ಸದ್ಯದಲ್ಲೇ ಭಾರತೀಯ ರಸ್ತೆಗೆ 2013 ಸ್ಕೋಡಾ ಒಕ್ಟಾವಿಯಾ
ಪ್ರಸಕ್ತ ಸಾಗುತ್ತಿರುವ ಜಿನೆವಾ ಮೋಟಾರ್ ಶೋದಲ್ಲಿ ಅತಿ ನೂತನ 2013 ಸ್ಕೋಡಾ ಒಕ್ಟಾವಿಯಾ ಕಾರು ಬಿಡುಗಡೆಗೊಂಡಿದೆ. ತನ್ನ ಆವೃತ್ತಿಯ ಕಾಂಪಾಕ್ಟ್ ಸೆಡಾನ್‌ಗಳ ಪೈಕಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೋಡಾ ಒಕ್ಟಾವಿಯಾ, ಹೆಚ್ಚು ಇಂಟಿರಿಯರ್ ಸ್ಥಳಾವಕಾಶ, ಕ್ರಿಯಾತ್ಮಕತೆ, ಸುರಕ್ಷತೆ, ಆರಾಮದಾಯಕತೆ ಹಾಗೂ ಕಡಿಮೆ ಇಂಧನ ಬಳಕೆಯಂತಹ ನೂತನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಈ ಸಂದರ್ಭದಲ್ಲಿ ಒಕ್ಟಾವಿಯಾ ಮಾಡೆಲ್ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿರುವ ಸ್ಕೋಡಾ ಸಿಇಒ ವಿನ್‌ಫ್ರೆಡ್ ವಾಹ್‌ಲ್ಯಾಂಡ್, ಒಕ್ಟಾವಿಯಾ ಸ್ಕೋಡಾ ಬ್ರಾಂಡ್‌ನ 'ಹೃದಯ' ಎಂದು ಬಣ್ಣಿಸಿದ್ದಾರೆ. ಇದರಲ್ಲಿ ಹೆಚ್ಚಿನ ಸ್ಥಳಾವಕಾಶ, ಗುಣಮಟ್ಟ, ಆಧುನಿಕ, ಪರಿಪಕ್ವತೆಯ ತಂತ್ರಜ್ಞಾನ, ಆಗಾಧ ವಿನ್ಯಾಸ, ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರ ಕೈ ಸೇರಲಿದೆ ಎಂದಿದ್ದಾರೆ.
ಮೂರನೇ ಜನಾಂಗಕ್ಕಿಂತಲೂ ಹೆಚ್ಚು ಪ್ರಭಾವತ್ಮಕವಾಗಿ ಸ್ಕೋಡಾ ಒಕ್ಟಾವಿಯಾ ನಿರ್ಮಿಸುವುದು ನಮ್ಮ ಗುರಿಯಾಗಿತ್ತು. ಇದೀಗ ತನ್ನದೇ ವೈಶಿಷ್ಟ್ಯ ಹೊಂದಿರುವ ಸ್ಕೋಡಾ ಒಕ್ಟಾವಿಯಾದಲ್ಲಿ ಇವೆಲ್ಲ ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ.
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಇಂಟಿರಿಯರ್ ಸ್ಪೇಸ್
ಕಾಂಪೆಕ್ಟ್ ಸೆಡಾನ್ ವಿಭಾಗದ ಕಾರುಗಳ ಪೈಕಿ ಸ್ಕೋಡಾ ಒಕ್ಟಾವಿಯಾ ಅತಿ ಹೆಚ್ಚು ಸ್ಥಳಾವಕಾಶವನ್ನು ಒದಗಿಸುತ್ತಿದೆ. ಇದು 1,782ಎಂಎಂ ಉದ್ದ, 73ಎಂಎಂ ಲೆಗ್ ರೂಂ ಹಾಗೂ 980ಎಂಎಂ ಹೆಡ್ ರೂಂ ಹೊಂದಿದೆ. ಹಾಗೆಯೇ 590 ಲೀಟರ್ ಬೂಟ್ ಸ್ಪೇಸ್ ಕೂಡಾ ಹೊಂದಿದೆ.

ಪರಿಷ್ಕತ ವಿನ್ಯಾಸ
ಸ್ಕೋಡಾ ಟೆಕ್ನಿಕಲ್ ಅಭಿವೃದ್ಧಿ ಮಂಡಳಿ ಸದಸ್ಯರ ಪ್ರಕಾರ ಸ್ಕೋಡಾ ಸುಸ್ಪಷ್ಟ ವಿನ್ಯಾಸವನ್ನು ಹೊಂದಿದೆ. ಪ್ರಸ್ತುತ ಕಾರು ಆತ್ಮವಿಶ್ವಾಸ ಹಾಗೂ ದಿಟ್ಟ ನೋಟವನ್ನು ಹೊಂದಿದೆ.

