ಯಾಕೆ ಎಲ್ರೂ ಡೀಸೆಲ್ ಕಾರು ಖರೀದಿಸ್ತಾರೆ?

ಪೆಟ್ರೋಲ್ ದರ ಹೆಚ್ಚಳದ ನಂತರ ಪೆಟ್ರೋಲ್ ಕಾರುಗಳ ಮಾರಾಟ ಭರ್ಜರಿಯಾಗಿ ಏರಿಕೆ ಕಾಣುತ್ತಿದೆ. ಹೆಚ್ಚಿನ ಜನರು ಡೀಸೆಲ್ ಕಾರಿಗೆ ಹೆಚ್ಚು ದುಡ್ಡು ನೀಡಲು ಹಿಂದೆ ಮುಂದೆ ನೋಡುತ್ತಿಲ್ಲ. ಯಾಕೆಂದರೆ ಡೀಸೆಲ್ ಕಾರಲ್ಲಿ ಪೆಟ್ರೋಲ್ ಕಾರುಗಳಿಗಿಂತ ಶೇಕಡ 25ರಿಂದ 30ರಷ್ಟು ಹೆಚ್ಚು ಮೈಲೇಜ್ ಸಿಗುತ್ತದೆ.

ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ಮೇಟೆಂನ್ಸ್ ವೆಚ್ಚವೂ ಕಡಿಮೆ. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳ ಬೆಲೆ ದುಬಾರಿಯಾಗಿರುವುದು ಕೂಡ ಡೀಸೆಲ್ ಕಾರು ಬೇಡಿಕೆ ಹೆಚ್ಚಿಸಿದೆ. ಹೀಗಾಗಿ ಡೀಸೆಲ್ ಕಾರು ಮರು ಮಾರಾಟ ಮಾಡಿದ್ರೂ ಹೆಚ್ಚು ನಷ್ಟವಿಲ್ಲ.

ಈ ಹಿಂದಿನ ವರದಿಯಲ್ಲಿ ತಿಳಿಸಿರುವಂತೆ ಪೆಟ್ರೋಲ್ ಕಾರುಗಳಿಗೆ ಕಾರು ಕಂಪನಿಗಳು ಭಾರಿ ಪ್ರಮಾಣದ ಡಿಸ್ಕೌಂಟ್ ನೀಡುತ್ತಿವೆ. ಆದರೆ ಗ್ರಾಹಕರು ಕೆಲವು ಸಾವಿರ ರುಪಾಯಿ ಹೆಚ್ಚಾದರೂ ಚಿಂತೆಯಿಲ್ಲ, ಡೀಸೆಲ್ ಕಾರುಗಳಿಗೆ ಓಕೆ ಎನ್ನುತ್ತಿದ್ದಾರೆ. ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ಅನುಪಾತ ಈಗ 80:20ರಷ್ಟಿದೆ.

ಪೆಟ್ರೋಲ್ ದರ ದುಬಾರಿಯಾದ ನಂತರ ಬಿ ಸೆಗ್ಮೆಂಟ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. "ಪೆಟ್ರೋಲ್ ದರ ಹೆಚ್ಚಳದ ನಂತರ ಹೆಚ್ಚಿನ ಜನರು ಪೆಟ್ರೋಲ್ ಕಾರು ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ" ಎಂದು ಹೋಂಡಾ ಕಾರು ಡೀಲರೊಬ್ಬರು ಹೇಳಿದ್ದಾರೆ.

"ಡೀಸೆಲ್ ಕಾರು ಖರೀದಿಸಲಾಗದವರು, ಪೆಟ್ರೋಲ್ ದರದ ಮೇಲೆ ಭಯವಿರುವವರು ಈಗ ನ್ಯಾನೊ ಕಾರು ಖರೀದಿಸುತ್ತಿದ್ದಾರೆ. ಪ್ರಸಕ್ತ ದುಬಾರಿ ಪೆಟ್ರೋಲಿಗೆ ನ್ಯಾನೊ ಮೈಲೇಜ್ ಮತ್ತು ರನ್ನಿಂಗ್ ವೆಚ್ಚ ಸಮರ್ಥ ಆಯ್ಕೆಯಾಗಿದೆ" ಎಂದು ಟಾಟಾ ವಕ್ತಾರರು ಹೇಳುತ್ತಾರೆ.

ಮಾರುತಿ ಡೀಲರುಗಳು ಕೂಡ ಗ್ರಾಹಕರ ಮನಸು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. "ಡೀಸೆಲ್ ಕಾರುಗಳಿಗೆ ಒಂದು ಲಕ್ಷ ಜಾಸ್ತಿ ದುಡ್ಡು ಕೊಡುವುದಕ್ಕಿಂತ ಪೆಟ್ರೋಲ್ ಕಾರು ಸೂಕ್ತ. ಹೆಚ್ಚಿನ ಜನರು ಮೂರು ವರ್ಷದಲ್ಲಿ ಹೆಚ್ಚೆಂದರೆ 25 ಸಾವಿರ ಕಿ.ಮೀ. ಕಾರು ಚಲಾಯಿಸುತ್ತಾರೆ. ಅವರಿಗೆಲ್ಲ ಡೀಸೆಲ್ ಕಾರುಗಳು ವ್ಯರ್ಥ. ಇದನ್ನು ಗ್ರಾಹಕರಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಮಾರುತಿ ಡೀಲರೊಬ್ಬರು ತಿಳಿಸಿದ್ದಾರೆ.

ಪೆಟ್ರೋಲ್ ದರ ಹೆಚ್ಚಳದಿಂದ ಐಷಾರಾಮಿ ಕಾರು ಕಂಪನಿಗಳು ಅಂತಹ ಹಿನ್ನಡೆ ಅನುಭವಿಸಿಲ್ಲ. "ಐಷಾರಾಮಿ ಕಾರು ಗ್ರಾಹಕರು ಪೆಟ್ರೋಲಿನಿಂದ ಡೀಸೆಲ್ ಸೆಗ್ಮೆಂಟಿಗೆ ವಲಸೆ ಹೋಗಿಲ್ಲ" ಎಂದು ಐಷಾರಾಮಿ ಕಾರು ಡೀಲರೊಬ್ಬರು ಮಾಹಿತಿ ನೀಡಿದ್ದಾರೆ.

More from DriveSpark

Article Published On: Saturday, June 9, 2012, 13:09 [IST]
English summary
After Petrol Price hike diesel car sales hike. Many people preferred diesel cars because they offer 25 to 30 per cent more mileage per litre. Resale market Demand, Low Maintenance costs also reason behind the decreasing diesel car demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+