ಸ್ಯಾಂಗ್ಯೊಂಗ್ ಮೋಟರ್ ಮಾರಾಟ ಪ್ರಗತಿ ಅತ್ಯುತ್ತಮ
2012ರ ಪ್ರಥಮ ತ್ರೈಮಾಸಿಕದಲ್ಲಿ ಸ್ಯಾಂಗ್ಯೊಂಗ್ ಮೋಟರ್ ಕಂಪನಿಯ ವಾಹನ ಮಾರಾಟವು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 6.9ರಷ್ಟು ಏರಿಕೆ ಕಂಡಿದೆ.
ಮಹೀಂದ್ರ ಮಾಲಿಕತ್ವದ ಸ್ಯಾಂಗ್ಯೊಂಗ್ ಕಂಪನಿಯು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 26,441 ವಾಹನ ಮಾರಾಟ ಮಾಡಿದೆ. "ಕಂಪನಿಯು ಈ ವರ್ಷವನ್ನು ಸಕಾರಾತ್ಮಕವಾಗಿ ಆರಂಭಿಸಿರುವುದು ಸಂತೋಷ ತಂದಿದೆ" ಎಂದು ಕಂಪನಿಯ ಸಿಇಒ ಲಿ ಯೊ ಲಿ ಹೇಳಿದ್ದಾರೆ.
2012ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟ ವಾಲ್ಯೂಂ ಪ್ರಗತಿ ಶೇಕಡ 6.9ರಷ್ಟಾಗಿದೆ. ಇದೇ ಸಮಯದಲ್ಲಿ ಕಂಪನಿಯ ಆದಾಯ ಶೇಕಡ 3.8ರಷ್ಟು ಏರಿಕೆ ಕಂಡಿದೆ. ಕಂಪನಿಯ ವಹಿವಾಟು ನಷ್ಟ ಶೇಕಡ 22.0ರಷ್ಟು ಇಳಿಕೆ ಕಂಡಿದೆ.
ಆದರೆ ಇದೇ ಸಮಯದಲ್ಲಿ ಕಂಪನಿಯ ದೇಶಿ ಮಾರಾಟ ಶೇಕಡ 3ರಷ್ಟು ಇಳಿಕೆ ಕಂಡಿದೆ. ರಫ್ತು ವಹಿವಾಟು ಶೇಕಡ 13ರಷ್ಟು ಏರಿಕೆ ದಾಖಲಿಸಿದೆ.


Click it and Unblock the Notifications









