ಬಸ್ ಮಾತ್ರವೇಕೆ, ವೊಲ್ವೊ ಸಣ್ಣಕಾರುಗಳು ಬರಲಿವೆ
ಬಿಸಿನೆಸ್ ಲೈನ್ ವರದಿಯ ಪ್ರಕಾರ ಕಂಪನಿಯು ಪರಿಚಯಿಸಲಿರುವುದು ಸದ್ಯ ರಸ್ತೆಗಿಳಿದ ಕಾರಿಗಿಂತ ಅಗ್ಗದ ದರದ ಸಣ್ಣಕಾರಾಗಿರಲಿದೆ. ನೂತನ ಸಣ್ಣಕಾರು ಮುಂದಿನ ತಿಂಗಳು ಜಿನಿವಾದಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಕಾರಿನ ಹೆಸರು ವಿ40 ಎಂದಿರಲಿದೆ. ಈ ಕಾರು ಬೆಂಝ್ ಕಂಪನಿಯ ಬಿ ಕ್ಲಾಸು ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಪ್ರಸಕ್ತ ವರ್ಷ ದೇಶಕ್ಕೆ ಕೆಲವು ವಾಹನಗಳನ್ನು ಪರಿಚಯಿಸಲು ಯೋಜಿಸಿದ್ದೇವೆ. ಇದು ದೇಶದಲ್ಲಿ ಕಂಪನಿಯ ಮಾರುಕಟ್ಟೆ ವಾಲ್ಯೂಂ ಹೆಚ್ಚಿಸಲಿದೆ ಎಂದು ವೋಲ್ವೊ ಆಟೋ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಥೋಮಸ್ ಎಂಬರ್ಗ್ ಹೇಳಿದ್ದಾರೆ.
ಸ್ವೀಡನಿನ ಕಾರು ಕಂಪನಿ ದೇಶಕ್ಕೆ ಮೂರು ಕಾರುಗಳನ್ನು ಪರಿಚಯಿಸಿದೆ. ಅದರ ಹೆಸರು ಎಸ್ 60, ಎಸ್ 80 ಮತ್ತು ಎಕ್ಸ್ ಸಿ60. ಇದರಲ್ಲಿ ಪ್ರೀಮಿಯಂ ಸೆಡಾನ್ ಕಾರುಗಳಾದ ಎಸ್ 60 ಮತ್ತು ಎಸ್80 ದರ ಕ್ರಮವಾಗಿ 23.99 ಲಕ್ಷ ರು. ಮತ್ತು 31.99 ಲಕ್ಷ ರುಪಾಯಿ ಆಗಿದೆ. ಸ್ಪೋರ್ಟ್ ಯುಟಿಲಿಟಿ ವೆಹುಕಲ್ ಎಕ್ಸ್ ಸಿ60 ದರ 33.99 ಲಕ್ಷ ರುಪಾಯಿ ಆಗಿದೆ.


Click it and Unblock the Notifications









