ಕಣ್ಣರಳಿಸಿ ನೋಡಿರಣ್ಣ, ಇದು ಕಲ್ಲಂಗಡಿ ಕಾರು

ಈ ಬೇಸಿಗೆ ಬೇಗೆಗೆ ಕಲ್ಲಂಗಡಿ ಹಣ್ಣು ಕಣ್ಣಿಗೆ ಬಿತ್ತೆಂದರೆ ಮನದಲ್ಲಿ ಹಬ್ಬ ಶುರುವಾಗುತ್ತದೆ. ಮನೆಗೆ ಒಂದಿಡಿ ಕಲ್ಲಂಗಡಿ ಕೊಂಡೊಯ್ದು ತಿನ್ನುವ ಮಜನೇ ಬೇರೆ. ಆದರೆ ನೆಟ್ ಲೋಕದಲ್ಲಿ ನಮ್ಮ ಕಣ್ಣಿಗೆ ಬಿದ್ದದ್ದು ಅಚ್ಚರಿಗೊಳಿಸುವ ಕಲ್ಲಂಗಡಿ ಬಣ್ಣದ ಕಾರು.

ಕಾರು ಅಥವಾ ಬೈಕುಗಳನ್ನು ತಮ್ಮ ಆಸಕ್ತಿಗೆ ತಕ್ಕಂತೆ ರೂಪಾಂತರಗೊಳಿಸುವ ಟ್ರೆಂಡ್ ಹೆಚ್ಚಾಗಿ ಚಾಲ್ತಿಯಲ್ಲಿದೆ. ಇಲ್ಲೊಬ್ಬ ಕಾರು ಮಾಲೀಕ ಕಾರಿನ ಪೇಂಟ್ ಬಣ್ಣವನ್ನು ಕಲ್ಲಂಗಡಿಯ ಹೊರಮೈಯಂತೆ ಮತ್ತು ಕಾರಿನ ಒಳಭಾಗವನ್ನು ಕಲ್ಲಂಗಡಿ ಒಳಮೈಯಂತೆ ಮಾಡಿಫೈ ಮಾಡಿಕೊಂಡಿದ್ದಾನೆ.

ಈ ಕಾರಿನ ಪೇಂಟ್ ವರ್ಕ್ ಕಣ್ಮನ ಸೆಳೆಯುತ್ತದೆ. ಕಾರಿನ ಹೊರಮೈ ಥೇಟ್ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಣ್ಣದಲ್ಲಿ ಕಂಗೊಳಿಸುತ್ತದೆ. ಅಂದರೆ ಎರಡು ಬಣ್ಣದ ಗೆರೆಗಳು, ಕಡುಬಣ್ಣ, ಎಲ್ಲವೂ ಇದೆ. ಇಂಟಿರಿಯರ್ ಬಾಯಲ್ಲಿ ನಿರೂರಿಸುವಂತಿದೆ. ಯಾಕೆಂದರೆ ಕಾರಿನ ಸೀಟು, ಒಳವಿನ್ಯಾಸವೆಲ್ಲ ಕೆಂಪು ಕೆಂಪು ತಂಪು ಬಣ್ಣದಿಂದ ಕಂಗೊಳಿಸುತ್ತದೆ. ಕಲ್ಲಂಗಡಿ ಬೀಜಗಳ ಚಿತ್ರಗಳೂ ಒಳಗಿದೆ.

ಒಟ್ಟಾರೆ ಈ ಕಾರಿನ ವಿನ್ಯಾಸ ಸೂಪರ್. ಎಲ್ಲರೂ ಕಾರುಗಳನ್ನು ಕಲ್ಲಂಗಡಿ ಬಣ್ಣಕ್ಕೆ ಪರಿವರ್ತಿಸಿದರೆ ರಸ್ತೆ ರಸ್ತೆ ತುಂಬಾ ವಾಟರ್‌ಮೆಲೊನ್ ರಾಶಿ ಹಾಕಿದಂತೆ ಕಾಣಬಹುದು. ಚಿತ್ರ ನೋಡಿ ಎಂಜಾಯ್ ಮಾಡಿ.

More from DriveSpark

Article Published On: Friday, April 20, 2012, 12:55 [IST]
English summary
An automobile enthusiast has modified his car like a watermelon car. The complete interior of the car was designed with a bright red colour. The paintwork is actually really well done, creating this watermelon-themed car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+