ಬೆಂಗಳೂರು ಟ್ಯಾಕ್ಸಿ ಮಾರುಕಟ್ಟೆಗೆ ಟೊಯೊಟಾ ಎಟಿಯೋಸ್

ಟೊಯೊಟಾದ ಎಂಟ್ರಿ ಲೆವೆಲ್ ಸೆಡಾನ್ ಕಾರು ಟ್ಯಾಬ್ ಎಂಬ ಕಂಪನಿ ಮೂಲಕ ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. ಕಂಪನಿಯು ಈಗಾಗಲೇ 600 ಕೆಂಪು ಮತ್ತು ಬಿಳಿಬಣ್ಣದ ಟೊಯೊಟಾ ಎಟಿಯೋಸ್ ಕಾರುಗಳನ್ನು ಟ್ಯಾಕ್ಸಿಗಾಗಿ ಖರೀದಿಸಿದೆ. ಇನ್ನೂ 400 ಕಾರುಗಳನ್ನು ಕಂಪನಿ ಇನ್ನಷ್ಟೇ ಪೂರೈಸಬೇಕಿದೆಯಂತೆ.
ಆರಂಭದಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ದೊಡ್ಡ ಸಂಖ್ಯೆಯಲ್ಲಿ ಎಟಿಯೋಸ್ ಟ್ಯಾಕ್ಸಿಗಳನ್ನು ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಬೆಂಗಳೂರು ಮತ್ತು ಆಹಮಾದಬಾದ್ ನಗರಗಳಲ್ಲಿ ಆರಂಭದಲ್ಲಿ ಕಡಿಮೆ ಸಂಖ್ಯೆಯ ಟ್ಯಾಕ್ಸಿಗಳನ್ನು ಟ್ಯಾಬ್ ಪರಿಚಯಿಸಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








