ಭಾರತೀಯರ ಇಷ್ಟದ ಟಾಪ್ ಟೆನ್ ಕಾರು: ಬ್ಲೂಬೈಟ್ಸ್ ವರದಿ
ಬ್ಲೂಬೈಟ್ಸ್ ಮುಂಬೈನ ಮಾಧ್ಯಮ ಸಂಶೋಧನೆ ಕಂಪನಿ. ಮಹೀಂದ್ರ ಕಂಪನಿಯ ಜಾಗತಿಕ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ದೇಶದ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ ಕಾರೆಂದು ಬ್ಲೂಬೈಟ್ಸ್ ಅಧ್ಯಯನ ತಿಳಿಸಿದೆ. ಜೊತೆಗೆ ಮಾರುತಿ ಸುಜುಕಿ ಕಂಪನಿಯು ದೇಶದ ಜನರ ಅಚ್ಚುಮೆಚ್ಚಿನ ಬ್ರಾಂಡಾಗಿ ಹೊರಹೊಮ್ಮಿದೆ.
ಮಾಧ್ಯಮಗಳಲ್ಲಿ ಪ್ರಚಾರ ಗಳಿಸಿದ ಆಧಾರದಲ್ಲಿ ಬ್ಲೂಬೈಟ್ಸ್ ಈ ಅಧ್ಯಯನ ನಡೆಸಿದೆ. ಸುಮಾರು 75 ಸಾವಿರಕ್ಕೂ ಹೆಚ್ಚು ಮಾಧ್ಯಮ ವರದಿಗಳನ್ನು ಆಧಾರವಾಗಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ. ಅಂತಿಮ ಫಲಿತಾಂಶದಲ್ಲಿ ಮಹೀಂದ್ರ ಎಕ್ಸ್‌ಯುವಿ ಬೆಸ್ಟ್ ಕಾರಾಗಿ ಹೊರಹೊಮ್ಮಿದೆ.
ಅಚ್ಚರಿಯೆಂಬಂತೆ ಮಾಧ್ಯಮ ವರದಿ ಅವಲಂಬಿತ ಹೆಚ್ಚು ಜನರ ಮೆಚ್ಚಿನ ಕಾರುಗಳ ಅಧ್ಯಯನದಲ್ಲಿ ಬೆಸ್ಟ್ ಸೆಲ್ಲರ್ ಮಾರುತಿ ಸುಜುಕಿ ಆಲ್ಟೊ 9ನೇ ಸ್ಥಾನ ಪಡೆದುಕೊಂಡಿದೆ. ಕಂಪನಿಯು ಇನ್ನೂ ರಸ್ತೆಗಿಳಿಯದ ಎರ್ಟಿಗಾ ಕಾರು ಜನಪ್ರಿಯ ಕಾರು ಬ್ರಾಂಡುಗಳಲ್ಲಿ ಹತ್ತನೇ ಸ್ಥಾನ ಪಡೆದಿರುವುದು ವಿಶೇಷ. ಬ್ಲೂಬೈಟ್ಸ್ ಆಯ್ಕೆ ಮಾಡಿರುವ ಟಾಪ್ 30 ಕಾರುಗಳಲ್ಲಿ ಹತ್ತು ಅಗ್ರ ಹತ್ತು ಕಾರುಗಳು ಇಲ್ಲಿವೆ.
ಬ್ಲೂಬೈಟ್ಸ್ ಫಲಿತಾಂಶ: ಟಾಪ್ 10 ಕಾರು
1.ಮಹೀಂದ್ರ ಎಕ್ಸ್‌ಯುವಿ 5ಒಒ
2. ಟಾಟಾ ನ್ಯಾನೊ
3. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
4. ಮಹೀಂದ್ರ ಸ್ಕಾರ್ಪಿಯೊ
5. ಆಡಿ ಆರ್8
6. ಮಾರುತಿ ಸುಜುಕಿ ಎರ್ಟಿಗಾ
7. ಫೋರ್ಡ್ ಫಿಯೆಸ್ಟಾ
8. ಹ್ಯುಂಡೈ ಐ20
9. ಮಾರುತಿ ಸುಜುಕಿ ಆಲ್ಟೊ
10. ಮಾರುತಿ ಸುಜುಕಿ ಆಮ್ನಿ


Click it and Unblock the Notifications









