ಐದು ಡೋರಿನ ಅಗ್ಗದ ಸ್ಕೋಡಾ ಸಿಟಿಗೊ ಅನಾವರಣ

Skoda Unveils Cheapest Car Citigo
ಜೆಕ್ ಗಣರಾಜ್ಯದ ಕಾರು ಕಂಪನಿ ಸ್ಕೋಡಾ ನೂತನ ಐದು ಡೋರಿನ ಸಿಟಿಗೊ ಸಣ್ಣಕಾರನ್ನು ಅನಾವರಣ ಮಾಡಿದೆ. ನೂತನ ಸಿಟಿಗೊ ಕಾರನ್ನು ಮುಂಬರುವ ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದಂತೆ.

ಸ್ಕೋಡಾ ಅಗ್ಗದ ಕಾರನ್ನೇ ಮೂಲವಾಗಿರಿಸಿಕೊಂಡು ಫೋಕ್ಸ್ ವ್ಯಾಗನ್ ಕಂಪನಿಯು "ಅಪ್" ಕಾರನ್ನು ಅನಾವರಣ ಮಾಡಲಿದೆ. ಸ್ಕೋಡಾ ಸಿಟಿಗೊ ಮತ್ತು ಫೋಕ್ಸ್ ವ್ಯಾಗನ್ ಅಪ್ ನಡುವೆ ಯಾವುದೇ ಮಹತ್ವದ ವ್ಯತ್ಯಾಸಗಳಿಲ್ಲ.

ನೂತನ ಸ್ಕೋಡಾ ಸಿಟಿಗೊ ಕಾರು ಒಂದು ಲೀಟರ್, ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 59 ಅಥವಾ 75 ಹಾರ್ಸ್ ಪವರ್ ನೀಡುವ ನಿರೀಕ್ಷೆಯಿದೆ. ಫೋಕ್ಸ್ ವ್ಯಾಗನ್ ಅಪ್ ಕಾರಿನಂತೆ ವೆರಿಟೊ ಕೂಡ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ದೊರಕಲಿದೆ.

ಅಭಿವೃದ್ಧಿಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಿಗೆ ಅಪ್ ಕಾರನ್ನು ಪರಿಚಯಿಸುವುದಾಗಿ ಈಗಾಗಲೇ ಫೋಕ್ಸ್ ವ್ಯಾಗನ್ ಹೇಳಿದೆ. ನೂತನ ಸಿಟಿಗೊ ಕಾರು ದೇಶದ ರಸ್ತೆಗೆ ಆಗಮಿಸುವ ಕುರಿತು ಯಾವುದೇ ಸೂಚನೆ ಕಂಪನಿಯ ಕಡೆಯಿಂದ ಇನ್ನೂ ದೊರಕಿಲ್ಲ.

ಸ್ಕೋಡಾ ಸಿಟಿಗೊ ಕಾರಿನ ದರವು ಫೋಕ್ಸ್ ವ್ಯಾಗನ್ ಅಪ್ ಗಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಯಾಕೆಂದರೆ ಸಾಂಪ್ರಾದಾಯಿಕವಾಗಿ ಫೋಕ್ಸ್ ಕಾರಿಗಿಂತ ಸ್ಕೋಡಾ ಕಾರುಗಳು ಯಾವತ್ತೂ ಅಗ್ಗವಾಗಿರುತ್ತದೆ. ಕೆಲವು ವರದಿಗಳ ಪ್ರಕಾರ ದೇಶದ ರಸ್ತೆಗೆ ಮುಂದಿನ ವರ್ಷ ಸಿಟಿಗೊ ಆಗಮಿಸಲಿದೆಯಂತೆ.

More from DriveSpark

Article Published On: Wednesday, February 1, 2012, 16:08 [IST]
English summary
Skoda, the Czech carmaker has unveiled the five door version of its latest small car Citigo. The Citigo is the re-badged version of the Volkswagen Up and will soon hit the European car market. The five door Citigo will be on display at the forthcoming Geneva Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+