ಸ್ಕೋಡಾ ಇಂಡಿಯಾ: ಸುಧೀರ್ ರಾವ್ ನೂತನ ಎಂಡಿ

ಸುಧೀರ್ ರಾವ್(52) ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಾಹನ ವಿಶ್ಲೇಷಕರಾಗಿದ್ದಾರೆ. ಇವರು ಹುಟ್ಟಿದ್ದು ಭಾರತದಲ್ಲಿ. ಓದಿದ್ದು ಅಮೆರಿಕದಲ್ಲಿ. ಯುರೋಪ್ ಮತ್ತು ಅಮೆರಿಕಗಳಲ್ಲಿ ವೃತ್ತಿ ಅನುಭವ ಹೊಂದಿದ್ದಾರೆ. ಈ ಹಿಂದೆ ಇವರು ರೆನಾಲ್ಟ್ ಇಂಡಿಯಾ ಕಂಪನಿಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ವರ್ಷದ ಆರಂಭದಲ್ಲಿ ರೆನಾಲ್ಟ್ ಕಂಪನಿಗೆ ಇವರು ರಾಜಿನಾಮೆ ನೀಡಿದ್ದರು.
"ಸುಧೀರ್ ರಾವ್ ವಾಹನೋದ್ಯಮದಲ್ಲಿ ಅಂತಾರಾಷ್ಟ್ರೀಯಮಟ್ಟದ ಪರಿಣತಿ ಹೊಂದಿದ್ದಾರೆ. ಇದರೊಂದಿಗೆ ದೇಶದ ವಾಹನ ಮಾರುಕಟ್ಟೆಯ ಕುರಿತು ಅವರ ಅನುಭವ ಪ್ರಶ್ನಾತೀತ" ಎಂದು ಸ್ಕೋಡಾ ಆಟೋ ಇಂಡಿಯಾ ಸಿಇಒ ವಿನ್ ಫ್ರೆಡ್ ವೆಲಾಂಡ್ ಹೇಳಿದ್ದಾರೆ.


Click it and Unblock the Notifications








