ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಲಗ್ಗೆಯಿಡಲು ಟಾಟಾ ಸಜ್ಜು

Tata Motors To Build Electric Car Worth Rs.10L
ಅಗ್ಗದ ನ್ಯಾನೊ ಕಾರು ಮೂಲಕ ಜಾಗತಿಕವಾಗಿ ಪ್ರಶಿದ್ಧಿ ಪಡೆದ ದೇಶದ ಪ್ರಮುಖ ವಾಹನ ಕಂಪನಿ ಟಾಟಾ ಮೋಟರ್ಸ್ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ ಎಂದು ವರದಿಗಳು ಹೇಳಿವೆ. ಫ್ರಾನ್ಸಿನ ಡಸಲ್ಟ್ ಸಿಸ್ಟಮ್ಸ್ ಕಂಪನಿಯೊಂದಿಗೆ ಸೇರಿ ಟಾಟಾ ಮೋಟರ್ಸ್ ನೂತನ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಪಡಿಸಲಿದೆಯಂತೆ.

ಟಾಟಾ ಗ್ರೂಪಿನ ಎಂಜಿನಿಯರಿಂಗ್ ಸೇವಾ ಗುತ್ತಿಗೆ ಸಂಸ್ಥೆ ಮತ್ತು ಉತ್ಪನ್ನ ಅಭಿವೃದ್ಧಿ, ಐಟಿ ಸೇವಾ ಸಂಸ್ಥೆ ಟಾಟಾ ಟೆಕ್ನಾಲಜಿಯು ಈ ನಿಟ್ಟಿನಲ್ಲಿ ಡಸಲ್ಟ್ ಸಿಸ್ಟಮ್ ಜೊತೆ ಕೆಲಸ ಮಾಡುತ್ತಿದೆ. ಈ ಕುರಿತು ಕಂಪನಿಗಳೆರಡೂ ಸಂಬಂಧಿತ ಅಧ್ಯಯನಗಳನ್ನು ಮಾಡಿಮುಗಿಸಿವೆ. ಸುಮಾರು 20 ಸಾವಿರ ಡಾಲರ್(ಅಂದಾಜು 10 ಲಕ್ಷ ರು.)ಗೆ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಟಾಟಾ ಟೆಕ್ನಾಲಜಿಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ ಈ ಕಾರಿಗೂ ಟಾಟಾ ಕಾನ್ಸೆಪ್ಟ್ ಕಾರು "ಎಮೊ"ಗೂ ಯಾವುದಾದರೂ ಲಿಂಕ್ ಇದೆಯಾ ಎನ್ನುವುದು ಖಚಿತಗೊಂಡಿಲ್ಲ. ಇದು ಟಾಟಾ ಮೋಟರ್ಸ್ ಕಂಪನಿಯ ಪ್ರಪ್ರಥಮ ಎಲೆಕ್ಟ್ರಿಕ್ ಕಾರಾಗಿದೆ. ವಿಶೇಷವೆಂದರೆ ಇದನ್ನು ಕೂಡ ಡಸಲ್ಟ್ ಸಿಸ್ಟಮ್ ಜೊತೆ ಸೇರಿಯೇ ಅಭಿವೃದ್ಧಿಪಡಿಸಲಾಗಿದೆ.

ಇದು ಟಾಟಾ ಟೆಕ್ನಾಲಜಿ ಯೋಜನೆಯಾಗಿದೆ. ಆದರೆ ಟಾಟಾ ಮೋಟರ್ಸ್ ಈಗಾಗಲೇ ಇಂಡಿಕಾ ಆವೃತ್ತಿಯ ಎಲೆಕ್ಟ್ರಿಕ್ ವರ್ಷನ್ ತರುವುದಾಗಿ ಪ್ರಕಟಿಸಿಯಾಗಿದೆ. ಟಾಟಾ ಮೋಟರ್ಸ್ ಕಂಪನಿಯು ನಾರ್ವೆ ಮೂಲದ ಕಂಪನಿಯ ಜೊತೆ ಸೇರಿ ಎಲೆಕ್ಟ್ರಿಕ್ ಇಂಡಿಕಾ ಅಭಿವೃದ್ಧಿಪಡಿಸುತ್ತಿದೆ.

ಟಾಟಾ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕ್ ಕಾರೊಂದು ಸಿದ್ಧಗೊಳ್ಳಲಿದೆ ಎಂಬ ಸುದ್ದಿಯೇ ಆಕರ್ಷಕ. ದೇಶದ ಕಾರು ಕಂಪನಿಯೊಂದಕ್ಕೆ ಅಗ್ಗದ ದರದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಲಗ್ಗೆಯಿಡಲು ಸಾಧ್ಯವಾಗಲಿದೆ ಎಂಬುದೇ ಹೆಮ್ಮೆಯ ವಿಷಯ. ಯಾವುದಕ್ಕೂ ಒಂದಿಷ್ಟು ತಾಳ್ಮೆಯಿಂದ, ವ್ಯವಧಾನದಿಂದ ಟಾಟಾ ಎಲೆಕ್ಟ್ರಿಕ್ ಕಾರಿನ ನಿರೀಕ್ಷೆಯಲ್ಲಿರೋಣ.

More from DriveSpark

Article Published On: Thursday, June 21, 2012, 17:07 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+