ಪೋರ್ಷೆಯಿಂದ ಅತ್ಯಂತ ಶಕ್ತಿಶಾಲಿ ಕಾರು ಲಾಂಚ್

By Nagaraja

ಜಗತ್ತಿನ ಲಗ್ಷುರಿ ಕಂಪನಿಗಳಲ್ಲಿ ಒಂದಾಗಿರುವ ಪೋರ್ಷೆ ಕಳೆದ ತಿಂಗಳಷ್ಟೇ ಭಾರತಕ್ಕೆ ಐದು ವಿಭಿನ್ನ ವೆರಿಯಂಟ್‌ಗಳನ್ನು ಲಾಂಚ್ ಮಾಡಿದ್ದವು. ಇದರಲ್ಲಿ ಪನಮೆರ ಟರ್ಬೊ, ಪನಮೆರ ಜಿಟಿಎಸ್, ಪನಮೆರ ವಿ6, ಪನಮೆರ 4 ಮತ್ತು ಪನಮೆರ ಡೀಸೆಲ್ ಪ್ರಮುಖವಾಗಿದ್ದವು.

ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಇದೀಗ ಇದಕ್ಕೊಂದು ಸೇರ್ಪಡೆಯೆಂಬಂತೆ ಅತ್ಯಂತ ಶಕ್ತಿಶಾಲಿ ನಿರ್ವಹಣೆಯ ಪನಮೆರ ಟರ್ಬೊ ಎಸ್ ವೆರಿಯಂಟನ್ನು ಪೋರ್ಷೆ ಬಿಡುಗಡೆಗೊಳಿಸಿದೆ. ಈ ಬಾರಿ ಕಾರಿನ ಹೊರಮೈ, ಒಳಮೈ ಸೇರಿದಂತೆ ತಾಂತ್ರಿಕತೆಯಲ್ಲೂ ಬದಲಾವಣೆ ಕಂಡುಬಂದಿದೆ. ಇದು ತನ್ನ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿದೆ.


ನೂತನ ಪೋರ್ಷೆ ಪನಮೆರಾ ಟರ್ಬೊ ಎಸ್ 4.8 ಲೀಟರ್ ವಿ8 ಟ್ವಿನ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 570 ಬಿಎಚ್‌ಪಿ ಪವರ್ (750 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 7 ಸ್ಪೀಡ್ ಪಿಡಿಕೆ ಡ್ಯುಯಲ್ ಕ್ಲಚ್‌ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಪಡೆದಿದೆ.

ಸಾಮಾನ್ಯ ಪನಮೆರಾ ಆವೃತ್ತಿಗೆ ಹೋಲಿಸಿದರೆ ನೂತನ ಟರ್ಬೊ ಎಸ್ ಪನಮೆರ ವೆರಿಯಂಟ್ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ. ಇದು ಕೇವಲ 3.8 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ 310 ಕೀ.ಮೀ. ಗರಿಷ್ಠ ವೇಗತೆಯಲ್ಲಿ ಚಲಿಸಲಿದೆ.

2014 Porsche Panamera

ಅಂದ ಹಾಗೆ ಪನಮೆರಾ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ವಿತರಣೆ ಕಾರ್ಯ ಮಾತ್ರ ಮುಂದಿನ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಲಿದೆ. ಇದು ಎರಡು ಕೋಟಿ ರು.ಗಿಂತಲೂ ದುಬಾರಿಯಾಗಿರಲಿದೆ.

More from DriveSpark

Article Published On: Thursday, November 14, 2013, 16:09 [IST]
English summary
Porsche has launched new Panamera Turbo S variant in Indian. New Panamera Turbo S is more powerful than previous variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+