ಟಾಟಾ ಕ್ಷೆನನ್ ಪಿಕಪ್ ರಸ್ತೆಗೆ, ಆರಂಭಿಕ ದರ 5.44 ಲಕ್ಷ ರು.
ಟಾಟಾ ಸೂಪರ್ ಏಸ್, ಟಾಟಾ ಆರ್ ಎಕ್ಸ್ ಪಿಕಪ್ ಬಳಗಕ್ಕೆ ನೂತನ ಟಾಟಾ ಕ್ಷೆನನ್ ಸೇರ್ಪಡೆಯಾಗಿದೆ. ಇದು ಬೊಲೆರೊ ಪಿಕಪ್, ಮಹೀಂದ್ರ ಜಿನಿಯೊ ಮುಂತಾದ ವಾಣಿಜ್ಯ ವಾಹನಗಳಿಗೆ ನೂತನ ಕ್ಷೆನನ್ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲಿದೆ.
ಆಕರ್ಷಕ ವಿನ್ಯಾಸದ ನೂತನ ಕ್ಷೆನನ್ ಇಂಧನ ದಕ್ಷತೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಪಿಕಪ್ ಎಂದು ಟಾಟಾ ಮೋಟರ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಟಾಟಾ ಕ್ಷೆನನ್ ಗೆ ಮೂರು ವರ್ಷ ಅಥವಾ 3 ಲಕ್ಷ ಕಿ.ಮೀ. ವಾರಂಟಿ ನೀಡಲಾಗಿದೆ. (ವಾರಂಟಿ ಕುರಿತಾದ ವಿಶೇಷ ಲೇಖನ ಓದಿ)
"ಪಿಕಪ್ ಸೆಗ್ಮೆಂಟ್ ಗಮನಾರ್ಹವಾಗಿ ಪ್ರಗತಿ ಕಾಣುತ್ತಿದೆ. ಈ ಟ್ರಂಡ್ ಮುಂದುವರೆಯುವ ನಿರೀಕ್ಷೆಯಿದೆ" ಎಂದು ಟಾಟಾ ಕ್ಷೆನನ್ ಪರಿಚಯಿಸಿದ ಸಂದರ್ಭದಲ್ಲಿ ಟಾಟಾ ಮೋಟರ್ಸ್ ವಾಣಿಜ್ಯ ವಾಹನ ವಿಭಾಗದ ಕಾರ್ಯನಿರ್ವಹಣಾ ನಿರ್ದೇಶಕರಾದ ರವಿ ಪಿಶ್ರೊಡಿ ಹೇಳಿದ್ದಾರೆ.
ನೂತನ ಕ್ಷೆನನ್ 3.0 ಲೀಟರ್ ಕಾಮನ್ ರೇಲ್ ಮತ್ತು ಟರ್ಬೊ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಕ್ಷೆನನ್ ಪಿಕಪ್ ನಲ್ಲಿ ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಸಿಂಗಲ್ ಕ್ಯಾಬ್ ಆವೃತ್ತಿಯು 72 ಅಶ್ವಶಕ್ತಿ ಮತ್ತು ಡ್ಯೂಯಲ್ ಕ್ಯಾಬ್ ಕ್ಷೆನನ್ 115 ಹಾರ್ಸ್ ಪವರ್ ನೀಡುತ್ತದೆ.
ಸಿಂಗಲ್ ಕ್ಯಾಬ್ ಕ್ಷೆನನ್ ಪಿಕಪ್ ಪವರ್ ಸ್ಟಿಯರಿಂಗ್, ಹೊಂದಾಣಿಕೆ ಮಾಡಬಹುದಾದ ಸ್ಟಿಯರಿಂಗ್ ವೀಲ್, ಬಕೆಟ್ ಸೀಟ್ ಇತ್ಯಾದಿ ಫೀಚರುಗಳನ್ನು ಹೊಂದಿದೆ. ಡ್ಯೂಯಲ್ ಕ್ಯಾಬ್ ಕ್ಷೆನನ್ ಆವೃತ್ತಿಯಲ್ಲಿ ಎಚ್ ವಿಎಸಿ, ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್, ಲಂಬರ್ ಬೆಂಬಲದ ಸೀಟು ಇತ್ಯಾದಿ ಫೀಚರುಗಳಿವೆ.
ಜಾಗತಿಕ ಸುರಕ್ಷತೆಯ ಗುಣಮಟ್ಟವನ್ನು ಕ್ಷೆನನ್ ಕ್ಯಾಬ್ ಆವೃತ್ತಿಗಳು ಹೊಂದಿವೆ. ನೀಲಿ, ಕೆಂಪು, ಸಿಲ್ವರ್ ಮತ್ತು ಬಿಳಿ ಎಂಬ ನಾಲ್ಕು ಬಣ್ಣಗಳಲ್ಲಿ ಕ್ಷೆನನ್ ಲಭ್ಯವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟಾಟಾ ಮೋಟರ್ಸ್ ತಿಳಿಸಿದೆ.


Click it and Unblock the Notifications









