ಹೊಸ ವರ್ಷದಲ್ಲಿ ಬೆಂಝ್ ಎಸ್ ಕ್ಲಾಸ್ ಲಾಂಚ್

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, 2014 ಎಸ್ ಕ್ಲಾಸ್ ಕಾರನ್ನು ಹೊಸ ವರ್ಷದಲ್ಲಿ ಲಾಂಚ್ ಮಾಡಲಿದೆ. ಈ ಮೊದಲು 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಎಸ್ ಕ್ಲಾಸ್ ಐಷಾರಾಮಿ ಕಾರು ಲಾಂಚ್ ಆಗುವ ಬಗ್ಗೆ ಸೂಚನೆಗಳು ಲಭಿಸಿದ್ದವು. ಆದರೆ ನಿಗದಿತ ಅವಧಿಗಿಂತ ಮುಂಚಿತವಾಗಿ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ನಿರ್ಧರಿಸಿದೆ.

ಬೆಂಝ್ ಸಿ ಕ್ಲಾಸ್ ಐಷಾರಾಮಿ ಕಾರು ಹೆಂಗಿದೆ ಅಂತೀರಾ?

ಈಗಷ್ಟೇ 2015 ಬೆಂಝ್ ಸಿ ಕ್ಲಾಸ್ ಮುಂಬರುವ ಡೆಟ್ರಾಯ್ಟ್ ಮೋಟಾರು ಶೋದಲ್ಲಿ ಅನಾವರಣಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದೆವು. ಒಟ್ಟಿನಲ್ಲಿ ಹೊಸ ವರ್ಷವು ಬೆಂಝ್ ಪಾಲಿಗೆ ಮಹತ್ವವೆನಿಸಲಿದೆ.


ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಆಲ್ ನ್ಯೂ ಎಸ್ ಕ್ಲಾಸ್ ಜನವರಿ 8ರಂದು ನವದೆಹಲಿಯಲ್ಲಿ ಲಾಂಚ್ ಆಗಲಿದೆ. ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬಹುಬೇಗನೇ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ನಿರ್ಧರಿಸಿದೆ. ಎಸ್ ಕ್ಲಾಸ್ ಹಿಂದಿನ ಆವೃತ್ತಿ ಮಾರಾಟವು ಈಗಾಗಲೇ ಮುಗಿದಿದ್ದು, ಮುಂದಿನ ಮೂರು ತಿಂಗಳೊಳಗೆ 2014 ಎಸ್ ಕ್ಲಾಸ್ ಗ್ರಾಹಕರ ಕೈಸೇರಲಿದೆ.

ಅಂದ ಹಾಗೆ ಭಾರತದಲ್ಲಿ ಆರಂಭದಲ್ಲಿ ಎಸ್500 ವೆರಿಯಂಟ್ ಮಾತ್ರ ಲಭ್ಯವಿರಲಿದೆ. ಜರ್ಮನಿಯಿಂದ ಆಮದಾಗಲಿರುವ ಈ ಕಾರು 4.7 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 449 ಬಿಎಚ್‌ಪಿ (700 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

2014 Mercedes S Class

ಇನ್ನು ದರದ ಬಗ್ಗೆ ಮಾತನಾಡುವುದಾದರೆ ಬೆಂಝ್ ಎಸ್ ಕ್ಲಾಸ್ ಎರಡು ಕೋಟಿ ರು.ಗಳಷ್ಟು ದುಬಾರಿಯಾಗಲಿದೆ. ಇನ್ನೊಂದೆಡೆ ಎಸ್ 350 ಸಿಡಿಐ ವೆರಿಯಂಟ್ 2014 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಗೆ ತಲುಪಲಿದೆ.

More from DriveSpark

Article Published On: Tuesday, December 17, 2013, 11:11 [IST]
English summary
Mercedes-Benz has decided to prepone the launch of its flagship sedan, the 2014 S-Class, in India. The new S-Class luxury sedan, which was earlier scheduled to be launched at the Indian Auto Expo in February 2014, will instead be launched in January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+