ಡಸ್ಟರ್ ಎದುರಾಳಿ; ಟೊಯೊಟಾದಿಂದ ಸಣ್ಣ ಎಸ್‌ಯುವಿ?
ನೂತನ ಸಣ್ಣ ಎಸ್‌ಯುವಿ ಹೊರತರುವ ಟೊಯೊಟಾ ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದೆ. 2014ರ ವೇಳೆಗೆ ಟೊಯೊಟಾ ಸಣ್ಣ ಎಸ್‌ಯುವಿ ದೇಶದ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ. ನೂತನ ಎಸ್‌ಯುವಿ ಹೆಸರು "ರಷ್" ಎಂದಿರಲಿದೆಯಂತೆ!
ದೇಶದಲ್ಲಿ ಟೊಯೊಟಾ ಈಗಾಗಲೇ ದುಬಾರಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಮಾರಾಟ ಮಾಡುತ್ತಿದೆ. ಟೊಯೊಟಾ ಪ್ರೀಮಿಯಂ ಫಾರ್ಚ್ಯುನರ್ ದರ ಸುಮಾರು 20 ಲಕ್ಷ ರು. ಆಸುಪಾಸಿನಲ್ಲಿದೆ. ಟೊಯೊಟಾ ಕಂಪನಿಯ ಮಲ್ಟಿ ಪರ್ಪೊಸ್ ವೆಹಿಕಲ್ ಇನ್ನೋವಾ ದೇಶದ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಪಡೆದಿದೆ.
ವದಂತಿಗಳ ಪ್ರಕಾರ ಟೊಯೊಟಾ ಕಂಪನಿಯು ರಷ್ ಎಂಬ ಕಾಂಪ್ಯಾಕ್ಟ್ ಎಸ್‌ಯುವಿ ಪರಿಚಯಿಸಲಿದೆಯಂತೆ. ಅತ್ಯಧಿಕ ಇಂಧನ ದಕ್ಷತೆಯ ರಷ್ ಸಣ್ಣ ಎಸ್‌ಯುವಿಯನ್ನು ಕಂಪನಿಯು ಈಗಾಗಲೇ ಏಷ್ಯಾ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿದೆ. ಟೊಯೊಟಾ ರಷ್ ಇದು ಡೀಸೆಲ್ ಎಂಜಿನ್ ಎಸ್‌ಯುವಿಯಾಗಿದೆ.
ಇತ್ತೀಚೆಗೆ ರೆನೊ ಪರಿಚಯಿಸಿದ ಸಣ್ಣ ಎಸ್‌ಯುವಿ ದಸ್ಟರ್ ದೇಶದಲ್ಲಿ ಅತ್ಯಧಿಕ ಬೇಡಿಕೆ ಪಡೆದುಕೊಂಡಿದೆ. ಕಂಪನಿಯು ಕೆಲವೇ ದಿನಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ಬುಕ್ಕಿಂಗ್ ಆರ್ಡರ್ ಪಡೆದುಕೊಂಡಿದೆ. ರೆನೊ ಡಸ್ಟರ್ ಅಗ್ಗದ ದರ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ.


Click it and Unblock the Notifications









