರುಗಳನ್ನು ವಿಶೇಷವಾಗಿ ಲಗತ್ತಿಸಬಹುದಾಗಿದೆ.
2011ನೇ ಸಾಲಿನಲ್ಲಿ ಭಾರತೀಯ ಗ್ರಾಹಕರು 100 ಸೂಪರ್ ಲಗ್ಷುರಿ ಕಾರುಗಳನ್ನು ಖರೀದಿ ಮಾಡಿದ್ದರು. ಇದು 2012 ಸಾಲಿನಲ್ಲಿ ಶೇಕಡಾ 50ರಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ. 2005ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ರೋಲ್ಸ್ ರಾಯ್ಸ್ ಕಂಪನಿಯು ಈ ವರೆಗೆ ದೇಶದಲ್ಲಿ 200 ಕಾರುಗಳನ್ನು ಮಾರಾಟ ಮಾಡಿವೆ. ಅಲ್ಲದೆ 2015ರ ವೇಳೆಗೆ ಪ್ರತಿ ವರ್ಷ 130ರಿಂದ 150 ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.
ವಿಶೇಷ ಸೂಚನೆ: ಅಂದ ಹಾಗೆ ಈ ಕಾರನ್ನು ನೀವು ನಿಜವಾಗ್ಲು ಖರೀದಿಸಲು ಹೊರಟಿದ್ದರೆ ದರ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಯಾಕೆಂದರೆ ಗೋಸ್ಟ್ ಸಲೂನ್ ಪ್ರಸ್ತುತ 2.5ರಿಂದ 3 ಕೋಟಿ ಹಾಗೂ ಪಂಟೊಮ್ ಮಾದರಿ 4.5 ಕೋಟಿ ರೂಪಾಯಿಗಳಷ್ಟು ದುಬಾರಿಯಾಗಿದೆ.

ರೋಲ್ಸ್ ರಾಯ್ಸ್‌ನಿಂದ ಗೋಸ್ಟ್ ಹಾಗೂ ಪಂಟೊಮ್ ಬಿಡುಗಡೆ
ರೋಲ್ಸ್ ರಾಯ್ಸ್ ಸ್ಪೆಷಲ್ ವೆಡ್ಡಿಂಗ್ ಅಡಿಷನ್ ಕಾರು

ರೋಲ್ಸ್ ರಾಯ್ಸ್
ಸ್ಪೆಷಲ್ ವೆಡ್ಡಿಂಗ್ ಅಡಿಷನ್ ಕಾರಿನ ಆಕರ್ಷಕ ವಿನ್ಯಾಸ

ರೋಲ್ಸ್ ರಾಯ್ಸ್
ರೋಲ್ಸ್ ರಾಯ್ಸ್ ಸ್ಪೆಷಲ್ ವೆಡ್ಡಿಂಗ್ ಅಡಿಷನ್ ಲಗ್ಷುರಿ ಕಾರು

ರೋಲ್ಸ್ ರಾಯ್ಸ್
ರೋಲ್ಸ್ ರಾಯ್ಸ್‌ನಿಂದ ಸ್ಪೆಷಲ್ ವೆಡ್ಡಿಂಗ್ ಅಡಿಷನ್ ಗೋಸ್ಟ್ ಹಾಗೂ ಪಂಟೊಮ್ ಬಿಡುಗಡೆ

ರೋಲ್ಸ್ ರಾಯ್ಸ್
ಭಾರತೀಯ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್‌ನಿಂದ ವೆಡ್ಡಿಂಗ್ ಸ್ಪೆಷಲ್ ಅಡಿಷನ್ ಗೋಸ್ಟ್, ಪಂಟೊಮ್ ಕಾರು ಬಿಡುಗಡೆ


Click it and Unblock the Notifications








