ಇಗೋ ಬಂದಿದೆ ಈಜಾಡುವ ಕಾರು- ಫೋಕ್ಸ್‌ವ್ಯಾಗನ್ ಅಕ್ವಾ

ವಿಶ್ವದ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಜಾಗತಿಕವಾಗಿ ಹೊಸತನ ತರುವವರನ್ನು ಬೆಂಬಲಿಸುತ್ತಲೇ ಇದೆ. ಇದೀಗ ಚೀನಾದ 21ರ ಹರೆಯದ ವಿನ್ಯಾಸಕಾರನೊಬ್ಬ ಅತಿ ವಿಶೇಷ ಈಜಾಡುವ ಕಾರೊಂದನ್ನು ತಯಾರಿಸಿದ್ದಾರೆ.

ನೀವು ಎಂದಾದರೂ ಈಜಾಡುವ ಕಾರಿನ ಬಗ್ಗೆ ಕೇಳಿದ್ದೀರಾ? ಇಲ್ಲ ಅಲ್ವ. ಹಾಗಿದ್ದರೆ ಮಾನವ ಸೃಷ್ಟಿಗೆ ಮತ್ತೊಂದು ಸೇರ್ಪಡೆಯೆಂಬಂತೆ 'ಫೋಕ್ಸ್‌ವ್ಯಾಗನ್ ಅಕ್ವಾ' ಕಾರು ಕಾನ್ಸೆಪ್ಟ್ ತಯಾರಾಗಿದೆ. ಅಂದ ಹಾಗೆ ಈ ಕಾರು ಕೇವಲ ನೀರಿಗೆ ಮಾತ್ರ ಸೀಮಿತವಲ್ಲ. ನೆಲ, ಜಲ ಸೇರಿದಂತೆ ಮಂಜುಗಡ್ಡೆಯಲ್ಲೂ ಸುಲಿಲಿತವಾಗಿ ಸಂಚರಿಸಲಿದೆ.