ಸುರಕ್ಷತಾ ಫೀಚರ್ಸ್
ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದ್ದು, ಫ್ರಂಟ್ ಅಸಿಸ್ಟಂಟ್ ಅಥವಾ ತುರ್ತು ಬ್ರೇಕಿಂಗ್ ಫಂಕ್ಷನ್, ಲೇನ್ ಅಸಿಸ್ಟಂಟ್, ಮಲ್ಟಿಕೊಲೈಶನ್ ಬ್ರೇಕಿಂಗ್, ಕ್ರೂ ಪ್ರೊಟೆಕ್ಟ್ ಅಸಿಸ್ಟಂಟ್ ಹಾಗೂ ಡ್ರೈವರ್ ಆಕ್ಟಿವಿಟಿ ಅಸಿಸ್ಟ್ ಗಳಂತಹ ಫೀಚರ್‌ಗಳನ್ನು ಹೊಂದಿದೆ. ಈ ಆಕ್ಟಿವ್ ಸುರಕ್ಷತಾ ಸೌಲಭ್ಯ ಜತೆ ಒಂಬತ್ತು ಸೇಫ್ಟಿ ಬ್ಯಾಗ್ ಹಾಗೂ ತ್ರಿ ಪಾಯಿಂಟ್ ಸೇಫ್ಟಿ ಬೆಲ್ಟ್ ಕೂಡಾ ಲಭ್ಯವಿರಲಿದೆ.

ಇಂಧನ ದಕ್ಷತೆ
ಸ್ಕೋಡಾ ಒಕ್ಟಾವಿಯಾ 1.6 ಟಿಡಿಐ (81ಕೆಡಬ್ಲ್ಯು) ಡೀಸೆಲ್ ಎಂಜಿನ್, 3.3 ಲೀಟರ್‌ಗೆ 100 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಇದರ ಕಾರ್ಬನ್ ಹೊರಸೂಸುವಿಕೆ ಪ್ರತಿ ಕೀ.ಮೀ.ಗೆ ಕೇವಲ 87 ಗ್ರಾಂನಷ್ಟು ಮಾತ್ರವಾಗಿದೆ.

ಆರಾಮದಾಯಕ ಹಾಗೂ ತಂತ್ರಜ್ಞಾನ
ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ನೂತನ ಸ್ಕೋಡಾ ಒಕ್ಟಾವಿಯಾ ಆರಾಮದಾಯಕ ಚಾಲನೆಯನ್ನು ಪ್ರತಿಪಾದಿಸುತ್ತಿದೆ. ನೂತನ ಒಕ್ಟಾವಿಯಾವು ಕೀಲೇಸ್ ಎಂಟ್ರಿ ಸ್ಟಾರ್ಟ್ ಆಂಡ್ ಎಕ್ಸಿಟ್ ಸಿಸ್ಟಂ, ಆಟೋಮ್ಯಾಟಿಕ್ ಡೋರ್ ಹಾಗೂ ಇಗ್ನಿಷನ್ ಲಾಕ್ ಸಿಸ್ಟಂನಿಂದಲೂ ಆಗಮನವಾಗಿದೆ.

ಸದ್ಯದಲ್ಲೇ ಭಾರತೀಯ ರಸ್ತೆಗೆ
ಹಾಗಿದ್ದರೂ ನೂತನ ಸ್ಕೋಡಾ ಒಕ್ಟಾವಿಯಾ ದರ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಹೊರಗೆಡವಿಲ್ಲ. ಪ್ರಸ್ತುತ ಕಾರು ಭಾರತೀಯ ಮಾರುಕಟ್ಟೆಯನ್ನು 2013ನೇ ಇಸವಿಯ ಮಧ್ಯಂತರ ಅವಧಿಯಲ್ಲಿ ಪ್ರವೇಶಸಲಿದೆ.

2013 ಸ್ಕೋಡಾ ಒಕ್ಟಾವಿಯಾ

2013 ಸ್ಕೋಡಾ ಒಕ್ಟಾವಿಯಾ

2013 ಸ್ಕೋಡಾ ಒಕ್ಟಾವಿಯಾ

2013 ಸ್ಕೋಡಾ ಒಕ್ಟಾವಿಯಾ

2013 ಸ್ಕೋಡಾ ಒಕ್ಟಾವಿಯಾ

2013 ಸ್ಕೋಡಾ ಒಕ್ಟಾವಿಯಾ



Click it and Unblock the Notifications








