ಕನ್ನಡದಲ್ಲಿ ನಂಬರ್ ಪ್ಲೇಟ್ ಬರೆದ ತಮಿಳುನಾಡು ಬಂಡಿ

ಕನ್ನಡ ಭಾಷೆಯ ಕುರಿತಾದ ಪ್ರೀತಿಯಿಂದ ಹೆಚ್ಚಿನವರು ವಾಹನಗಳಿಗೆ ಕನ್ನಡ ನಂಬರ್ ಪ್ಲೇಟ್ ಹಾಕುತ್ತಾರೆ. ಬರೀ ಕನ್ನಡಿಗರು ಮಾತ್ರವಲ್ಲ. ತಮಿಳು, ಮಲಯಾಲಂ ಭಾಷೆಯಲ್ಲೂ ಇಂತಹ ನಂಬರ್ ಪ್ಲೇಟುಗಳು ಇವೆ. ಈ ಕುರಿತು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ನೀತಿಗಳು ಇವೆ.
ಫೇಸ್ ಬುಕ್ ನಲ್ಲಿ ಓಡಾಡುತ್ತಿದ್ದ ಈ ಫೋಟೊ ಆಸಕ್ತಿದಾಯಕವಾಗಿದೆ. ತಮಿಳುನಾಡು ನೋಂದಣಿ ಸಂಖ್ಯೆಯಿರುವ ಈ ನಂಬರ್ ಪ್ಲೇಟಿನಲ್ಲಿ ಕನ್ನಡ ರಾರಾಜಿಸುತ್ತಿದೆ. ಜೊತೆಗೆ "ಜೈ ಕರ್ನಾಟಕ ಮಾತೆ" ಎಂದು ಬರೆಯಲಾಗಿದೆ.
ಅಂದೊಮ್ಮೆ ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿದ್ದಕ್ಕೆ ಬೆಂಗಳೂರು ಪೊಲೀಸರು ಫೈನ್ ಹಾಕುತ್ತಿದ್ದರು. ರಾಜ್ಯದಲ್ಲಿ ಬೇರೆ ಭಾಷೆಯ ನಂಬರ್ ಪ್ಲೇಟ್ ಹಾಕಿರುವ ವಾಹನಗಳ ಮೇಲೂ ಆರ್ ಟಿಒ ಕ್ರಮ ಕೈಗೊಳ್ಳುತ್ತದೆ.
ಕೇಂದ್ರ ವಾಹನ ಕಾಯಿದೆ 1989ರ 50(2)(ಡಿ) ಮೋಟರ್ ವೆಹಿಕಲ್ ನೀತಿ ಪ್ರಕಾರ "ನೋಂದಣಿ ಸಂಖ್ಯೆ ಇಂಗ್ಲಿಷ್ ನಲ್ಲಿ ಅರೆಬಿಕ್ ನ್ಯೂಮರಲ್ಸ್ ನಲ್ಲಿ ಬರೆದಿದರಬೇಕು" ಎಂದಿದೆ.
ಪ್ರಾದೇಶಿಕ ಭಾಷೆಗಳಲ್ಲಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳುವುದನ್ನು ಕೆಲವರು ವಿರೋಧಿಸುತ್ತಾರೆ. ಯಾಕೆಂದರೆ ಪ್ರಾದೇಶಿಕ ಭಾಷೆಯನ್ನು ಎಲ್ಲರಿಗೂ ಓದಲಾಗುವುದಿಲ್ಲವೆನ್ನುವುದು ಹೆಚ್ಚಿನವರ ವಾದ. ಕನ್ನಡಿಗರು ತಮಿಳು ನಂಬರ್ ಪ್ಲೇಟ್ ಓದುವುದು ಕಷ್ಟ. ಅದೇ ರೀತಿ ಕನ್ನಡ ನಂಬರ್ ಪ್ಲೇಟ್ ತಮಿಳುನಾಡಿಗರಿಗೆ ಓದುವುದು ಕಷ್ಟವಾಗಬಹುದು.
ಈಗ ಹೆಚ್ಚು ಹೆಚ್ಚು ಹಿಟ್ ಆಂಡ್ ರನ್ ಘಟನೆಗಳು ನಡೆಯುತ್ತವೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಾಗ ಅದರ ನಂಬರ್ ಪ್ಲೇಟ್ ಬೇರೆ ಯಾವುದೇ ಭಾಷೆಯಲ್ಲಿದ್ದರೆ, ಆ ಭಾಷೆ ಗೊತ್ತಿಲ್ಲದ ಜನರು ಆ ವಾಹನದ ಸಂಖ್ಯೆ ಗುರುತಿಸಿಕೊಳ್ಳುವುದು ಕಷ್ಟ.
ತಮಿಳುನಾಡು ವಾಹನದ ನಂಬರ್ ಪ್ಲೇಟ್ ಕನ್ನಡದಲ್ಲಿರುವುದನ್ನು ಕಂಡು ಇಷ್ಟೇಲ್ಲ ಹೇಳಬೇಕಾಯಿತು.


Click it and Unblock the Notifications








