ಸಿಎನ್ಜಿ vs ಡೀಸೆಲ್: ಯಾವುದು ಬೆಸ್ಟ್ ಕಾರು?

ದೇಶದಲ್ಲೀಗ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಡೀಸೆಲಿಗೆ ಡರ್ಟಿ ಇಂಧನ ಅನ್ನೋ ಕುಖ್ಯಾತಿಯಿದ್ದರೂ, ಪೆಟ್ರೋಲ್ ಕಾರಿಗಿಂತ ಡೀಸೆಲ್ ಕಾರಿಗೆ ಬೆಲೆ ಹೆಚ್ಚಿದ್ದರೂ, ಮೇಟೆಂನ್ಸ್ ಮತ್ತು ರಿಪೇರಿ ವೆಚ್ಚ ಡೀಸೆಲ್ ಕಾರುಗಳಿಗೆ ಹೆಚ್ಚಿದಾಗ್ಯೂ ಜನರು ಡೀಸೆಲ್ ಕಾರು ಖರೀದಿಗೆ ಯಾವುದೇ ಲಗಾಮು ಹಾಕುತ್ತಿಲ್ಲ.

ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ರನ್ನಿಂಗ್ ವೆಚ್ಚ ಕಡಿಮೆ. ಸಿಎನ್ ಜಿ ಹೊರತಾಗಿ ದೇಶದಲ್ಲೀಗ ಅಗ್ಗದ ಇಂಧನವೆಂಬ ಖ್ಯಾತಿಯನ್ನು ಡೀಸೆಲ್ ಪಡೆದಿದೆ. ಸಿಎನ್ಜಿ ಕಡಿಮೆ ಮಾಲಿನ್ಯಕಾರಕ ಹೊಂದಿದ್ದರೂ ಡೀಸೆಲ್ ನಷ್ಟು ಜನಪ್ರಿಯವಲ್ಲ.

ಪೆಟ್ರೋಲಿಗಿಂತ ಸಿಎನ್ ಜಿ ಅಥವಾ ಸಂಕುಚಿತ ನೈಸರ್ಗಿಕ ಅನಿಲ ಅಗ್ಗ. ಆದರೆ ಸಿಎನ್ ಜಿ ಇಂಧನದ ಅಲಭ್ಯತೆ ಪ್ರಮುಖ ಸಮಸ್ಯೆ. ಇದನ್ನು ಮನಗಂಡು ಹೆಚ್ಚಿನ ಕಾರು ಕಂಪನಿಗಳು ಡೀಸೆಲ್ ಕಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಸಿಎನ್ಜಿ ಇಂಧನ ಈಗ ಕೇವಲ ದೆಹಲಿ, ಮುಂಬೈ ಮತ್ತಿತರ ನಗರಗಳಲ್ಲಿ ಹೆಚ್ಚು ಚಾಲ್ತಿಯಲ್ಲಿವೆ.

ಇತರ ಯಾವುದೇ ಇಂಧನಕ್ಕೆ ಹೋಲಿಸಿದರೆ ಸಿಎನ್ಜಿ ರನ್ನಿಂಗ್ ವೆಚ್ಚ ಕಡಿಮೆ ಎಂದು ಹೆಚ್ಚಿನವರು ವಾದಿಸಬಹುದು. ಆದರೆ ಈಗ ಈ ವಾದ ಸಂಪೂರ್ಣ ಸತ್ಯವಲ್ಲ. ಉದಾಹರಣೆಗೆ ಸಿಎನ್ ಜಿ ಚಾಲೀತ ಮಾರುತಿ ಸ್ವಿಫ್ಟ್ ಅಥವಾ ಹ್ಯುಂಡೈ ಐ10 ರನ್ನಿಂಗ್ ವೆಚ್ಚ 2.1 ರು. ಮತ್ತು ಡೀಸೆಲ್ ಆವೃತ್ತಿಗಳ ರನ್ನಿಂಗ್ ವೆಚ್ಚ 1.75 ರು. ಆಗಿದೆ.

ಡೀಸೆಲ್ ದರಗಳಿಗೆ ಹೋಲಿಸಿದರೆ ಗ್ಯಾಸ್ ದರ ಅನಿಯಂತ್ರಿತವಾಗಿ ಏರಿಕೆ ಕಾಣುತ್ತಿದೆ. ಇದು ಕೂಡ ಸಿಎನ್ ಜಿ ಕಾರು ಮಾರಾಟ ಇಳಿಕೆಗೆ ಪ್ರಮುಖ ಕಾರಣ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರ್ ಡೀಸೆಲ್ ಆವೃತ್ತಿಗಳ ವೇಟಿಂಗ್ ಪಿರೆಯಿಡ್ ಐದು ತಿಂಗಳಿಗಿಂತ ಹೆಚ್ಚಿದೆ. ಆದರೆ ಇವು ಸಿಎನ್ ಜಿ ಆಯ್ಕೆಯಲ್ಲಿ ದೊರಕುವುದಿಲ್ಲ.

ಕೆಲವು ಕಡೆ ವ್ಯಾಗನಾರ್ ಮತ್ತು ಆಲ್ಟೊ ಸಿಎನ್ ಜಿ ಆವೃತ್ತಿಗಳು ದೊರಕುತ್ತಿವೆ. ಡೀಸೆಲ್ ಕಾರುಗಳ ಅನನ್ಯ ಡ್ರೈವಿಂಗ್ ಅನುಭವಕ್ಕೆ ಹೋಲಿಸಿದರೆ ಸಿಎನ್ಜಿ ಚಾಲನೆ ಅನುಭವ ಸಪ್ಪೆ ಎನಿಸುವುದು ಕೂಡ ಸಿಎನ್ಜಿ ಬೇಡಿಕೆ ಇಳಿಕೆಗೆ ಕಾರಣ

ಮಾರುತಿ ಸುಜುಕಿ, ಹ್ಯುಂಡೈ ಮತ್ತು ಜನರಲ್ ಮೋಟರ್ಸ್ ಮುಂತಾದ ಕಾರು ಕಂಪನಿಗಳು ಹಲವು ಸಿಎನ್ಜಿ ಕಾರುಗಳನ್ನು ಪರಿಚಯಿಸಿವೆ. ಆದರೆ ಈ ಕಂಪನಿಗಳು ಈಗ ಡೀಸೆಲ್ ಕಾರು ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿವೆ. ಈಗ ಡೀಸೆಲ್ ಕಾರುಗಳೇ ಕಿಂಗ್ ಆಗಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Saturday, March 24, 2012, 9:11 [IST]
English summary
Diesel Cars have become a rage in India for a reason. Despite diesel's tag of being a dirty fuel, diesel cars costing more than petrol cars or even higher maintenance and repair costs of diesel cars have not stopped people from buying diesel cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+