ಇನ್ಮುಂದೆ ಇಲ್ಲೂ ರೋಲ್ಸ್ ರಾಯ್ಸ್ ಕಾರು ಖರೀದಿಸಬಹುದು!

ರೋಲ್ಸ್ ರಾಯ್ಸ್ ಕಂಪನಿಯು ದೇಶದಲ್ಲಿ ತನ್ನ ವಹಿವಾಟನ್ನು ವಿಸ್ತರಿಸಲು ಯೋಜಿಸಿದೆ. ಚಂಡಿಗಢದ ನೂತನ ಶೋರೂಂ ಕಂಪನಿಯು ಈ ವರ್ಷ ಶುಭಾರಂಭ ಮಾಡುತ್ತಿರುವ ಎರಡನೇ ಶೋರೂಂ ಆಗಿದೆ.
ರೋಲ್ಸ್ ರಾಯ್ಸ್ ಕಂಪನಿಗೂ ದೇಶಕ್ಕೂ ಹಲವು ದಶಕಗಳ ನಂಟಿದೆ. ದೇಶದ ರಾಜಮಹಾರಾಜರಿಗೂ ರೋಲ್ಸ್ ರಾಯ್ಸ್ ಅಚ್ಚುಮೆಚ್ಚಿನ ಕಾರು ಬ್ರಾಂಡಾಗಿತ್ತು. ಕಂಪನಿಯು ಇತ್ತೀಚೆಗೆ ವಿಸ್ತಾರಗೊಳಿಸಿದ ವೀಲ್ ಬೇಸಿನ ನೂತನ ಘೋಸ್ಟ್ ಕಾರನ್ನು ಪರಿಚಯಿಸಿತ್ತು.
ಇತ್ತೀಚೆಗೆ ರೋಲ್ಸ್ ರಾಯ್ಸ್ ಕಂಪನಿಯು ದೇಶದ ಮಾರುಕಟ್ಟೆಗೆ ಘೋಸ್ಟ್ ಕಾರನ್ನು ಪರಿಚಯಿಸಿತ್ತು. ಇದರ ಆರಂಭಿಕ ದರ ಸುಮಾರು 3.05 ಕೋಟಿ ರುಪಾಯಿ. ಇದು ಪೆಟ್ರೋಲ್ ಎಂಜಿನ್ ಹೊಂದಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








