ಮಾರುತಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ಎಪ್ರಿಲ್‌ನಲ್ಲಿ ಲಾಂಚ್?

By Nagaraja

ಮಾರುತಿ ಸುಜುಕಿ ಮಾಡೆಲ್‌ಗಳ ಪೈಕಿ ಎಸ್‌ಎಕ್ಸ್4 ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾದಂತೆ ಎಸ್‌ಎಕ್ಸ್4 ಕಳೆಗುಂದಿದ್ದವು.

ಮಾರುತಿಯ ಮತ್ತೊಂದು ಆವೃತ್ತಿಯಾದ ಸ್ವಿಫ್ಟ್ ಡಿಜೈರ್ ಕೂಡಾ ಎಸ್‌ಎಕ್ಸ್4 ನಿರೀಕ್ಷೆಗಳಿಗೆ ಪೆಟ್ಟು ನೀಡುವಂತಾಗಿತ್ತು. ಇವೆಲ್ಲವನ್ನು ಮನಗಂಡಿರುವ ದೇಶದ ನಂ.1 ಪ್ರಯಾಣಿಕ ಕಾರು ಉತ್ಪಾದಕ ಸಂಸ್ಥೆಯಾದ ಮಾರುತಿ ಸುಜುಕಿ, ನೂತನ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಮಾಡಲು ಯೋಜನೆ ಹೊಂದಿದೆ.

ವರದಿಗಳ ಪ್ರಕಾರ ಮಾರುತಿ ಸುಜುಕಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ವರ್ಷನ್ ಎಪ್ರಿಲ್ ವೇಳೆಗೆ ಮಾರುಕಟ್ಟೆ ತಲುಪುವ ಸಾಧ್ಯತೆಯಿದೆ. ಹಾಗಿದ್ದರೆ ನೂತನ ಕಾರಿನಲ್ಲಿ ಯಾವುದೆಲ್ಲ ಬದಲಾವಣೆ ಕಂಡುಬರಲಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ನೋಡೋಣ...

ಮಾರುತಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ಎಪ್ರಿಲ್‌ನಲ್ಲಿ ಲಾಂಚ್?

ಕಾರಿನ ಹೊರ ಭಾಗದಲ್ಲಿ ಕಾಸ್ಮೆಟಿಕ್ ಬದಲಾವಣೆ ಕಂಡುಬರಲಿದೆ. ಕ್ರೋಮ್ ಗ್ರಿಲ್ ಹಾಗೂ ಪರಿಷ್ಕೃತ ಬಂಪರ್, ಸುಧಾರಿತ ಫಾಗ್ ಲ್ಯಾಂಪ್ ಹಾಗೂ ಏರ್ ಡ್ಯಾಮ್ ಪಡೆಯಲಿದೆ.

ಮಾರುತಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ಎಪ್ರಿಲ್‌ನಲ್ಲಿ ಲಾಂಚ್?

ಎಕ್ಸ್‌ಟೀರಿಯರ್ ಬದಲಾವಣೆ ಅಷ್ಟೊಂದು ಕಂಡುಬಂದಿಲ್ಲವಾದರೂ ಇಂಟಿರಿಯರ್ ಭಾಗಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ.

ಮಾರುತಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ಎಪ್ರಿಲ್‌ನಲ್ಲಿ ಲಾಂಚ್?

ನೂತನ ಫ್ಯಾಬ್ರಿಕ್ ಸೀಟ್, ಡೋರ್ ಹ್ಯಾಂಡಲ್‌ನಲ್ಲಿ ಕ್ರೋಮ್ ವ್ಯವಸ್ಥೆ ಹಾಗೂ ಇನ್ಫೋಟೈನ್‌ಮೆಂಟ್ ಸಿಸ್ಟಂ ಪ್ರಮುಖವಾಗಿರಲಿದೆ.

ಮಾರುತಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ಎಪ್ರಿಲ್‌ನಲ್ಲಿ ಲಾಂಚ್?

ಆದರೆ ಎಂಜಿನ್ ಆಯ್ಕೆ ಮಾತ್ರ ಹಳೆಯದಾಗಿರಲಿದ್ದು, 1.6 ಲೀಟರ್ ವಿವಿಟಿ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಯುನಿಟ್ ಪಡೆಯಲಿದೆ. ಹಾಗೆಯೇ ಎರಡು ಹೊಸ ಕಲರ್ ಆಯ್ಕೆಗಳು ಕಾರನ್ನು ಹೆಚ್ಚು ಅಂದವಾಗಿಸಲಿದೆ.

ಮಾರುತಿ ಎಸ್‌ಎಕ್ಸ್4 ಫೇಸ್‌ಲಿಫ್ಟ್ ಎಪ್ರಿಲ್‌ನಲ್ಲಿ ಲಾಂಚ್?

ಇಷ್ಟಾದರೂ ದರದ ಬಗ್ಗೆ ಹೆಚ್ಚು ಮಾಹಿತಿ ಬಂದಿಲ್ಲ. ವರದಿ ಬಂದಾಕ್ಷಣ ನಿಮಗೆ ಮಾಹಿತಿ ತಲುಪಸಲಾಗುವುದು. ಇದಕ್ಕಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Thursday, March 28, 2013, 9:35 [IST]
English summary
2013 Maruti Suzuki SX4 Facelift Details Revealed. A new seat fabric, new infotainment system for the top-spec variant and chrome on the door handles are among the main changes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+