ವಿದ್ಯಾರ್ಥಿಗಳ ಸಾಧನೆ, ಈ ಕಾರಿನ ಮೈಲೇಜ್ 110 ಕಿ.ಮೀ!
ನಾಲ್ಕು ಚಕ್ರದ "ಟು ಗೋ ಕಾರ್" ಹೆಸರಿನ ಈ ವಾಹನ ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಗೆ ತಗುಲಿದ ವೆಚ್ಚ ಕೇವಲ 35 ಸಾವಿರ ರುಪಾಯಿ. ಸದ್ಯ ವಿದ್ಯಾರ್ಥಿಗಳು ಎಲ್ ಪಿಜಿ ಚಾಲಿತ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಪ್ರತಿಕೆಜಿ ಎಲ್ ಪಿಜಿಗೆ ಸುಮಾರು 110 ಕಿ.ಮೀ. ಮೈಲೇಜ್ ನೀಡುತ್ತದಂತೆ.
ನೂತನ ವಾಹನ 110ಸಿಸಿಯ ಎಂಜಿನ್ ಹೊಂದಿದೆ. ಇದರಲ್ಲಿ ಇಬ್ಬರು ಪ್ರಯಾಣಿಸಬಹುದು. ಈ ಕಾರು ಪೆಟ್ರೋಲ್ ಮೂಲಕ ಪ್ರಯಾಣಿಸಿದರೆ ಪ್ರತಿಲೀಟರಿಗೆ ಸುಮಾರು 65 ಕಿ.ಮೀ. ಮೈಲೇಜ್ ನೀಡಬಹುದು ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ. ಹೈ ಟೆಕ್ ಪ್ರಾಜೆಕ್ಟ್ ಇಂಡಸ್ಟ್ರಿಸ್ ಸಹಯೋಗದಲ್ಲಿ ಈ ವಾಹನವನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಇದೇ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ ನೀರಲ್ಲೂ ರಸ್ತೆಯಲ್ಲೂ ಸರಾಗವಾಗಿ ಚಲಿಸುವ ಕಾರನ್ನು ಅಭಿವೃದ್ಧಿಪಡಿಸಿ ಎಲ್ಲರೂ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದರು. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಸ್ಟೀಲ್, ಅಲ್ಯುಮಿನಿಯಂ ಅಲಾಯ್ ವೀಲ್, ಪ್ಲಾಸ್ಟಿಕ್ ಮತ್ತು ಇನ್ನಿತ್ತರ ಬಿಡಿಭಾಗಗಳನ್ನು ಜೋಡಿಸಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.
ಇದೇ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ 110ಸಿಸಿಯ ಪೆಟ್ರೋಲ್/ಎಲ್ ಪಿಜಿಯ ಕೇವಲ 135 ಕೆ.ಜಿ. ತೂಕದ ಹೈಬ್ರಿಡ್ ಕಾರೊಂದನ್ನು ಕೂಡ ಅಭಿವೃದ್ಧಿಪಡಿಸದ್ದರು. ಈ ಕಾರು ಪ್ರತಿಲೀಟರ್ ಪೆಟ್ರೋಲಿಗೆ 65 ಕಿ.ಮೀ. ಮೈಲೇಜ್ ನೀಡುತ್ತಿತ್ತು.
ಬೆಂಗಳೂರಿನ ಎಂಎಸ್ ರಾಮಯ್ಯ ಇನ್ಶೂಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಕಳೆದ ವರ್ಷ ಡೀಸಲ್ ಬೈಕೊಂದನ್ನು ಅಭಿವೃದ್ಧಿಪಡಿಸಿದ್ದರು. ಈ ಬೈಕ್ ಪ್ರತಿ ಲೀಟರ್ ಗೆ ಸುಮಾರು 110 ಕಿ.ಮೀ. ಮೈಲೇಜ್ ನೀಡುತ್ತಿತ್ತು.. ಡಾ. ಎಸ್. ವಿ. ಪ್ರಕಾಶ ಮಾರ್ಗದರ್ಶನದಲ್ಲಿ ಈ ಬೈಕ್ ಅಭಿವೃದ್ಧಿಪಡಿಸಲು ಇವರು ತೆಗೆದುಕೊಂಡ ಸಮಯ ಎರಡು ವರ್ಷ.
110 ಕಿ.ಮೀ. ಮೈಲೇಜಿನ ಕಾರು ಮತ್ತು ವಿದ್ಯಾರ್ಥಿಗಳ ಚಿತ್ರಗಳನ್ನು ನೋಡಿರಿ.


Click it and Unblock the Notifications









