2014ರಲ್ಲಿ ಭಾರತಕ್ಕೆ ರೇಂಜ್ ರೋವರ್ ಇವೋಕ್ ಎಂಟ್ರಿ
ಐಷಾರಾಮಿ ಕಾರುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿರುವ ಪ್ರತಿಷ್ಠಿತ 2014 ರೇಂಜ್ ರೋವರ್ ಇವೋಕ್ ಮುಂದಿನ ವರ್ಷಾರಂಭದಲ್ಲಿ ಭಾರತಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳು ನಿಚ್ಚಳವಾಗಿದೆ.
9 ಸ್ಪೀಡ್ ಟ್ರಾನ್ಸ್‌ಮಿಷನ್ ಆಳವಡಿಸಿರುವುದು ಈ ಕಾರಿನ ಪ್ರಮುಖ ವೈಶಿಷ್ಟ್ಯವಾಗಿದೆ. ಇದರಿಂದ ಗರಿಷ್ಠ ಇಂಧನ ದಕ್ಷತೆ ದೊರಕುವುದರೊಂದಿಗೆ ಕಾರ್ಬನ್ ಎಮಿಷನ್ ಹೊರ ಸೂಸುವುದನ್ನು ಕಡಿಮೆ ಮಾಡಲು ನೆರವಾಗಲಿದೆ.
ವರ್ಷಾರಂಭದಲ್ಲಿ ನಡೆದ ಜಿನೆವಾ ಮೋಟಾರ್ ಶೋದಲ್ಲಿ ಪ್ರದರ್ಶನ ಕಂಡಿದ್ದ 2014 ಇವೋಕ್‌ನ 9 ಸ್ಪೀಡ್ ತಂತ್ರಜ್ಞಾನವನ್ನು ಜರ್ಮನ್ ಝಡ್‌ಎಫ್ ಅಭಿವೃದ್ಧಿಪಡಿಸಿದೆ.

ಭಾರತ ಎಂಟ್ರಿ
ಮುಂದಿನ ಜನಾಂಗದ ರೇಂಜ್ ರೋವರ್ ಇವೋಕ್ ಭಾರತವನ್ನು 2014ರಲ್ಲಿ ಪ್ರವೇಶಿಸುವ ನಿರೀಕ್ಷೆಯಿದೆ. ಇದರ 9 ಸ್ಪೀಡ್ ಟ್ರಾನ್ಸ್‌ಮಿಷನ್, ಪೆಟ್ರೋಲ್ ಸೇರಿದಂತೆ ಡೀಸೆಲ್ ಆವೃತ್ತಿಗಳಲ್ಲೂ ಕಾರ್ಯನಿರ್ವಹಿಸಲಿದೆ.

ಎಂಜಿನ್ ಮಾಹಿತಿ
ಲ್ಯಾಂಡ್ ರೋವರ್ ಪ್ರಕಾರ ಇಂಧನ ದಕ್ಷತೆ ಹಾಗೂ ಕಾರ್ಬನ್ ಎಮಿಷನ್ ಹೊರ ಸೂಸುವಿಕೆ ಅನುಕ್ರಮವಾಗಿ ಶೇಕಡಾ 11.4 ಹಾಗೂ 9.5 ರಷ್ಟು ಕಂಡುಬರಲಿದೆ. ಅಂದರೆ 148 ಅಶ್ವಶಕ್ತಿ ಉತ್ಪಾದಿಸುವ 2.2 ಡೀಸೆಲ್ ಎಂಜಿನ್‌ನಲ್ಲಿ ಇದನ್ನು ಆಳವಡಿಸಿದ್ದಲ್ಲಿ ಪ್ರತಿ ಲೀಟರ್‌ಗೆ 24.48 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಪ್ರತಿ ಕೀ.ಮೀ. ಕೇವಲ 129 ಗ್ರಾಂಗಳಷ್ಟೇ ಕಾರ್ಬನ್ ಡೈ ಓಕ್ಸೈಡ್ ಹೊರಸೂಸಲಿದೆ.

ಆಕ್ಟಿವ್ ಡ್ರೈವ್ ಲೈನ್
ಇದನ್ನು ಗ್ರಾಹಕರನ್ನು ಇಚ್ಛಿಸಿದ್ದಲ್ಲಿ ಮಾತ್ರ ಆಳವಡಿಸಬಹುದಾಗಿದೆ. ಈ ಮೂಲಕ ಆಲ್ ವೀಲ್ ಹಾಗೂ ಫ್ರಂಟ್ ವೀಲ್ ಅಗತ್ಯಕ್ಕನುಸಾರವಾಗಿ ಬದಲಾಯಿಸಿಕೊಳ್ಳಬಹುದಾಗಿದೆ.

9 ಸ್ಪೀಡ್ ಟ್ರಾನ್ಸ್‌ಮಿಷನ್
2014 ರೇಂಜ್ ರೋವರ್ ಇವೋಕ್‌ನಲ್ಲಿ ಹಲವಾರು ಬದಲಾವಣೆ ಕಂಡುಬರಲಿದೆ.

ಸುರಕ್ಷತೆ
ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಗರಿಷ್ಠ ಮಾನದಂಡಗಳನ್ನು ಅನುಸರಿಸಲಾಗಿದೆ.


Click it and Unblock the Notifications








