ಫೋಕ್ಸ್‌ವ್ಯಾಗನ್ ಹೊಸ ಪೆಟ್ರೋಲ್ ಜೆಟ್ಟಾ ರಸ್ತೆಗೆ, ದರವೆಷ್ಟು?

ಫೋಕ್ಸ್‌ವ್ಯಾಗನ್ ಕಂಪನಿಯು ಡಿ ಸೆಗ್ಮೆಂಟ್ ಸೆಡಾನ್ ವಿಭಾಗಕ್ಕೆ ನೂತನ ಜೆಟ್ಟಾ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 13.6 ಲಕ್ಷ ರುಪಾಯಿ. ಪೆಟ್ರೋಲ್ ಕಾರುಗಳಿಗೆ ಕಡಿಮೆ ಬೇಡಿಕೆ ಇರುವ ಸನ್ನಿವೇಶದಲ್ಲೂ ಕಂಪನಿಯು ದಿಟ್ಟತನದಿಂದ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಿದ್ದು ವಿಶೇಷ.

ಫೋಕ್ಸ್‌ವ್ಯಾಗನ್ ನೂತನ ಜೆಟ್ಟಾ 1.4 ಲೀಟರಿನ ಟಿಎಸ್ಐ ಎಂಜಿನ್ ಮತ್ತು ಆರು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಜೆಟ್ಟಾ ಎಂಜಿನ್ ಕ್ರಮವಾಗಿ 122 ಪಿಎಸ್ ಪವರ್ ಮತ್ತು 200ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕಂಪನಿಯು ಜೆಟ್ಟಾ ಪೆಟ್ರೋಲ್ ಕಾರನ್ನು ಎರಡು ಆವೃತ್ತಿಯಲ್ಲಿ ಪರಿಚಯಿಸಿದೆ. ಎಂಟ್ರಿ ಲೆವೆಲ್ ಟ್ರೆಂಡ್ ಲೈನ್ ಜೆಟ್ಟಾ ದರ 13.6 ಲಕ್ಷ ರುಪಾಯಿ ಇದೆ. ಮತ್ತೊಂದು ಆವೃತ್ತಿ ಕಂಫರ್ಟ್‌ಲೈನ್ ದರ ಸುಮಾರು 15.07 ಲಕ್ಷ ರುಪಾಯಿ ಇದೆ.

Volkswagen Launches New Jetta Petrol At Rs.13.6L

ನೂತನ ಜೆಟ್ಟಾ ಕಾರಿನಲ್ಲಿ ಅಲಾಯ್ ವೀಲ್ಸ್, 205ಯ55 ಆರ್16 ಟೈರ್, ಹಿಂಭಾಗದಲ್ಲಿ ಮಿಣುಕು ದೀಪ(ಫಾಗ್ ಲ್ಯಾಂಪ್), ಪಾರ್ಕಿಂಗ್ ಸೆನ್ಸಾರುಗಳು, ಡ್ಯೂಯಲ್ ಎಕ್ಸಾಸ್ಟ್ ಪೈಪ್ ಮತ್ತು ಇಂಡಿಕೇಟರ್ ಇರುವ ಸೈಡ್ ಮಿರರ್ ಮುಂತಾದ ಫೀಚರುಗಳಿವೆ. ಇಂಟಿರಿಯರ್ ಮತ್ತು ಸೀಟುಗಳಿಗೆ ಹೊದಿಸಿರುವ ಮೃದುವಾದ ಜರ್ಮದ ಹಾಸು ಕಾರಿನ ಅಂದ ಮತ್ತು ಆರಾಮದಾಯಕತೆಯನ್ನು ಹೆಚ್ಚಿಸಿದೆ. ಸ್ಟೀಯರಿಂಗ್ ವೀಲ್, ಗೇರ್ ಲಿವರ್, ಹ್ಯಾಂಡ್ ಬ್ರೇಕ್ ಹ್ಯಾಂಡಲ್ ಮತ್ತು ಹಿಂಭಾಗದ ಏರ್ ಕಂಡಿಷನ್ ವೆಂಟ್ ಗಳಿಗೂ ಚರ್ಮದ ಹೊದಿಕೆಯ ಫಿನಿಷಿಂಗ್ ಮಾಡಲಾಗಿದೆ.

ಆರಾಮದಾಯಕತೆ ಹೆಚ್ಚಿಸಲು ಏರ್ ಕಂಡಿಷನ್. ಮುಂಭಾಗದ ಸೀಟುಗಳ ಹೊಂದಾಣಿಕೆ ಮತ್ತು ಮ್ಯೂಸಿಕ್ ಮಸ್ತಿಗೆ 8 ಸ್ಪೀಕರ್ ಮತ್ತು ಆಡಿಯೋ ಸಿಸ್ಟಮ್ ಇದೆ. ಸುರಕ್ಷತೆಯ ಸವಾರಿಗಾಗಿ ನೂತನ ಜೆಟ್ಟಾ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಆರು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನ್ ಎಮೊಬಿಲೈಝರ್ ಇವೆ.

ಫೋಕ್ಸ್ ವ್ಯಾಗನ್ ಜೆಟ್ಟಾ ಪೆಟ್ರೋಲ್ ದರ ವಿವರ
ಜೆಟ್ಟಾ ಟಿಎಸ್ಐ ಟ್ರೆಂಡ್ ಲೈನ್: 13.60 ಲಕ್ಷ ರುಪಾಯಿ
ಜೆಟ್ಟಾ ಟಿಎಸ್ಐ ಕಂಫರ್ಟ್ ಲೈನ್:15.07 ಲಕ್ಷ ರುಪಾಯಿ

ಜುಲೈ ಒಂದರ ನಂತರ ನೂತನ ಫೋಕ್ಸ್ ವ್ಯಾಗನ್ ಜೆಟ್ಟಾ ಶೋರೂಂಗಳಲ್ಲಿ ಲಭ್ಯವಿರಲಿದೆ.

Article Published On: Friday, June 22, 2012, 9:58 [IST]
English summary
Volkswagen has launched the petrol variant of the Jetta D-segment sedan with a price tag of Rs.13.6 lakhs (ex-showroom Delhi). Volkswagen has launched the new Jetta petrol in two variants, the entry level Trendline priced at Rs.13.6 lakhs and the Comfortline which carries a price tag of Rs.15.07 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+