ಅಮಿರ್ ಖಾನ್ ಸತ್ಯಮೇವ ಜಯತೆಗೆ ಸ್ಕೋಡಾ ಸಾಥ್
ಬಾಲಿವುಡ್ ನಟ ಅಮಿರ್ ಖಾನ್ ಸಾರಥ್ಯದ ಟೆಲಿವಿಷನ್ ಶೋ ಸತ್ಯಮೇವ ಜಯತೆ ಜೊತೆ ಪಾಲುದಾರ ಒಪ್ಪಂದವೊಂದಕ್ಕೆ ಸ್ಕೋಡಾ ಇಂಡಿಯಾ ಸಹಿ ಹಾಕಿದೆ. ಈ ಶೋ ಜೊತೆ ದೇಶಾದ್ಯಂತ ಇರುವ ಗ್ರಾಹಕರನ್ನು ತಲುಪಲು ಕಂಪನಿಯು ನಿರ್ಧರಿಸಿದೆ.
ಸತ್ಯಮೇವ ಜಯತೆ ಟಿವಿ ಶೋ ಮೇ ಆರರಂದು ಸ್ಟಾರ್ ನೆಟ್‌ವರ್ಕ್‌ನ ಹಲವು ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಸುಮಾರು 40 ಲಕ್ಷ ವೀಕ್ಷಕರು ಸತ್ಯಮೇವ ಜಯತೆ ಕಾರ್ಯಕ್ರಮ ನೋಡುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಪ್ರಚಾರ ನೀಡುವ ಮೂಲಕ ಗ್ರಾಹಕರನ್ನು ತಲುಪುವ ನಿರೀಕ್ಷೆಯಿದೆ.
"ಸತ್ಯಮೇವ ಜಯತೆ ಕಾರ್ಯಕ್ರಮದ ಜೊತೆ ಭಾಗಿಯಾಗುವುದಕ್ಕೆ ಸ್ಕೋಡಾ ಇಂಡಿಯಾ ಕಂಪನಿಗೆ ಸಂತೋಷವಾಗುತ್ತಿದೆ. ಇದು ದೇಶದಲ್ಲಿ ನಮ್ಮ ಬ್ರಾಂಡ್ ಇನ್ನಷ್ಟು ಸದೃಢಗೊಳಿಸಲು ನೆರವಾಗಲಿದೆ" ಎಂದು ಸ್ಕೋಡಾ ಇಂಡಿಯಾ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕಮಲ್ ಬಸು ಹೇಳಿದ್ದಾರೆ.
ಸ್ಕೋಡಾ ಕಂಪನಿಯು ಇಂತಹ ಕಾರ್ಯಕ್ರಮಗಳ ಜೊತೆ ಮೈತ್ರಿ ಮಾಡುವುದು ಇದು ಮೊದಲೇನಲ್ಲ. ಇತ್ತೀಚೆಗೆ ಕಂಪನಿಯು ಪಂಟೊಲೊನ್ ಫೆಮಿನಾ ಮಿಸ್ ಇಂಡಿಯಾ(ಪಿಇಎಂಐ) ಜೊತೆ ಪಾಲುದಾರಿಕೆ ಮಾಡಿತ್ತು. ಇಲ್ಲಿ ಸೌಂದರ್ಯಸ್ಫರ್ಧೆಯಲ್ಲಿ ಗೆದ್ದವರಿಗೆ ಕಂಪನಿಯು ಕಾರು ಉಡುಗೊರೆ ನೀಡಿತ್ತು.


Click it and Unblock the Notifications









