ಫ್ಯಾನ್ಸಿ ನಂಬರ್ ಪ್ಲೇಟಿಗೆ 17 ಲಕ್ಷ ರು. ನೀಡಿದ ಭೂಪ

ಚಂಡೀಗಡ, ಜೂ 21: ಮೊಹಾಲಿ ಮೂಲದ ಉದ್ಯಮಿ, ಕೃಷಿಕ ಜಗಜಿತ್ ಸಿಂಗ್ ಚಹಲ್(40) ತನ್ನ ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಲ್ಯಾಂಡ್ ಕ್ರೂಷರಿಗೆ ಬರೋಬ್ಬರಿ 17 ಲಕ್ಷ ರುಪಾಯಿಯ ನಂಬರ್ ಪ್ಲೇಟ್ ಹಾಕಿಸಿಕೊಂಡಿದ್ದಾನೆ. ಬಹುಶಃ ಅದು ಬಂಗಾರದ ನಂಬರ್ ಪ್ಲೇಟ್ ಆಗಿರಬಹುದು ಅಂದುಕೊಳ್ಳಬೇಡಿ. ಆತ ಆರ್ ಟಿಒ ಕಚೇರಿಯಲ್ಲಿ ತನ್ನ ಇಷ್ಟದ ನಂಬರಿಗಾಗಿ ಇಷ್ಟೊಂದು ಮೊತ್ತ ಪಾವತಿಸಿದ್ದಾನೆ.

ಚಹಲ್ ಗೆ ನಂಬರ್ 1 ಎಂದರೆ ಏನೋ ಕ್ರೇಝ್. ಆತನ ಮನೆಯ ಹೆಸರು, ಫಾರ್ಮ್ ಹೌಸ್ ಹೆಸರು, ಮೊಬೈಲ್ ನಂಬರ್ ಸಂಖ್ಯೆ ಎಲ್ಲವೂ ಅಂತ್ಯವಾಗುವುದು ನಂಬರ್ ಒಂದರಲ್ಲೇ!. ವಿಶೇಷವೆಂದರೆ ಆತನಲ್ಲಿ ಒಟ್ಟು 8 ಕಾರುಗಳಿವೆ. ಆ ಎಲ್ಲಾ ಕಾರುಗಳ ರಿಜಿಸ್ಟ್ರೇಷನ್ ಸಂಖ್ಯೆ 0001 ಅಂಕಿ ಹೊಂದಿವೆ.


ಇತ್ತೀಚೆಗೆ ಚಂಡಿಗಢದಲ್ಲಿ ನಡೆದ ವಾಹನ ರಿಜಿಸ್ಟ್ರೇಷನ್ ಸಂಖ್ಯೆ ಹರಾಜಿನಲ್ಲಿ ತನ್ನ ಹೊಸ ಲ್ಯಾಂಡ್ ಕ್ರೈಷರ್ ಕಾರಿಗಾಗಿ 17 ಲಕ್ಷ ರುಪಾಯಿ ನೀಡಿ ಫ್ಯಾನ್ಸಿ ನಂಬರ್ ತನ್ನದಾಗಿಸಿಕೊಂಡಿದ್ದಾನೆ. ಇಷ್ಟೊಂದು ಮೊತ್ತ ಪಾವತಿಸಲು ಆತ ಯಾವುದೇ ಚಿಂತೆ ಮಾಡಿಲ್ಲ. "ನನ್ನ ಇಷ್ಟದ ನಂಬರ್ ಸಿಕ್ತಲ್ವ, ಪುಣ್ಯ" ಎಂದು ಪ್ರತಿಕ್ರಿಯಿಸಿದ್ದಾನೆ.

ಈತನಿಗೆ ನಂಬರ್ ಹುಚ್ಚು ತನ್ನ 20ನೇ ವಯಸ್ಸಿನಲ್ಲೇ ಶುರುವಾಗಿತ್ತಂತೆ. ಲುದಿಯಾನದಲ್ಲಿ ಖರೀದಿಸಿದ ತನ್ನ ಮಾರುತಿ 800 ಕಾರಿಗೆ ಪಿಬಿ10 ಕೆ 0001 ಎಂಬ ರಿಜಿಸ್ಟ್ರೇಷನ್ ನಂಬರ್ ಪಡೆದಿದ್ದ. ಆಗ ಯಾವುದೇ ಹರಾಜು ಪ್ರಕ್ರಿಯೆ ನಡೆಯುತ್ತಿರಲಿಲ್ಲ. ಆತನ ಮೊಬೈಲ್ ಸಂಖ್ಯೆ ಕೂಡ ಕೊನೆಗೊಳ್ಳುವುದು ಒಂದು ನಂಬರಲ್ಲೇ ಅನ್ನೋದು ವಿಶೇಷ.

ಈಗ ಈತನಲ್ಲಿ ಅರ್ಧ ಡಜನ್ ಐಷಾರಾಮಿ ಕಾರುಗಳಿವೆ. ಎಲ್ಲದರ ರಿಜಿಸ್ಟ್ರೇಷನ್ ನಂಬರ್ 0001. ಆತನ ಕಂಪನಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿಗಳ ಬೈಕ್, ಕಾರುಗಳ ರಿಜಿಸ್ಟ್ರೇಷನ್ ಸಂಖ್ಯೆ ಕೂಡ 0001. ಅವರಿಗೂ ಫ್ಯಾನ್ಸಿ ನಂಬರ್ ಹುಚ್ಚು ಹತ್ತಿಸಲು ಯಶಸ್ವಿಯಾಗಿದ್ದಾನೆ ಚಹಲ್.

More from DriveSpark

Article Published On: Thursday, June 21, 2012, 13:43 [IST]
English summary
Chandigarh businessman Jagjit Singh Chahal(40) getting Fancy car registration number at Rs 17 Lakh. His Mobile Number, 8 Cars registration Number all ending with 0001.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+