2014 ಬಿಎಂಡಬ್ಲ್ಯು 6 ಸಿರೀಸ್ ಎಂ ಸ್ಪೋರ್ಟ್ ಅನಾವರಣ
ಜರ್ಮನಿಯ ಪ್ರೀಮಿಯಂ ವಾಹನ ತಯಾರಕ ಸಂಸ್ಥೆಯಾದ ಬಿಎಂಡಬ್ಲ್ಯು ನೂತನ 6 ಸಿರೀಸ್ ಎಂ ಸ್ಪೋರ್ಟ್ಸ್ ಕಾರನ್ನು ಅವಾವರಣಗೊಳಿಸಿದೆ. ಇದು ಎಂ ಸ್ಪೋರ್ಟ್ ಪ್ಯಾಕೇಜ್‌ನಲ್ಲಿ ಆಗಮನವಾಗಲಿದೆ. ನೂತನ ಬಿಎಂಡಬ್ಲ್ಯು 6 ಸಿರೀಸ್ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಎಂ ಸ್ಪೋರ್ಟ್ ಪ್ಯಾಕೇಜ್‌ಗೆ ಹೆಚ್ಚುವರಿ ವೆಚ್ಚ ತಗಲಿದೆ. ಹಾಗಿದ್ದರೂ ಎಂಜಿನ್‌ನಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.
ಎಂ ಸ್ಪೋರ್ಟ್ ಎಡಿಷನ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಫಾಗ್ ಲ್ಯಾಂಪ್, ಎಂ ಏರೋಡೈನಾಮಿಕ್ ಪ್ಯಾಕೇಜ್, 19 ಇಂಚು ಎಂ ಅಲಾವ್ ವೀಲ್, ಹೈ ಗ್ಲೋಸ್ ಶ್ಯಾಡೋ ಲೈನ್, ಬ್ಲ್ಯಾಕ್ ಬ್ರೇಕ್ ಕ್ಯಾಲಿಪರ್ ಹಾಗೂ ಡಾರ್ಕ್ ಕ್ರೋಮ್ ಎಕ್ಸ್‌ಹಾಸ್ಟ್ ಪೈಪ್ ಹೊಂದಿರಲಿದೆ.
ಇನ್ನು ಕಾರಿನ ಒಳಗಡೆ ಮಲ್ಟಿ ಸ್ಪೀಕರ್, ಸೌರಂಡ್ ಸೌಂಡ್ ಸಿಸ್ಟಂ, ಬಿಎಂಡಬ್ಲ್ಯು ಡ್ರೈವ್ ಸರ್ವೀಸ್ ಹಾಗೂ 10.2 ಟಚ್ ಕಂಟ್ರೋಲ್ ಡಿಸ್‌ಪ್ಲೇ ಇರಲಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆಕ್ಟಿವ್ ಡ್ರೈವಿಂಗ್ ಅಸಿಸ್ಟಂಟ್, ಆಕ್ಟಿವ್ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಟಾಪ್ ವ್ಯೂ ಕ್ಯಾಮೆರಾ ಹೊಂದಿರಲಿದೆ.
ನೂತನ 2014 ಬಿಎಂಡಬ್ಲ್ಯು 6 ಸಿರೀಸ್ ಎಂ ಸ್ಪೋರ್ಟ್ಸ್ ಎಡಿಷನ್ ಪ್ರಾರಂಭಿಕ ದರ 45 ಲಕ್ಷ ಅಸುಪಾಸಿನಲ್ಲಿದೆ. ಇದು 640ಐ ಕೂಪೆ ಎಂ ಸ್ಪೋರ್ಟ್ ಎಡಿಷನ್ ಎಂದು ಅರಿಯಲ್ಪಡಲಿದೆ.


Click it and Unblock the Notifications
