ಬೈಕ್ ಕಂಪನಿ ಡುಕಾಟಿ ಖರೀದಿಸಲಿದೆ ಆಡಿ
ಇಟಲಿಯ ಬೈಕ್ ಬ್ರಾಂಡ್ ಡುಕಾಟಿ ಮೋಟರ್ ಹೋಲ್ಡಿಂಗ್ ಸ್ಪಾ ಕಂಪನಿಯನ್ನು ಸುಮಾರು 110 ಡಾಲರ್‌ಗೆ ಖರೀದಿಸುವುದಾಗಿ ಆಡಿ ಪ್ರಕಟಿಸಿದೆ. ಖರೀದಿ ನಂತರ ಡುಕಾಟಿಯು ಫೋಕ್ಸ್‌ವ್ಯಾಗನ್ ಗ್ರೂಪಿನ ಆಡಿ ಸೇರಿದಂತೆ ಹತ್ತು ಕಾರು ಬ್ರಾಂಡುಗಳ ಸಮೂಹ ಸೇರಲಿದೆ.
ಡುಕಾಟಿ ಮಾಲೀಕ ಕಂಪನಿ ಇನ್ವೆಸ್ಟ್ ಇಂಡಸ್ಟ್ರಿಯಲ್ ಸ್ಪಾ ಕಂಪನಿಯು ಡುಕಾಟಿಯನ್ನು ಮಾರಾಟ ಮಾಡುವುದಾಗಿ ಈ ವರ್ಷದ ಆರಂಭದಲ್ಲಿ ಪ್ರಕಟಿಸಿತ್ತು. ಈ ಬೈಕ್ ಕಂಪನಿಯು ಭಾರತದ ಮಹೀಂದ್ರ ಮತ್ತು ಹೀರೋ ಮೊಟೊಕಾರ್ಪ್ ಕೂಡ ಖರೀದಿಸಲು ಆಸಕ್ತಿ ತೋರಿತ್ತು. ಆದರೆ ಅಂತಿಮವಾಗಿ ಫೋಕ್ಸ್‌ವ್ಯಾಗನ್ ಎಜಿ ಕಂಪನಿಯ ಆಡಿ ಬ್ರಾಂಡ್ ಡುಕಾಟಿ ಖರೀದಿಸುವುದಾಗಿ ಪ್ರಕಟಿಸಿದೆ.
"ಡುಕಾಟಿಯು ಜಾಗತಿಕವಾಗಿ ಪ್ರಮುಖ ಬೈಕ ಬ್ರಾಂಡ್. ಬೈಕ್ ನಿರ್ಮಿಸುವಲ್ಲಿ ಈ ಕಂಪನಿಯು ಸಾಕಷ್ಟು ವರ್ಷಗಳ ಇತಿಹಾಸ ಹೊಂದಿದೆ. ಜೊತೆಗೆ ಈ ಕಂಪನಿಯು ಅತ್ಯಧಿಕ ಕ್ಷಮತೆಯ ಎಂಜಿನ್ ಮತ್ತು ಹಗುರ ತಂತ್ರಜ್ಞಾನಗಳಲ್ಲಿ ಜನಪ್ರಿಯವಾಗಿದೆ. ಈ ಕಂಪನಿಯನ್ನು ಖರೀದಿಸಲು ಫೋಕ್ಸ್‌ವ್ಯಾಗನ್ ಕಂಪನಿಯು ಸಮ್ಮತಿ ಎಂದಿದೆ" ಎಂದು ಆಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಂಡಬ್ಲ್ಯು ಬೈಕುಗಳಿಗೆ ಆಡಿ ಕಂಪನಿಯು ಡುಕಾಟಿ ಬೈಕುಗಳ ಮೂಲಕ ಮಾರುಕಟ್ಟೆಯಲ್ಲಿ ಸಮರ್ಥ ಪೈಪೋಟಿ ನೀಡುವ ನಿರೀಕ್ಷೆಯಿದೆ. ಬಿಎಂಡಬ್ಲ್ಯು ಕೂಡ ಪ್ರೀಮಿಯಂ ಬೈಕ್ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಯಾಗಿದೆ.


Click it and Unblock the Notifications
