ಏಸಿ ಹಾಕಿ ಕಾರಿನೊಳಗೆ ಮಲಗಿದ್ರೆ ಸಾವು ಬರಬಹುದು!

ಶಾಪಿಂಗ್ ಮಾಡಿ ಸುಸ್ತಾಗಿಯೋ, ಹೊಟ್ಟೆ ತುಂಬಾ ಊಟ ಮಾಡಿಯೋ, ಕಚೇರಿಯಲ್ಲಿ ಕೂತು ಕೂತೋ ನಿಮಗೆ ಒದ್ದುಕೊಂಡು ನಿದ್ದೆ ಬರುತ್ತಿರಬಹುದು. ಸೀದಾ ಪಾರ್ಕ್ ಮಾಡಿದ ಕಾರಿನಲ್ಲಿಗೆ ಹೋಗಿ, ಏರ್ ಕಂಡಿಷನ್ ಆನ್ ಮಾಡಿ, ಡೋರ್ ಬಂದ್ ಮಾಡಿ ಒಂದು ಗಡದ್ ನಿದ್ದೆ ಮಾಡೋ ಪ್ಲಾನ್ ನಿಮಗಿರಬಹುದು. ಕಾರಿನೊಳಗೆ ಹೀಗೆ ನಿದ್ದೆ ಮಾಡೋದು ಹೆಚ್ಚಿನ ಜನರ ದಿನಚರಿ ಕೂಡ.

ಆದರೆ ಕಾರಿನೊಳಗೆ ಹೀಗೆ ನಿದ್ದೆ ಮಾಡುವುದು ತರವಲ್ಲವೆಂದು ಕೆಲವು ವ್ಯೆದ್ಯರು ಹೇಳುತ್ತಾರೆ. ಕಾರಿನೊಳಗೆ ನಿದ್ದೆ ಮಾಡುವುದು ಸಾವಿಗೆ ಅಹ್ವಾನವೆಂದು ಅವರು ಎಚ್ಚರಿಸುತ್ತಾರೆ. ಕಾರಿನೊಳಗಿನ ಬಿಸಿಗೆ ಸಿಲುಕಿ ಸಾಯೋ ಮಕ್ಕಳ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಕಾರಿನೊಳಗೆ ಮಲಗುವ ಎಲ್ಲಾ ವಯೋಮಾನದವರಿಗೂ ಅಪಾಯ ಗ್ಯಾರಂಟಿ ಎಂದು ನೂತನ ವರದಿ ಹೇಳಿದೆ.

ಒಂದರ್ಧ ಗಂಟೆ ಹೀಗೆ ಕಾರಿನೊಳಗೆ ಮಲಗಿದರೆ ಉಸಿರುಗಟ್ಟುವಿಕೆ ಆರಂಭವಾಗುತ್ತದೆ ಎಂದು ಮೆಡಿಕಲ್ ಎಕ್ಸಪರ್ಟುಗಳು ಹೇಳುತ್ತಾರೆ. ಹೊಸ ಕಾರು ಅಥವಾ ಹಳೆ ಕಾರೆಂಬ ಭೇದಭಾವವಿಲ್ಲದೆ ಕಾರಿನೊಳಗೆ ಸದ್ದಿಲ್ಲದೇ ಸಾವು ಬರಬಹುದಂತೆ. ಕಾರಿನೊಳಗೆ ಮಲಗುವುದರಿಂದ ಹತ್ತು ಹಲವು ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು ಎಂದು ಮುಂಬೈ ಮೆಡಿಕಲ್ ಕೇಂದ್ರವೊಂದರ ವ್ಯದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಾರಿನ ಎಗ್ಸಾಸ್ಟ್ ನಿಂದ ಸೋರಿದ ಅನಿಲಗಳು ಕಾರಿನ ಕ್ಯಾಬಿನೊಳಗೆ ಪ್ರವೇಶಿಸುತ್ತವೆ. ಕಾರಿನೊಳಗಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಉಸಿರುಗಟ್ಟುವುದು ಗ್ಯಾರಂಟಿ. ಎಗ್ಸಾಸ್ಟ್ ನಿಂದ ಹೊರ ಸೂಸುವ ಕಾರ್ಬನ್ ಮಾನಾಕ್ಷೈಡಂತೂ ಹೆಚ್ಚು ಅಪಾಯಕಾರಿ.

ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಏರ್ ಕಂಡಿಷನ್ ಇದ್ರೂ ಉಸಿರುಗಟ್ಟುವ ಅಪಾಯ ಇದ್ದೇ ಇದೆ. ಹೆಚ್ಚು ಗಾಳಿಯಾಡದ, ತುಂಬಾ ಹತ್ತಿರದ ಸ್ಥಳಾವಕಾಶದಲ್ಲಿ ಉಸಿರಾಡುವುದು ಒಳ್ಳೆಯದಲ್ಲ. ಇಲ್ಲಿ ಕಾರ್ಬನ್ ಮಾನಾಕ್ಷೈಡ್ ಹೆಚ್ಚುವ ಮತ್ತು ಆಮ್ಲಜನಕ ಪ್ರಮಾಣ ಕಡಿಮೆಯಾಗುವ ಅಪಾಯವಿದೆ.

ಕಾರಿನೊಳಗೆ ಮಲಗಲೇ ಬೇಕೆಂಬ ಅನಿವಾರ್ಯತೆ ಇದ್ದರೆ ಏರ್ ಕಂಡಿಷನ್ ಆಫ್ ಮಾಡಿ ಕಾರಿನ ಡೋರ್ ತೆರೆದಿಟ್ಟು ಮಲಗಬಹುದು. ಆದರೆ ಹಾಗೆ ಮೈ ಮರೆತು ಮಲಗಿದರೆ ಕಳ್ಳ ಕಾಕರ ಭಯವೂ ಇದ್ದೇ ಇದೆ. ಕಾರಿನೊಳಗೆ ಮಲಗಿದ್ರೆ ಮಾತ್ರ ಅಪಾಯವೇ? ಹಾಗಾದ್ರೆ ಬೆಳಗ್ಗೆಯಿಂದ ಸಂಜೆವರೆಗೆ ಏಸಿ ಹಾಕಿ ಕಾರು ಡ್ರೈವಿಂಗ್ ಮಾಡುವರಿಗೆ ಅಪಾಯವಿಲ್ವೆ? ಎಂಬ ಪ್ರಶ್ನೆ ಹೆಚ್ಚಿನವರಿಗಿದೆ. ಪ್ರಯಾಣಿಸುವ ಕಾರಿನೊಳಗೆ ಗಾಳಿಯ ಹರಿವು ಇರುವುದರಿಂದ ಅಪಾಯಕಾರಿಯಲ್ಲ.

More from DriveSpark

Article Published On: Saturday, August 25, 2012, 15:29 [IST]
English summary
Sleeping in AC Car many people habit. But medical experts says sleeping in AC Car kill you due to suffocation.
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+