ಝೆನ್ ಕಾರಲ್ಲಿ ಉಸಿರುಗಟ್ಟಿ ಸತ್ತ ಇಬ್ಬರು ಮಕ್ಕಳು
"ಪಾರ್ಕ್ ಮಾಡಿದ್ದ ಕಾರಿನೊಳಗೆ ಈ ಇಬ್ಬರು ಮಕ್ಕಳು ಆಡಲೆಂದು ಪ್ರವೇಶಿಸಿದ್ದಾರೆ. ಆದರೆ ಕಾರಿನ ಸೆಂಟ್ರಲ್ ಲಾಕ್ ಆನ್ ಆದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ಹೊರಬರುವುದು ಇವರಿಗೆ ಸಾಧ್ಯವಾಗದೇ ಕಾರಿನೊಳಗೆ ಮೃತರಾಗಿದ್ದಾರೆ" ಎಂದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆಡಲು ಹೋದ ಮಕ್ಕಳು ಕಾಣೆಯಾಗಿದ್ದಾರೆಂದು ಮಕ್ಕಳಿಬ್ಬರ ಪೊಷಕರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ಸ್ಥಳದಲ್ಲಿ ಆಡುತ್ತಿದ್ದ ಮಕ್ಕಳು ಕಾರಿನೊಳಗೆ ಹೆಣ ಕಂಡಿದ್ದಾರೆ. ನಂತರ ಬಂದ ಕಾರು ಮಾಲಿಕ ಕಾರಿನ ಬಾಗಿಲು ತೆರೆದಿದ್ದಾರೆ.
ಇತ್ತೀಚೆಗೆ ಚೆನ್ನೈನ ನಲಗೊಂದ ಜಿಲ್ಲೆಯ ಮೆಲ್ಲಚೆರುವು ಸಮೀಪ ಇಂತಹದ್ದೇ ಘಟನೆಯೊಂದು ನಡೆದಿತ್ತು. ಕೃಷಿಕ ನರಸಿಂಹ ರಾವ್ ಮಿಲ್ ಬಜಾರ್ ಬಳಿ ಪಾರ್ಕ್ ಮಾಡಿದ್ದ ಕಾರಿನೊಳಗೆ ಅಲ್ಲೇ ಆಡುತ್ತಿದ್ದ ಮೂವರು ಬಾಲಕಿಯರು ಪ್ರವೇಶಿಸಿದ್ದರು.
ಡೋರ್ ಲಾಕ್ ಆಗಿರದ ಹಿನ್ನೆಲೆಯಲ್ಲಿ ಈ ಮೂವರು ಕಾರು ಪ್ರವೇಶಿಸಿದ್ದರು. ಆದರೆ ಅವರು ಒಳಪ್ರವೇಶಿಸಿದಾಗ ಸ್ವಯಂಚಾಲಿತವಾಗಿ ಕಾರಿನ ಡೋರ್ ಲಾಕ್ ಆಗಿತ್ತು. ಕಾರಿನ ಕಿಟಕಿಗೆ ಟಿಂಟೆಡ್ ಗ್ಲಾಸ್ ಹಾಕಿದ್ದ ಹಿನ್ನೆಲೆಯಲ್ಲಿ ಇವರ ಬೊಬ್ಬೆ ಕಾರಿನ ಹೊರಗಿದ್ದವರಿಗೆ ಕೇಳಲಿಲ್ಲ. ಸುಮಾರು 6 ಗಂಟೆ ಕಳೆದು ಕಾರಿನ ಮಾಲೀಕ ವಾಪಸ್ ಬಂದಾಗ ಮೂವರೂ ಹೆಣವಾಗಿದ್ದರು.
ಕಾರಿನೊಳಗೆ ಮಕ್ಕಳ ಸಾವನ್ನು ತಪ್ಪಿಸುವುದು ಹೇಗೆ?


Click it and Unblock the Notifications









