ಸಲಹೆ: ಕಳ್ಳರಿಂದ ಕಾರನ್ನು ರಕ್ಷಿಸಿಕೊಳ್ಳುವುದು ಹೇಗೆ?
ಆ ಓದುಗರು ನೀಡಿದ ಸಲಹೆಯಾದರೂ ಎಂಥದು? ಕಳ್ಳರಿಂದ ಪಾರಾಗಲು ಕಾರು ಮಾರಿಬಿಡಿ, ಟೈರ್ ಸ್ಟಿಯರಿಂಗ್ ಗೇರ್ ಬಿಚ್ಚಿಡಿ ಅಂತ ಕೆಲವರು ಸಲಹೆ ನೀಡಿದ್ದಾರೆ. ಓದುಗರು ನೀಡಿದ ಸಲಹೆಗಳು ಒಬ್ಬರಿಗಿಂತ ಇನ್ನೊಬ್ಬರದು "ಅದ್ಭುತ"ವಾಗಿದೆ ನೀವೇ ಓದಿ ನೋಡಿ.
ಕಳ್ಳರಿಂದ ಕಾರನ್ನು ರಕ್ಷಿಸಲು ನಮ್ಮ ಸಲಹೆ
* ಕಾರು ಲಾಕ್ ಮಾಡಿ
* ಹೆಚ್ಚುವರಿ ಕೀಲಿಕೈಯನ್ನು ಪತ್ತೆಯಾಗಬಹುದಾದ ಸ್ಥಳದಲ್ಲಿ ಅಡಗಿಸಿಡಬೇಡಿ.
* ಕಾರನ್ನು ಸ್ಟಾರ್ಟಿನಲ್ಲೇ ಬಿಟ್ಟು, ಲಾಕ್ ಮಾಡದೆ ಹೊರಕ್ಕೆ ಹೋಗಬೇಡಿ.
* ಸುರಕ್ಷಿತ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿ.
* ಕಾರಿನ ಕಿಟಕಿ ಗಾಜುಗಳನ್ನು ಮೇಲೆರಿಸಲು ಮರೆಯದಿರಿ.
* ಹಳೆ ವಾಹನವೆಂದು ನಿರ್ಲಕ್ಷಿಸಬೇಡಿ. ಹಳೆವಾಹನದ ಬಿಡಿಭಾಗಗಳಿಗೂ ಒಳ್ಳೆ ಬೆಲೆಯಿದೆ. ಕಳ್ಳರು ಅದನ್ನೂ ಬಿಡುವುದಿಲ್ಲ.
* ಕಳ್ಳರಿಂದ ಎಚ್ಚರಿಸುವ ಅಲಾರಂ ಅಳವಡಿಸಿರಿ.
* ಎಂಜಿನ್ ಲಾಕ್, ಇಗ್ನಿಷನ್ ಲಾಕ್ ಇತ್ಯಾದಿಗಳನ್ನು ಬಳಸಿ.
* ಗೇರ್ ಶಿಫ್ಟ್ ಲಾಕ್ ಮಾಡಬಹುದು.
* ಟೈರ್ ಲಾಕ್ ಮಾಡಬಹುದು.
* ವೆಹಿಕಲ್ ಟ್ರ್ಯಾಕಿಂಗ್ ಇತ್ಯಾದಿ ಸಾಧನಗಳನ್ನು ಬಳಸಬಹುದು.
* ವಿಐಎನ್ ಪ್ಲೇಟ್ ಸುರಕ್ಷಿತವಾಗಿರಲಿ. ಕಳ್ಳರು ಕಾರು ಕದ್ದು ವಿಐಎನ್ ಬದಲಾಯಿಸಬಹುದು.
* ಕಳ್ಳರು ಕಾರು ಪ್ರವೇಶಿಸಿದರೆ ಎಚ್ಚರಿಸುವ ಅತ್ಯಾಧುನಿಕ ಸುರಕ್ಷಿತ ಸಾಧನಗಳನ್ನು ಬಳಸಬಹುದು.


Click it and Unblock the Notifications