ಭವಿಷ್ಯದಲ್ಲಿ ಯಾವ ರೀತಿಯ ವಾಹನಗಳ ಆಗಮನವಾಗಲಿದೆ ಎಂಬುದನ್ನು ನಮ್ಮಿಂದ ಊಹಿಸಲು ಅಸಾಧ್ಯ. ಇದರಂತೆ ಚೀನಾದ 21ರ ಹರೆಯದ ವಿನ್ಯಾಸಕಾರ ಯೂಹಾನ್ ಜಾಂಗ್ ಎಂಬವರು ಈ ಫ್ಯೂಚರಿಸ್ಟಿಕ್ ವೆಹಿಕಲ್‌ಗೆ ರೂಪುರೇಷೆ ನೀಡಿದ್ದಾರೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಅಕ್ವಾ ಕಾರಿಗೆ ತುಂಬಾನೇ ಸುಲಭವಾದ ಹಾಗೂ ಸಹಜ ಎಕ್ಸ್‌ಟಿರಿಯರ್ ಹಾಗೂ ಎಂಟಿರಿಯರ್ ಡಿಸೈನ್‌ಗಳನ್ನುಆಳವಡಿಸಲಾಗಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ವಿಹಾರದ ವಾಹನವಾಗಿ ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್‌ ರಚಿಸಲಾಗಿದೆ. ಹಾಗಾಗಿ ದೈನಿಂದಿನ ಬದುಕಿನಲ್ಲಿ ಪ್ರಾಯೋಗಿಕವೆನಿಸುವುದು ಕಷ್ಟಸಾಧ್ಯ. ಈ ಕಾರಿನಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಕಾರಿಗೆ ಸರಿಯಾದ ಡೋರ್ ರೂಪುರೇಷೆ ನೀಡದಿರುವುದರಿಂದ ಕಾರಿನ ಒಳ ಪ್ರವೇಶ ಹಾಗೂ ನಿರ್ಗಮನ ಸ್ವಲ್ಪ ಕಷ್ಟವೆನಿಸಲಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಪ್ರಸ್ತುತ ಫೋಕ್ಸ್‌ವ್ಯಾಗನ್ ಅಕ್ವಾ ಡಿಸೈನ್ ಚೀನಾದ ಪ್ರತಿಷ್ಠಿತ ಸಿಡಿಎನ್ ಕಾರು ಡಿಸೈನ್ ಪ್ರಶಸ್ತಿ ಸ್ಪರ್ಧೆಯಲ್ಲಿದ್ದು, ಅಂತಿಮ ಸುತ್ತಿನಲ್ಲಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಭವಿಷ್ಯದ ವಾಹನಗಳು ಯಾವ ರೀತಿಯ ವಿನ್ಯಾಸ ಹೊಂದಿರಬೇಕು ಎಂಬುದಕ್ಕೆ ಫೋಕ್ಸ್‌ವ್ಯಾಗನ್ ಅಕ್ವಾ ಉತ್ತಮ ಉದಾಹರಣೆಯಾಗಿದೆ. ಇದರಂತೆ ವಿಭಿನ್ನ ಭೂಪ್ರದೇಶಗಳಲ್ಲಿ ಒಂದೇ ವಾಹನದಲ್ಲಿ ಸಂಚರಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಜರ್ಮನಿಯ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಸಹಯೋಗದಲ್ಲಿ ಚೀನಾದ ಎಂಜಿನಿಯರ್ ಯೂಹಾನ್ ಜಾಂಗ್ ಎಂಬಾತರು ಅಕ್ವಾ ಕಾರಿನ ಕಾನ್ಸೆಪ್ಟ್ ತಯಾರಿಸಿದ್ದಾರೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಅಕ್ವಾ ಕಾರನ್ನು ನೀರು ಸೇರಿದಂತೆ ಮರಳು ಹಾಗೂ ನೀರ್ಗಲ್ಲು ಪ್ರದೇಶಗಳಲ್ಲಿ ಪ್ರಯೋಗ ಮಾಡಬಹುದಾಗಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಅಕ್ವಾ ಪರಿಸರ ಸ್ನೇಹಿ ಕಾರು ಕೂಡಾ ಆಗಿದೆ. ಇದರ ಚಾಲನೆಗೆ ಹೈಡ್ರೋಜನ್ ಗ್ಯಾಸ್ ಪ್ರಯೋಗ ಮಾಡಲಾಗಿದೆ. ಕಾರಿನ ವಿಂಡ್‌ಸ್ಕ್ರೀನ್ ಮುಖಾಂತರ ಎದುರುಗಡೆಯಿಂದ ಬರುತ್ತಿರುವ ಯಾವುದೇ ವಾಹನವನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಅಕ್ವಾ ಕಾರಿನಲ್ಲಿ ಪವರ್‌ಫುಲ್ ಎಂಜಿನ್ ಆಳವಡಿಸಲಾಗಿದ್ದು, ಇದರಿಂದ ಗಂಟೆಗೆ 100 ಕಿಲೋ ಮೀಟರ್ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಕಾರಿನಲ್ಲಿರುವ ಏರ್ ಬ್ಯಾಗ್‌ನಲ್ಲಿ ಗಾಳಿ ತುಂಬುವುದರಿಂದ ವೇಗತೆಗೆ ನೆರವಾಗಲಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಪ್ರಸ್ತುತ ಫೋಕ್ಸ್‌ವ್ಯಾಗನ್ ಅಕ್ವಾ ಕಾರಿನ ಕಾನ್ಸೆಪ್ಟ್ ತಯಾರಿಸಲಾಗಿದೆ. ಅದರೆ ಯೂನಾನ್ ಪ್ರಕಾರ ಭವಿಷ್ಯದಲ್ಲಿ ಜನಸಾಮಾನ್ಯರ ಕೈಸೇರಲಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಅಕ್ವಾ ಕಾರು ಯೂಹಾನ್ ಡ್ರೀಮ್ ಕಾರು ಆಗಿದ್ದು, ವಿಭಿನ್ನ ಭೂಪ್ರದೇಶಗಳಿಗೆ ಹೊಂದಾಕೆಯಾಗುವ ರೀತಿಯಲ್ಲಿ ತಯಾರಿಸಲಾಗಿದೆ.

ಫೋಕ್ಸ್‌ವ್ಯಾಗನ್ ಅಕ್ವಾ ಕಾನ್ಸೆಪ್ಟ್

ಒಟ್ಟಿನಲ್ಲಿ ಚೀನಾದ ಈ ಯುವ ವಿನ್ಯಾಸಕನ ಸಾಹಸವನ್ನು ಮೆಚ್ಚಲೇ ಬೇಕು ಅಲ್ವೇ..!

More from DriveSpark

Article Published On: Monday, November 26, 2012, 16:58 [IST]
English summary
Volkswagen one of the leading carmakers in the world has been supporting innovators from across the globe who come up with interesting concepts. One such concept is the Volkswagen Aqua, developed by a 21 year old Chinese designer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+