25 ಲಕ್ಷ ಪಾವತಿಸಿ ಬೆಂಝ್ ಎಸ್-ಕ್ಲಾಸ್ ಬುಕ್ಕಿಂಗ್ ಮಾಡಿ
2014 ಮರ್ಡಿಡಿಸ್ ಬೆಂಝ್ ಎಸ್-ಕ್ಲಾಸ್ ಭಾರತದಲ್ಲಿ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆಯಾಗುವುದು ನಿಗದಿಯಾಗಿದೆ. ಇದಕ್ಕೆ ಮುನ್ನುಡಿಯಾಗಿ ಈ ಪ್ರೀಮಿಯಂ ಲಗ್ಷುರಿ ಸೆಡಾನ್ ಕಾರಿನ ಮುಗಂಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಕಂಪನಿ ಆರಂಭಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇದಕ್ಕಾಗಿ ನೀವು ಬರೋಬ್ಬರಿ 25 ಲಕ್ಷ ರು. ಪಾವತಿಸಬೇಕಾಗುತ್ತದೆ. ಅಂದರೆ ಈ ಮೊತ್ತದಲ್ಲಿ ಮರ್ಸಿಡಿಸ್ ಎ ಕ್ಲಾಸ್ ನಿಮ್ಮದಾಗಿಸಬಹುದಾಗಿದೆ. ಅಂದ ಹಾಗೆ ಎಸ್ ಕ್ಲಾಸ್ ಒಂದು ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಭಾರತದಲ್ಲಿ ಸೀಮಿತ 125 ಯುನಿಟ್‌ಗಳು ಮಾತ್ರ ಲಭ್ಯವಿರಲಿದೆ. ಈ ಎಸ್500 ಲಿಮಿಟೆಡ್ ಎಡಿಷನ್ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದು 455 ಪಿಎಸ್/616 ಎನ್‌ಎಂ ಟ್ವಿನ್ ಟರ್ಬೊ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಎಡಿಷನ್ 1 ಬ್ಯಾಡ್ಜ್ ಪಡೆದುಕೊಳ್ಳಲಿದೆ.
ಐಷಾರಾಮಿ ಕಾರುಗಳ ಪೈಕಿ ಆಡಿ ಎ8 ಮತ್ತು ಬಿಎಂಡಬ್ಲ್ಯು 7 ಸಿರೀಸ್ ಕಾರುಗಳಿಗೆ ಬೆಂಝ್ ಎಸ್ ಕ್ಲಾಸ್ ಪೈಪೋಟಿ ಒಡ್ಡಲಿದೆ.


Click it and Unblock the Notifications








