ಸುಜುಕಿ ಸ್ವಿಫ್ಟ್‌ನಿಂದ ಫೋರ್ ವೀಲ್ ಡ್ರೈವ್ ಅವತಾರ
ಒಂದರ ಬಳಿಕ ಒಂದರಂತೆ ಆತ್ಯಾಕರ್ಷಕ ಕಾರುಗಳನ್ನು ಪರಿಚರಿಸುತ್ತಿರುವ ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪೆನಿಯಾದ ಸುಜುಕಿ ಮೋಟಾರ್ಸ್ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಕಾರನ್ನು ನೂತನ ಅವತಾರದೊಂದಿಗೆ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದೆ.
ಹೌದು, ಸುಜುಕಿ ಈ ಬಾರಿ ಇಟಲಿಯಲ್ಲಿ ಫೋರ್ ವೀಲ್ ಡ್ರೈವ್ ತಂತ್ರಜ್ಞಾನದ ಕಾರನ್ನು ಬಿಡುಗಡೆಗೊಳಿಸಿದೆ. ಸುಜುಕಿಯ ಈ ಡ್ರೈವ್ 4x4 ವೀಲ್ ಚಮತ್ಕಾರ ನೋಡಲು ಫೋಕ್ಸ್‌ವಾಗನ್ ಕ್ರಾಸ್ ರೇಂಜ್ ಹಾಗೂ ಆಡಿ ಆಲ್ ರಾಡ್ ಸ್ಪೋರ್ಟ್‌ಗಳಂತಹ ಐಷಾರಾಮಿ ಕಾರುಗಳ ಜತೆ ಸಾಮತ್ಯೆ ಹೊಂದಿದೆ.
1.2 ಲೀಟರ್ ಇಂಧನ ದಕ್ಷತೆಯ ವಿವಿಟಿ ಪೆಟ್ರೋಲ್ ಎಂಜಿನ್ ನೂತನ ಸ್ವಿಫ್ಟ್‌ನಲ್ಲಿ ಬಳಕೆ ಮಾಡಲಾಗಿದೆ. ಇದರಿಂದ ಕಾರಿನಲ್ಲಿ 94 ಬಿಎಚ್‌ಪಿ ಪವರ್ ಉತ್ಪಾದಿಸುವ ಕ್ಷಮತೆ ಹೊಂದಿರಲಿದೆ. ನೂತನ ವಿನ್ಯಾಸ, ಗರಿಷ್ಠ ಎಂಜಿನ್ ದಕ್ಷತೆ ಜತೆ ಆಧುನಿತ ತಂತ್ರಜ್ಞಾನಗಳನ್ನು ಕಾರಿನಲ್ಲಿ ಪ್ರಯೋಗಿಸಲಾಗಿದೆ. ಈ ಕಾರನ್ನು ಎರಡು ವೆರಿಯಂಟ್‌ಗಳಲ್ಲಿ ಲಭಿಸಲಿದ್ದು, ಇದರಲ್ಲಿ ಜಿಎಲ್ ಸ್ಟೈಲ್ ಹಾಗೂ ಜಿಎಲ್ ಟಾಪ್ ಒಳಗೊಂಡಿದೆ.

ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್
ಸುಜುಕಿ ಸದ್ಯಕ್ಕೆ ಈ ನೂತನ ಸ್ವಿಫ್ಟ್ ಫೋರ್ ವೀಲ್ ಡ್ರೈವ್ ಕಾರನ್ನು ಇಟಲಿಯಲ್ಲಿ ಪರಿಚಯಿಸಿದ್ದು, ಇತರ ದೇಶಗಳಲ್ಲೂ ಬಿಡುಗಡೆ ಮಾಡುವ ಇರಾದೆಯನ್ನು ಹೊಂದಿದೆ. ಭಾರತದಲ್ಲೂ ಸುಜುಕಿ ಹ್ಯಾಚ್‌ಬ್ಯಾಕ್ ಕಾರಿಗಳಿಗೆ ಭಾರಿ ಬೇಡಿಕೆಯಿದೆ.

ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್
ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್ ಕಾರನ್ನು ಎರಡು ವೆರಿಯಂಟ್‌ಗಳಲ್ಲಿ ಲಭಿಸಲಿದ್ದು, ಅದರಲ್ಲಿ ಜಿಎಲ್ ಸ್ಟೈಲ್ ಹಾಗೂ ಜಿಎಲ್ ಟಾಪ್ ಒಳಗೊಂಡಿದೆ. ಜಿಎಲ್ ಸ್ಟೈಲ್ ವೆರಿಯಂಟ್‌ನಲ್ಲಿ ಇಲೆಕ್ಟ್ರಿಕ್ ವಿಂಡೊ ಪ್ರಯೋಗ ಮಾಡಲಾಗಿದೆ.

ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್
ಇದರ ಜತೆ ಸೆಂಟ್ರಲ್ ಲಾಕಿಂಗ್ ಸಿಸ್ಟಂಗಳಂತಹ ಆಧುನಿಕ ಫೀಚರ್‌ಗಳನ್ನು ಆಳವಡಿಸಲಾಗಿದೆ. ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್ ಕಾರು 16 ಇಂಚು ಅಲೋಯ್ ವೀಲ್ ಹೊಂದಿದ್ದು, ಇದರಿಂದ ಕಾರಿನ ಅಂದ ಹೆಚ್ಚಾಗಿದೆ. ಕಾರಿನ ಒಳಭಾಗವನ್ನು ಸಹ ಅಷ್ಟೇ ಅಂದವಾಗಿ ರೂಪಿಸಲಾಗಿದ್ದು, ಸುರಕ್ಷಿತಗಾಗಿ ಏರೋಬ್ಯಾಗ್ ಆಳವಡಿಸಲಾಗಿದೆ.

ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್
ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್ ಕಾರಿನ ಒಳಭಾಗದಲ್ಲಿ ಲೆಥರ್ ಸೀಟ್ ಆಳವಡಿಸಲಾಗಿದೆ. ಇದರ ಜತೆ ವೈ-ಫೈ ಸಿಸ್ಟಂ, ಸಿಡಿ ಪ್ಲೇಯರ್, ಎಂಪಿ3, ಯೂಎಸ್‌ಬಿ ಸೊಕೆಟ್ ಇವೆ.

ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್
ಪ್ರಸ್ತುತ ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್ ಕಾರನ್ನು ಇಟಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಫೋರ್ ವೀಲ್ ಡ್ರೈವ್ ಜತೆ ಇತರ ಆಧುನಿಕ ಫೀಚರ್ಸ್ ಹೊಂದಿರುವುದರಿಂದ ಕಾರಿನ ಬೆಲೆ ಸ್ವಲ್ಪ ದುಬಾರಿಯಾಗಿದೆ.

ಸುಜುಕಿ ಸ್ವಿಫ್ಟ್ ಫೋರ್ ವೀಲ್ ಡ್ರೈವ್ ದರ ಮಾಹಿತಿ
ಸ್ವಿಫ್ಟ್ ಜಿಎಲ್ ಸ್ಟೈಲ್ ವೆರಿಯಂಟ್ ದರ: 11.5 ಲಕ್ಷ ರು.
ಸ್ವಿಫ್ಟ್ ಜಿಎಲ್ ಟಾಪ್ ವೆರಿಯಂಟ್ ದರ: 12.3 ಲಕ್ಷ ರು.


Click it and Unblock the Notifications








