ಕಾರ್ ಪಾರ್ಕಿಂಗ್ ಸ್ಥಳ ಕಂಡು ಹಿಡಿಯಲು ಆ್ಯಪ್

ಬೆಂಗಳೂರಿನಂತಹ ನಗರಗಳಲ್ಲಿ ಕಾರು ಮತ್ತು ಬೈಕ್ ಪಾರ್ಕಿಂಗ್ ಸ್ಥಳಾವಕಾಶ ಕಂಡು ಹಿಡಿಯುವುದು ತುಂಬಾ ಕಷ್ಟ. ಕಾರು ಪಾರ್ಕ್ ಮಾಡಲು ಬೀದಿ ಬೀದಿ ಅಳೆದಾಡುವ ಅನಿವಾರ್ಯತೆ ಇದೆ. ಆದರೆ ಇದೀಗ ನಾವು ಸಂಚರಿಸುವ ರಸ್ತೆಯಲ್ಲಿರುವ ಪಾರ್ಕಿಂಗ್ ಸ್ಥಳಾವಕಾಶದ ಕುರಿತು ಮಾಹಿತಿ ನೀಡಲು ನೆರವಾಗುವಂತಹ ಅಪ್ಲಿಕೇಷನೊಂದನ್ನು ಅಭಿಪಡಿಸಲಾಗಿದೆ.

ಸೆನ್ಸಾರ್ ಆಧರಿತ ಈ ಅಪ್ಲಿಕೇಷನ್ ವಾಹನ ಚಾಲಕರಿಗೆ ಪಾರ್ಕಿಂಗ್ ಸ್ಥಳಾವಕಾಶ ಲಭ್ಯವಿರುವ ಸ್ಥಳದ ಕುರಿತು ಮಾಹಿತಿ ನೀಡುತ್ತದೆ. ಲಂಡನಿನ ವೆಸ್ಟ್ ಮಿನಿಸ್ಟರ್ ಸಿಟಿ ಕೌನ್ಸಿಲ್ ನೇತೃತ್ವದಲ್ಲಿ ಈ ಸೆನ್ಸಾರ್ ಆ್ಯಪ್ ಪರೀಕ್ಷಿಸಲಾಗಿದೆ. ಈ ಅಪ್ಲಿಕೇಷನನ್ನು ಆರಂಭದಲ್ಲಿ ಯುರೋಪ್ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಲಾಗಿದೆ.

ರಸ್ತೆಯ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಕಾರುಗಳಲ್ಲಿ ಜೋಡಿಸಿರುವ ಸೆನ್ಸಾರುಗಳು ಲಭ್ಯವಿರುವ ಪಾರ್ಕಿಂಗ್ ಸ್ಥಳಾವಕಾಶದ ಕುರಿತು ಮಾಹಿತಿ ಪಡೆಯುತ್ತವೆ. ಈ ಮಾಹಿತಿಗಳು ಸ್ಮಾರ್ಟ್ ಫೋನ್, ಐಪ್ಯಾಡ್ ಮತ್ತು ಟ್ಯಾಬ್ಲೆಟ್ ಸಾಧನಗಳಿಗೆ ರವಾನೆಯಾಗುತ್ತದೆ. ವಾಹನ ಚಾಲಕರು ತಮ್ಮಲ್ಲಿ ಇನ್ ಸ್ಟಾಲ್ ಮಾಡಿರುವ ಅಪ್ಲಿಕೇಷನ್ ನೆರವಿನಿಂದ ಪಾರ್ಕಿಂಗ್ ಸ್ಥಳಾವಕಾಶ ಲಭ್ಯತೆ ಕಂಡುಹಿಡಿಯಬಹುದು.

ಅಂತಾರಾಷ್ಟ್ರೀಯ ಸಂಶೋಧನೆಯ ಪ್ರಕಾರ ನಗರಗಳಲ್ಲಿ ವಾಹನ ಚಾಲಕರು ಪಾರ್ಕಿಂಗ್ ಸ್ಥಳಾವಕಾಶ ಕಂಡು ಹಿಡಿಯಲು ಸರಾಸರಿ 15 ನಿಮಿಷ ವ್ಯಯ ಮಾಡುತ್ತಾರಂತೆ. ನೂತನ ಅಪ್ಲಿಕೇಷನ್ ಬಂದ ನಂತರ ವಾಹನ ಸವಾರರಿಗೆ ಪಾರ್ಕಿಂಗ್ ಸ್ಥಳ ಹುಡುಕಾಟ ಸುಲಭವಾಗಲಿದೆ.

ಪಾರ್ಕಿಂಗ್ ಸ್ಥಳಾವಕಾಶ ಕಂಡು ಹಿಡಿಯುವುದು ನಗರಗಳಲ್ಲಿ ನಿಜಕ್ಕೂ ಸವಾಲು. ಎಲ್ಲಾ ಕಡೆಗಳಲ್ಲೂ ವ್ಯಾಪಿಸಿರುವ ನೋ ಪಾರ್ಕಿಂಗ್ ಬೋರ್ಡ್, ನೀಟಾಗಿ ಪಾರ್ಕ್ ಮಾಡದ ವಾಹನಗಳು ಇತ್ಯಾದಿಗಳಿಂದ ಉಳಿದ ವಾಹನ ಚಾಲಕರಿಗೆ ಪಾರ್ಕಿಂಗ್ ಸ್ಥಳಾವಕಾಶ ಹುಡುಕುವುದು ಕಷ್ಟವಾಗುತ್ತದೆ.

ಇತ್ತೀಚೆಗೆ ದೆಹಲಿಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿದ ಕಾರನ್ನು ಟೋ ವಾಹನದವರು ಅದರಲ್ಲಿದ್ದ ಮಗುವಿನ ಸಮೇತ ಕೊಂಡೊಯ್ದಿದ್ದರು. ನಿಮಗೂ ವಾಹನ ಪಾರ್ಕಿಂಗ್ ನಲ್ಲಿ ಕಹಿ ಅನುಭವವಾಗಿರುವುದೇ? ಅದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

More from DriveSpark

Article Published On: Tuesday, August 7, 2012, 10:19 [IST]
English summary
Street sensors which alert motorists about find free parking spaces. Details of empty bays are collected centrally and sent via mobile phone and wi-fi to motorists on their phones, who can then drive to the vacant space, the Daily Mail reported.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+