ಬಿಎಂಡಬ್ಲ್ಯುಗೆ ಪ್ರತಿಸ್ಪರ್ದಿ; ಟಾಟಾದಿಂದ ಎಂಟ್ರಿ ಲೆವೆಲ್ ಜಾಗ್ವಾರ್
ಜಾಗತಿಕವಾಗಿ ಪ್ರೀಮಿಯಂ ಕಾರು ಮಾರಾಟದಲ್ಲಿ ಬಿಎಂಡಬ್ಲ್ಯು ಭದ್ರವಾಗಿ ನೆಲೆಯೂರಿದೆ. ಈ ಹಂತದಲ್ಲಿ ಬಿಎಂಡಬ್ಲ್ಯು 3 ಸಿರೀಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗುತ್ತಿರುವ ಟಾಟಾ ಮೋಟಾರ್ಸ್, ಎಂಟ್ರಿ ಲೆವೆಲ್ ಜಾಗ್ವಾರ್ ಕಣಕ್ಕಿಳಿಸುತ್ತಿದೆ.
ಯಾವುದೇ ಮಾದರಿಯ ಪ್ರೀಮಿಯಂ ಕಾರು ಆದರೂ ಬಿಎಂಡಬ್ಲ್ಯು ಅದೇ ಬ್ರಾಂಡ್‌ನೊಂದಿಗೆ ಹೆಸರಿಸಲ್ಪಡುತ್ತದೆ. ಎಂಟ್ರಿ ಲೆವೆಲ್ ಕಾರಿನಲ್ಲೂ ಜಾಗ್ವಾರ್ ಈ ರೀತಿಯ ಬ್ರಾಂಡ್ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ ಎಂದು ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ 2008ನೇ ಇಸವಿಯಲ್ಲಿ ಫೋರ್ಡ್ ಮೋಟಾರ್ ಕಂಪನಿಯಿಂದ ಐಷಾರಾಮಿ ಕಾರು ಸೆಗ್ಮೆಂಟ್ ಆದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸ್ವಾಧೀನಪಡಿಸಲು ಟಾಟಾ 100 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಿತ್ತು. ಆ ಬಳಿಕದ ಭಾರಿ ಹೂಡಿಕೆಗಳಿಂದಾಗಿ ಬೆಳೆದು ಬರುತ್ತಿರುವ ಬೇಡಿಕೆಗೆ ಅನುಸಾರುವಾಗಿ ಲಗ್ಫುರಿ ಕಾರು ಸೆಗ್ಮೆಂಟ್‌ನಲ್ಲಿ ಟಾಟಾ ಭಾರಿ ಲಾಭ ಪಡೆಯಲು ಸಾಧ್ಯವಾಗಿತ್ತು.


Click it and Unblock the Notifications









